Actor Duniya Vijay: ದುನಿಯಾ ವಿಜಯ್ ಸಿನೆಮಾಗೆ ಬಂದಿರುವ ಈ ನಟಿ, ನಿಜ ಜೀವನದಲ್ಲಿ ಹೇಗಿದ್ದಾರೆ ಗೊತ್ತೇ? ನೋಡಿ ಹಂಗೇ ಎದ್ದು ನಿಂತು ಕೊಳ್ತೀರಾ

Actor Duniya Vijay: ಕನ್ನಡ ಚಿತ್ರರಂಗ (Kannada Film Industry)  ಇಂದು ವಿಶ್ವವೇ ತಿರುಗಿ ನೋಡುವಷ್ಟರ ಮಟ್ಟಿಗೆ ಬೆಳೆದಿದೆ. ಯಾವ ಮಟ್ಟಕ್ಕೆ ಬೆಳೆದಿದೆ ಎಂದು ಕೇಳಿದರೆ ಪರಭಾಷಿಕರೂ ಕೂಡ ಅದರಲ್ಲೂ ಬಿಗ್ ಬಜೆಟ್ ಸಿನೆಮಾ (Big Budget Film)ಗಳನ್ನು ಮಾಡುತ್ತೇನೆ ಎಂದು ಹೇಳಿಕೊಳ್ಳುವ ಬಾಲಿವುಡ್ನವರು ಕೂಡಾ ಕನ್ನಡದ ದೊಡ್ಡ ಸಿನೆಮಾಗಳು ಬಿಡುಗಡೆ ಆಗುತ್ತದೆ ಎಂದರೆ ತಮ್ಮ ಸಿನೆಮಾ ಬಿಡುಗಡೆ ಮುಂದುಡುವಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗ ಬೆಳೆದು ನಿಂತಿದೆ. ಈ ವರ್ಷದ ಬಹು ನಿರೀಕ್ಷಿತ ಸಿನೆಮಾಗಳಲ್ಲಿ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಭೀಮ (Bheema) ಸಿನೆಮಾ ಕೂಡ ಒಂದಾಗಿದೆ.

ದುನಿಯಾ ವಿಜಯ್ ಅವರು ನಿರ್ದೇಶಿಸಿರುವ ಸಲಗ (Salaga) ಸಿನೆಮಾವು ಸಿಕ್ಕಾಪಟ್ಟೆ ಹಿಟ್ ಆಗಿದ್ದರಿಂದ ಭೀಮ ಸಿನೆಮಾದ ಮೇಲೆ ನಿರೀಕ್ಷೆ ಸಹಜವಾಗಿಯೇ ಹೆಚ್ಚಾಗಿದೆ. ಈಗಾಗಲೇ ದುನಿಯಾ ವಿಜಯ್ ಅವರು ತೆಲುಗು ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲಿಯೂ ದುನಿಯಾ ವಿಜಯ್ ಅವರಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ತೆಲುಗಿನ ಸ್ಟಾರ್ ನಟ ಬಾಲಕೃಷ್ಣ (Balakrishna) ಅವರ ವೀರ ಸಿಂಹಾರೆಡ್ಡಿ ಸಿನೆಮಾದಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಅವರು ಅಬ್ಬರಿಸಿದ್ದಾರೆ. ಹಾಗಾಗಿ ದುನಿಯಾ ವಿಜಯ್ ಅವರಿಗೆ ತೆಲುಗಿನಲ್ಲಿಯೂ ಬೇಡಿಕೆ ಹೆಚ್ಚಾದರೆ ಅಚ್ಚರಿಯೇನಿಲ್ಲ. ಇದನ್ನೂ ಓದಿ: Political News: ಮನಸ್ಸಿಗೆ ಬಂದಂತೆ ಮತ್ತಷ್ಟು ಬಿಟ್ಟಿ ಘೋಷಣೆ ಮಾಡಿದ ಸಿದ್ದರಾಮಯ್ಯ. ಈ ಬಾರಿ ಅದೆಷ್ಟು ಲಕ್ಷಗಳ ಭರವಸೆ ಗೊತ್ತೇ??

ಭೀಮ ಸಿನೆಮಾ ಕಳೆದ ವರ್ಷ ಸೆಟ್ಟೇರಿತ್ತು. ಈ ಸಿನೆಮಾದಲ್ಲಿ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ಆದರೆ ದುನಿಯಾ ವಿಜಯ್ ಅವರು ಇದುವರೆಗೆ ಭೀಮ ಸಿನೆಮಾದ ನಾಯಕನಟಿ ಯಾರು ಎನ್ನುವುದನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ. ಆದರೆ ಪ್ರೇಮಿಗಳ ದಿನವಾದ ಇಂದು ಭೀಮ ಸಿನೆಮಾದ ಹಿರೋಯಿನ್ ಹೆಸರನ್ನು ರಿವಿಲ್ ಮಾಡಿದ್ದಾರೆ. ಭೀಮ ಸಿನೆಮಾದ ನಾಯಕಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ. ಅಶ್ವಿನಿ ಅವರು ರಂಗಭೂಮಿ ಕಲಾವಿದೆಯಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ತತ್ಕಾಲ ರಂಗತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರಂಗಭೂಮಿಯ ಅನುಭವದೊಂದಿಗೆ ಅಶ್ವಿನಿ ಅವರು ಸಿನೆಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ: Benefits of Camphor: ಜಸ್ಟ್ ಒಂದು ಕರ್ಪೂರ ತೆಗೆದುಕೊಂಡ ಈ ಚಿಕ್ಕ ಕೆಲಸ ಮಾಡಿ ಸಾಕು, ನಿಮ್ಮ ಜೀವನವೇ ವಜ್ರವಾಗಿ ಬದಲಾಗಿ ಬಿಡುತ್ತದೆ. ಏನು ಮಾಡಬೇಕು ಗೊತ್ತೇ??

ಭೀಮ ಸಿನೆಮಾದಲ್ಲಿಯೂ ನಾಯಕನಟಿಗೆ ಅದ್ಬುತವಾದ ಪಾತ್ರವಿದೆ. ಇದನ್ನು ಅಶ್ವಿನಿ ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ದುನಿಯಾ ವಿಜಯ್ ಅವರು ಅಶ್ವಿನಿ ಅವರ ಪಾತ್ರದ ಪೋಸ್ಟರ್ ಇಂದು ರಿವಿಲ್ ಮಾಡಿದ್ದಾರೆ.

Comments are closed.