House Constriction: 40 ಲಕ್ಷ ರೂ. ಗಳಲ್ಲಿ ನಿರ್ಮಿಸಿ ಬಂಗಲೆಯಂಥ ಮನೆ; 2 ಪ್ಲೋರ್, 4 BHK, 1RK, ಪಕ್ಕಾ ಪೈಸಾ ವಸೂಲ್ ಮನೆ!

House Constriction: ಒಬ್ಬ ಮನುಷ್ಯನಿಗೆ ಇರುವ ಆಸೆಯೆಂದರೆ ತಾವೊಂದು ಸ್ವಂತ ಮನೆ ಹೊಂದಬೆಕೆಂಬುದು. ಇದಕ್ಕಾಗಿಯೇ ದುಡಿದ ಹಣದಲ್ಲಿ ಕೂಡಿಡುತ್ತಾ ಹೋಗುತ್ತಾನೆ. ಅಲ್ಲದೆ ಇದರ ಜೊತೆ ಸಾಲವನ್ನು ಮಾಡಿಯಾದರೂ ಒಂದು ಮನೆಯನ್ನು ಕಟ್ಟಲು ಬಯಸುತ್ತಾನೆ. ಮನೆ ಕಟ್ಟಬೇಕಾದರೆ ಸುಲಭದ ಮಾತಾಗುವುದಿಲ್ಲ ಪ್ರತಿಯೊಂದು ವಿಚಾರದ ಮಾಹಿತಿ ಇರಬೇಕಾಗುತ್ತದೆ. ಅಂದಾಗ ಮಾತ್ರ ಕಡಿಮೆ ದರದಲ್ಲಿ ಉತ್ತಮ ಮನೆ ನಿರ್ಮಾಣ ಮಾಡಬಹುದಾಗಿದೆ. 30*40 ಸೈಟಿನಲ್ಲಿ ಕಡಿಮೆ ದರದಲ್ಲಿ ಮನೆ ಕಟ್ಟಬಹುದು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಒಂದು ಮನೆಯನ್ನು 9 ತಿಂಗಳಿನಲ್ಲಿ ಕಟ್ಟಲಾಗಿದೆ. ಈ ಮನೆಯನ್ನು ಕೇವಲ 40 ಲಕ್ಷ ರೂ.ನಲ್ಲಿ ನಿರ್ಮಾಣ ಮಾಡಲಾಗಿದೆ. ಮನೆಯ ಮುಂದಿನ ಗೇಟನ್ನು ಸಿಎನ್ಸಿ ಕಟಿಂಗ್ನಲ್ಲಿ ಮಾಡಲಾಗಿದೆ. ಈ ಗೇಟು 5 ಫೀಟ್ ಎತ್ತರವಾಗಿದೆ. ಮನೆಯ ಮುಂದಿನ ಭಾಗದಲ್ಲಿ ಪೆರಗೋಲಾ ಅಳವಡಿಸಲಾಗಿದೆ. ಈ ರೀತಿ ಅಳವಡಿಸುವುದರಿಂದ ಮನೆ ಲುಕ್ ಹೆಚ್ಚಾಗುತ್ತದೆ. ಮನೆಯ ಅಂಗಳವು 11.30 ಅಗಲವಾಗಿದೆ. ಈ ರೀತಿ ಮಾಡುವುದರಿಂದ ವಾಹನಗಳನ್ನು ನಿಲ್ಲಿಸಲು ಬಹಳ ಅನುಕೂಲವಾಗಲಿದೆ. ಇಲ್ಲಿ ಬಳಸಿರುವ ಟೈಲ್ಸ್ ಸ್ಕ್ವೇರ್ ಫೀಟ್ಗೆ 30 ರೂ. ಆಗಿದೆ. ಅಲ್ಲದೆ ಮನೆಯ ಮುಂಭಾಗದಲ್ಲಿ ಯುಪಿವಿಸಿ ಕಿಡಕಿ ಬಳಸಲಾಗಿದೆ. ಮನೆಯ ಮುಂದೆ 8 ಇಂಚು ಎತ್ತರದ ಮೆಟ್ಟಿಲನ್ನು ನಿರ್ಮಾಣ ಮಾಡಲಾಗಿದೆ. ಮನೆಯ ಕಂಬಗಳಿಗೂ ಟೈಲ್ಸ್ ಬಳಕೆ ಮಾಡಲಾಗಿದೆ. ಈ ಟೈಲ್ಸ್ ಒಂದು ಸ್ಕ್ವೆರ್ ಫೀಟ್ಗೆ 90  ರೂ. ವರೆಗೂ ಆಗಲಿದೆ. ಇದನ್ನೂ ಓದಿ:

