Inspirational Story: ಒಂದು ಕಾಲು ಇಲ್ಲದೆ ಇದ್ದರೂ ತಿಂಗಳಿಗೆ ಒಂದು ಲಕ್ಷ ಗಳಿಸುತ್ತಿರುವ ರೈತ ಬೆಳೆಯುತ್ತಿರುವ ಬೆಳೆ ಯಾವುದು ಗೊತ್ತೇ??

Inspirational Story: ಮನುಷ್ಯನಿಗೆ ಆತ್ಮವಿಶ್ವಾಸ (Confidence)  ಮುಖ್ಯ. ಅದೊಂದಿದ್ದರೆ ಏನನ್ನು ಬೇಕಾದರೂ ಸಾಧನೆ ಮಾಡಬಹುದು. ಆತ್ಮವಿಶ್ವಾಸ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆತ್ಮವಿಶ್ವಾಸ ಇದ್ದರೆ ಮನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿ ನಾಲ್ಕು ಜನರಿಂದ ಪ್ರಶಂಸೆ ಗಳಿಸಬಹುದು. ಉತ್ತರ ಪ್ರದೇಶ (UttaraPradesh) ದ ರೈತ (Farmer) ನೊಬ್ಬ ಒಂದು ಕಾಲು ಇಲ್ಲದಿದ್ದರೂ ಅಣಬೆ ಬೇಸಾಯ (Mushroom cultivation) ಮಾಡಿ ರೈತರಿಗೆ ಮಾದರಿಯಾಗಿದ್ದಾನೆ. ಇಂತಹ ರೈತರ ಜೀವನಗಾಥೆ  ನೀವು ತಿಳಿದುಕೊಳ್ಳಬೇಕು.

ಉತ್ತರ ಪ್ರದೇಶ ರಾಜ್ಯದ ಮಿರ್ಜಾಪುರ (Mirjapur) ಜಿಲ್ಲೆಯ ವಿಶೇಷ ಚೇತನ ಯುವಕನೊಬ್ಬ ಅಣಬೆ ಬೇಸಾಯ ಮಾಡಿ ಇಡೀ ಜಿಲ್ಲೆಗೆ ಮಾದರಿ ರೈತ ಎನಿಸಿಕೊಂಡಿದ್ದಾನೆ. ಧೈರ್ಯ, ಛಲದಿಂದ ತನ್ನ ಕುಟುಂಬದ ನಿರ್ವಹಣೆಯನ್ನು ತಾನೆ ಮಾಡುವ ಮೂಲಕ ನಾಲ್ಕು ಜನರಿಗೆ ಮಾರ್ಗದರ್ಶಿಯಾಗಿದ್ದಾನೆ. ಇದನ್ನೂ ಓದಿ: Gold Rate: ಕೊನೆಗೂ ಕಡಿಮೆಯಾದ ಚಿನ್ನ ಬೆಲೆ; ಎಷ್ಟಾಗಿದೆ ಗೊತ್ತೇ?? ಚಿಲ್ಲರೆ ಹಣಕ್ಕೆ ಸಿಗುತ್ತಿದೆ ಚಿನ್ನ, ಹೋಗಿ ಇಂದೇ ಖರೀದಿ ಮಾಡಿ.

ಈ ರೈತನ ಹೆಸರು ಬಸಂತ್ (Basanth). ಈತನಿಗೆ ಹುಟ್ಟುತ್ತಲೇ ಪೊಲೀಯೋ (Polio) ರೋಗ ಬಂದಿದ್ದರಿಂದ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡಿದ್ದಾನೆ. ಇವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಎಷ್ಟು ಬಡತನವಿತ್ತು ಎಂದರೆ ಕೆಲವೊಮ್ಮೆ ಮನೆಯವರೆಲ್ಲರೂ ಗಂಜಿ ಕುಡಿದು ಜೀವನ ಸಾಗಿಸುವ ಪರಿಸ್ಥಿತಿ ಇತ್ತು. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಬಸಂತ್ ಬಿಎ (BA Degree)  ಪದವಿ ಪಡೆದಿದ್ದಾನೆ. ಸರ್ಕಾರಿ ಐಟಿಐ ಕಾಲೇಜಿ (Govt. IIT College) ನಲ್ಲಿ ಪದವಿ ವ್ಯಾಸಂಗ ಪೂರೈಸಿದ್ದಾನೆ. ಇದಾದ ಬಳಿಕ ಜೀವನ ಕಟ್ಟಿಕೊಳ್ಳುವ ಸಲುವಾಗಿ ಹಲವು ಕಡೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದ್ದಾನೆ. ಆದರೆ ಸಿಕ್ಕಿಲ್ಲ. ಇದನ್ನೂ ಓದಿ: Kanteerava Studio: ಕರುನಾಡ ಒಂದು ಕಾಲದ ಟಾಪ್ ನಟ ಅಣ್ಣಾವ್ರ ಕುಟುಂಬದವರನ್ನು ಯಾಕೆ ಕಂಠೀರವ ಸ್ಟುಡಿಯೋ ದಲ್ಲಿ ಸಮಾಧಿ ಮಾಡುತ್ತಾರೆ ಗೊತ್ತೇ?? ಕಾರಣವೇನು ಗೊತ್ತೇ?

