Kannada Astrology: ಮೇಷ ರಾಶಿಯಲ್ಲಿ ಒಂದಾಗುತ್ತಿದ್ದಾರೆ ಗುರು ಹಾಗೂ ರಾಹು: ಈ ಮೂರು ರಾಶಿಗಳು ಎಚ್ಚರಿಕೆ ಇಂದ ಇರಬೇಕು. ಯಾವ್ಯಾವು ಗೊತ್ತೇ??

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಗುರು ಬೃಹಸ್ಪತಿಯ ಚಲನೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಇದೇ ಏಪ್ರಿಲ್ 22ರಂದು ಮೀನ ರಾಶಿಯಲ್ಲಿದ್ದ ಗುರು ಮೇಷ ರಾಶಿಯನ್ನು ಪ್ರವೇಶಿಸಲಿದ್ದಾನೆ.  ಹೀಗಾದಾಗ ಗುರು ರಾಹು ಯತಿಯಿಂದ ಗುರು ಚಾಂಡಾಲ ಯೋಗ ರೂಪಗೊಳ್ಳುತ್ತದೆ. ಗುರು ಗ್ರಹ ರಾಹು ಜೊತೆಗೆ ಸೇರಿ ಕೆಲವು ಗ್ರಹಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದಾನೆ ಹಾಗಾಗಿ ಈ ಕೆಳಗೆ ನಾವು ತಿಳಿಸಿದ ರಾಶಿಯವರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.  ರಾಹು ಈಗಾಗಲೇ ಮೇಷ ರಾಶಿಯಲ್ಲಿ ಇದ್ದಾನೆ ಇದೇ ಸಮಯದಲ್ಲಿ ರಾಹು ಕೂಡ ಅಲ್ಲಿಗೆ ಪ್ರವೇಶ ಮಾಡಿದಾಗ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತೇವೆ ಜ್ಯೋತಿಷ್ಯ ಶಾಸ್ತ್ರ. ಇದನ್ನೂ ಓದಿ: Siddaramaiah: ನಾನು ಹಿಂದೂ, ಆದರೆ ಹಿಂದುತ್ವ ಒಪ್ಪಲ್ಲ ಎಂದ ಸಿದ್ದುಗೆ ಮಂತ್ರಾಲಯ ಮಠದ ಶ್ರೀಗಳು ಮಾತಿನ ಚಾಟಿ ಬೀಸಿದ್ದು ಹೇಗೆ ಗೊತ್ತಾ?

ಕರ್ಕ ರಾಶಿ:

ಗುರು ರಾಹು ಮೈತ್ರಿಯಿಂದ ಕರ್ಕ ರಾಶಿಯವರಿಗೆ ನಕಾರಾತ್ಮಕ ಫಲಿತಾಂಶ ಉಂಟಾಗುತ್ತದೆ ಶತ್ರುಗಳಿಂದ ಈ ರಾಶಿಯವರು ಜಾಗರೂಕತೆಯಿಂದ ಇರಬೇಕು. ಕೆಲಸದ ಸ್ಥಳದಲ್ಲಿ ವಾಗುವ ಉಂಟಾಗಬಹುದು.  ನಿಮ್ಮ ಮಾತಿನ ಮೇಲೆ ಹಿಡಿತ ಸಾಧಿಸಿ. ಅನಗತ್ಯ ಚರ್ಚೆಯಿಂದ ದೂರ ಇರಿ.

ಮಿಥುನ ರಾಶಿ:

ಗುರು ಮತ್ತು ರಾಹುವಿನ ಸಂಯೋಗದಿಂದ  ಗುರು ಮಿಥುನ ರಾಶಿಯ ಜನರು ಮೇಲೂ ಪರಿಣಾಮ ಬೀರಲಿದ್ದಾನೆ. ಹಾಗಾಗಿ ಈ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೊಸ ಹೂಡಿಕೆ ಮಾಡುವುದನ್ನು ತಪ್ಪಿಸಿ. ಶೇರು ಮಾರುಕಟ್ಟೆ ಅಥವಾ ಲಾಟರಿ ಮೊದಲಾದ ಕಡೆ ಹೂಡಿಕೆ ಮಾಡುವುದನ್ನು ಈ ಸಮಯದಲ್ಲಿ ತಪ್ಪಿಸಿ. ಅದಕ್ಕೂ ಹೂಡಿಕೆ ಮಾಡಿದರೆ ನಷ್ಟ ಅನುಭವಿಸ ಬೇಕಾಗಬಹುದು. ಆದಾಯದಲ್ಲಿ ಇಳಿಕೆ ಉಂಟಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಲಾಟರಿಯಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಹಲವು ಬಾರಿ ಯೋಚಿಸಿ. ಹಣ ನಷ್ಟವಾಗುವ ಸಾಧ್ಯತೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಈ ಜನರ ಆದಾಯದಲ್ಲಿ ಇಳಿಕೆ ಕಂಡುಬರಲಿದೆ. ಇದರ ಒತ್ತಡವನ್ನು ಕೂಡ ಅನುಭವಿಸಬೇಕಾಗುತ್ತದೆ.

ಮೇಷ ರಾಶಿ:

ಗುರು ಮೇಷ ರಾಶಿಗೆ ಮೀನ ರಾಶಿಯಿಂದ ಪ್ರವೇಶಿಸುತ್ತಾನೆ. ಇಲ್ಲಿ ರಾಹುವಿನ ಉಪಸ್ಥಿತಿಯು ಇದೆ. ಹಾಗಾಗಿ ಮೇಷ ರಾಶಿಯವರು ಜಾಗರೂಕರಾಗಿ ಇರಬೇಕು. ಹಣದ ಕೊರತೆ ಉಂಟಾಗಬಹುದು. ಈ ರಾಶಿಯವರಿಗೆ ಸಮಸ್ಯೆಗಳನ್ನು ಆತ್ಮವಿಶ್ವಾಸ ಕುಂಠಿತ ಆಗ್ಬಹುದು. ಜೊತೆಗೆ ಆರೋಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ. ಕೆಲಸದ ಸ್ಥಳದಲ್ಲಿ ಎಚ್ಚರವಿರಲಿ. ವಾಗ್ವಾದವನ್ನು ತಪ್ಪಿಸಿ. ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯವಲ್ಲ.

ಈ ಸಮಸ್ಯೆಗಳು ಶಾಶ್ವತವಲ್ಲ. ಆದಷ್ಟು ದೇವರ ಮೊರೆ ಹೋಗಿ. ಶನಿವಾರದಂದು ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಿದರೆ ಒಳ್ಳೆಯದು. ಗರಿಕೆ ಹುಲ್ಲನ್ನು ನೀರಿಗೆ ಹಾಕಿ. ಸಂಜೆ ತುಪ್ಪದ ದೀಪವನ್ನು ದೇವರಿಗೆ ಹಚ್ಚಿ   ಭಾನುವಾರದಂದು ಕನ್ಯೆಯರಿಗೆ ಪಾಯಸ ಮತ್ತು ಸಿಹಿ ಮೊಸರು ತಿನ್ನಿಸಿದರು ಒಳಿತಾಗುತ್ತದೆ.

Comments are closed.