Duniya Vijay Bheema Heroine: ನನ್ ಕಲರ್ ಗೆ ಮ್ಯಾಚ್ ಆಗೋ ಹುಡುಗಿಯನ್ನೇ ನಾಯಕಿ ಮಾಡಿದ್ದೇನೆ ಎಂದ ಕರಿ ಚಿರತೆ ವಿಜಯ್; ಭೀಮಾ ಸಿನಿಮಾದ ಹಿರೋಯಿನ್ ನೋಡಿ ವಿಜಯ್ ಪತ್ನಿ ಕೀರ್ತಿ ಹೇಳಿದ್ದೇನು ಗೊತ್ತಾ? ಯಬ್ಬಾ!

Duniya Vijay Bheema Heroine: ಕನ್ನಡ ಚಿತ್ರರಂಗ (Kannada Film Industry) ದ ಈ ವರ್ಷದ ಮೋಸ್ಟ್ ಎಕ್ಸಪೆಕ್ಟೆಡ್ (Most expected film) ಸಿನೆಮಾಗಳಲ್ಲಿ ದುನಿಯಾ ವಿಜಯ್ ಅವರು ನಿರ್ದೇಶಿಸಿ ನಟಿಸುತ್ತಿರುವ ಭೀಮ ಸಿನೆಮಾವು ಒಂದಾಗಿದೆ. ಈ ಸಿನೆಮಾ ಸೆಟ್ಟೇರಿದ ದಿನದಿಂದ ಅಭಿಮಾನಿಗಳಲ್ಲಿ ಒಂದು ರೀತಿಯ ಹೈಪ್ ಕ್ರಿಯೇಟ್ ಮಾಡಿದೆ. ಮೊನ್ನೆ ಪ್ರೇಮಿಗಳ ದಿನದಂದು ದುನಿಯಾ ವಿಜಯ್ ಅವರು ಭೀಮ ಸಿನೆಮಾದ ನಾಯಕ ನಟಿಯ ಹೆಸರು ಹಾಗೂ ಪೋಸ್ಟರ್ (poster) ರಿಲೀಸ್ ಮಾಡಿದ್ದಾರೆ. ಇದರಿಂದಾಗಿ ಈ ಸಿನೆಮಾದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ.

ಈ ಸಿನೆಮಾದ ಕುರಿತು ಸ್ವತಃ ದುನಿಯಾ ವಿಜಯ್ ಅವರು ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದು ಅದರಲ್ಲಿ ಈ ಸಿನೆಮಾದ ಹಿರೋಯಿನ್ ಆಯ್ಕೆ ಯಾವ ರೀತಿ ನಡೆಯಿತು ಎನ್ನುವ ಬಗ್ಗೆ ತಿಳಿಸಿದ್ದಾರೆ.

ದುನಿಯಾ ವಿಜಯ್ ಅವರು ಮಾತನಾಡಿ, ಈ ಸಿನೆಮಾ ಸೆಟ್ಟೇರಿದ ಬಳಿಕ ಈ ಸಿನೆಮಾದ ನಾಯಕನಟಿಯಾಗಿ ತುಂಬಾನೇ ಹುಡುಕಾಟ ನಡೆಸಿದ್ದೇವೆ. ಈ ಸಿನೆಮಾದ ಕಥೆಗೆ ಸರಿಯಾಗಿ ಹೊಂದಿಕೊಳ್ಳುವ ನಟಿಗಾಗಿ ಆರೆಳು ತಿಂಗಳ ಕಾಲ ಹುಡುಕಿದ್ದೇನೆ. ನಂತರ ರಂಗಭೂಮಿ ಕಲಾವಿದೆ ಆಗಿರುವ ಅಶ್ವಿನಿ ಅವರು ಸಿಕ್ಕಿದರು. ನಾನು ಪ್ರತಿದಿನ, ಪ್ರತಿಕ್ಷಣ ನನ್ನ ಸಿನೆಮಾ ಬಗ್ಗೆಯೇ ಯೋಚನೆ ಮಾಡುತ್ತಿರುತ್ತೇನೆ. ಯಾರಾದರೂ ಕಲಾವಿದರನ್ನು ನೋಡಿದರೆ ಇವರು ನಮ್ಮ ಸಿನೆಮಾ ಕಥೆಗೆ ಹೊಂದಾಣಿಕೆ ಆಗಬಹುದೇ ಎಂದು ಯೋಚನೆ ಮಾಡುತ್ತೇನೆ. ನಾಯಕ ನಟಿ ಎಂದರೆ ಕೇವಲ ಗ್ಲಾಮರ್ಗೆ ಸೀಮಿತವಲ್ಲ. ಕೇವಲ ಏರೋಬಿಕ್ಸ್, ಕೇವಲ ಜಿಮ್ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಆಕೆ ಪಾತ್ರದಲ್ಲಿ ಜೀವಿಸಬೇಕು. ಯಾವುದೇ ರೀತಿಯ ಅಭಿನಯ ಹೇಳಿದರೂ ಮಾಡಲು ಸಿದ್ದವಿರಬೇಕು ಎಂದು ಹೇಳಿದ್ದಾರೆ.

ಭೀಮ ಸಿನೆಮಾಗಾಗಿ ನನ್ನ ಹಲವರು ಗೆಳೆಯರು, ನಿರ್ಮಾಪಕರು ನಾಯಕ ನಟಿಯನ್ನು ಸಲಹೆ ನೀಡಿದ್ದಾರೆ. ಸುಮಾರು ೩೦ಕ್ಕೂ ಅಧಿಕ ಜನರನ್ನು ನಾನು ಸಂದರ್ಶನ ಮಾಡಿದ್ದೇನೆ. ಆದರೆ ಅವರ್ಯಾರು ಭೀಮ ಸಿನೆಮಾ ಕಥೆಗೆ ಸೂಟ್ ಅನ್ನಿಸಲಿಲ್ಲ. ಆದ್ದರಿಂದ ರಿಜೆಕ್ಟ್ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ನಟಿ ಅಶ್ವಿನಿ ಅವರ ಬಣ್ಣ, ಅವರು ರಂಗಭೂಮಿ ಕಲಾವಿದೆ. ರಂಗಭೂಮಿಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆ ಅವರು ಎಂಬಿಎ ಅಧ್ಯಯನ ಮಾಡಿದ್ದಾರೆ. ಇವೆಲ್ಲವೂ ನನಗೆ ಬಹಳ ಇಷ್ಟವಾಯಿತು. ನನಗೆ ಪಕ್ಕದ ಮನೆಯ ಹುಡುಗಿ ತರಹ ಕಾಣಿಸುವ ನಾಯಕಿಯ ಅವಶ್ಯಕತೆ ಇತ್ತು. ಈ ಎಲ್ಲ ಗುಣಗಳನ್ನು ಅಶ್ವಿನಿ ಅವರಲ್ಲಿ ಇದ್ದುದರಿಂದ ಅವರನ್ನು ಭೀಮ ಸಿನೆಮಾಗೆ ನಾಯಕ ನಟಿಯಾಗಿ ಆಯ್ಕೆ ಮಾಡಿದ್ದೇನೆ ಎಂದು ವಿಜಯ್ ಅವರು ತಿಳಿಸಿದ್ದಾರೆ.

Comments are closed.