ಮನೆಯ ಸುತ್ತಮುತ್ತಲಿನವರೆಲ್ಲ ಬಸಂತ್ ಅವರನ್ನು ನೋಡಿ ಆಡಿಕೊಳ್ಳುತ್ತಿದ್ದರು. ಬಸಂತ್ನನ್ನು ಲೇವಡಿ ಮಾಡುತ್ತಿದ್ದರು. ಆದರೆ ಬಸಂತ್ ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಒಮ್ಮೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಲುವಾಗಿ ಬಸಂತ್ ರಾಂಚಿಗೆ ಹೋಗಬೇಕಾಗಿತ್ತು. ಹೀಗೆ ತೆರಳುವ ವೇಳೆ ಅಣಬೆ ಕೃಷಿ ಮಾಡುವುದನ್ನು ನೋಡಿದ್ದಾನೆ. ಆ ಅಣಬೆ ಕೃಷಿಕರನ್ನು ಮಾತನಾಡಿಸಿ ಅಣಬೆ ಕೃಷಿ ಮಾಡುವ ಕುರಿತು ಮಾಹಿತಿ ಪಡೆದುಕೊಂಡನು. ಇದರಿಂದ ಅಣಬೆ ಕೃಷಿ ಮಾಡುವತ್ತ ಒಲವು ತೋರಿದ.

ಬಸಂತ್ ಅಣಬೆ ಕೃಷಿಯನ್ನು ಪ್ರಾರಂಭಿಸುವ ಮುನ್ನ ರಾಂಚಿಯ ಐಐಬಿಆರ್ನಿಂದ ಅಣಬೆ ಕೃಷಿಯ ಕುರಿತು ತರಬೇತಿ ಪಡೆದುಕೊಂಡನು. ನಂತರ ಅಣಬೆ ಕೃಷಿಯಲ್ಲಿ ತೊಡಗಿಕೊಂಡಿದ್ದಾನೆ. ಮೊದಲು ಮೊದಲು ಮಾರುಕಟ್ಟೆಯಲ್ಲಿ ಅಷ್ಟೊಂದು ಲಾಭ ಸಿಗಲಿಲ್ಲ. ಕ್ರಮೇಣ ಲಾಭ ಬರುತ್ತಾ ಹೋಯಿತು.

ಇಂದು ಬಸಂತ್ ತನ್ನ ಎಲ್ಲ ಕೆಲಸಗಳನ್ನು ತಾನೆ ಮಾಡಿಕೊಳ್ಳುತ್ತಾನೆ. ಅಲ್ಲದೆ ಮನೆಯ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು ನಡೆಸಿಕೊಂಡು ಹೋಗುತ್ತಿದ್ದಾನೆ.

ಇದೀಗ ಬಸಂತ್ ಒಂದು ಹೆಜ್ಜೆ ಮುಂದೆ ಹೋಗಿ ಅಣಬೆ ಪುಡಿಯನ್ನು ಮಾಡಿ ಮಾರಾಟ ಮಾಡತೊಡಗಿದ್ದಾನೆ. ಇದರಿಂದಾಗಿ ಬರುವಂತಹ ಆದಾಯ ದ್ವಿಗುಣಗೊಂಡಿದೆ. ಇತನ ಆದಾಯ ವಾರ್ಷಿಕವಾಗಿ ೧.೫ ಲಕ್ಷ ರೂ.ನಿಂದ ೨ ಲಕ್ಷ ರೂ. ಆಗಿದೆ. ಇದು ಆರಂಭ. ಇನ್ನು ಮುಂದೆ ೫ ಲಕ್ಷ ರೂ. ವರೆಗೂ ಆದಾಯ ಗಳಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ಬಸಂತ್ ಹೇಳಿಕೊಳ್ಳುತ್ತಾರೆ.

Comments are closed.