ಮನೆಯ ಪ್ರಧಾನ ಬಾಗಿಲಿಗೆ ಗಾನಾಟಿಕ್ ವುಡ್ ಬಳಸಲಾಗಿದೆ. ಮನೆಯ ಬಾಗಿಲು, ಅದಕ್ಕೆ ಬಳಸಿರುವ ಪಟ್ಟಿ ಎಲ್ಲವೂ ಸೇರಿ ಸುಮಾರು 30 ಸಾವಿರ ರೂ. ವರೆಗೆ ಆಗಲಿದೆ. ಇನ್ನು ಮನೆಯ ಒಳಗೆ ಬಳಸಿರುವ ಟೈಲ್ಸ್ ವೆಟ್ರಿಫೈಲ್ಸ್ ಟೈಲ್ಸ್ ಬಳಕೆ ಮಾಡಲಾಗಿದೆ. ಇದರ ದರವು 53ರೂ. ಆಗಲಿದೆ. ಈ ಮನೆಯ ಒಳಾಂಗಣವು ೧೦.೫ ಅಡಿ ಅಗಲ ಹಾಗೂ 10.5 ಅಡಿ ಉದ್ದವಿದೆ.

ಇನ್ನು ಅಡಿಗೆ ಮನೆಗೆ ಬಂದರೆ ಅಡಿಗೆ ಮನೆಯೂ 11.5 ಅಡಿ ಉದ್ದ ಹಾಗೂ ೧೧.೫ ಅಡಿ ಅಗಲಿವೆ. ಅಡುಗೆ ಮನೆ ಕಟ್ಟೆಗೆ ಗ್ಯಾಲೆಕ್ಸಿ ಟೈಲ್ಸ್ ಬಳಕೆ ಮಾಡಲಾಗಿದೆ. ಅಲ್ಲದೆ ಅಡುಗೆ ಮನೆಯ ಸಾಮಾಗ್ರಿಗಳನ್ನು ಇಟ್ಟುಕೊಳ್ಳಲು ಕಪಾಟುಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಯ ಬಾತರೂಂ 5.5 ಅಡಿ ಉದ್ದ ಹಾಗೂ 5.5 ಅಡಿ ಅಗಲವಿದೆ. ಇದಕ್ಕೆ ಬೇಕಾಗುವ ನಳ ಹಾಗೂ ಉಳಿದ ಸಾಮಗ್ರಿಗಳನ್ನು ನೀವೆ ಒದಗಿಸಿದರೆ ಆದಷ್ಟು ಕಡಿಮೆ ದರದಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು. ಬಾತರೂಂ ಬಾಗಿಲಿಗೆ ಪಿವಿಸಿ ಡೋರ್ಗಳನ್ನು ಬಳಕೆ ಮಾಡಲಾಗಿದೆ.

ಇನ್ನು ಮಲಗುವ ಕೋಣೆಯ ವಿಚಾರಕ್ಕೆ ಬಂದರೆ ಈ ಕೊಣೆಯು 9.5 ಅಡಿ ಉದ್ದ ಹಾಗೂ 9.5 ಅಡಿ ಅಗಲವಾಗಿದೆ. ಅಲ್ಲದೆ ಎರಡು ಕಿಡಕಿಗಳನ್ನು ಮಾಡಲಾಗಿದೆ. ಇದರಿಂದ ಗಾಳಿ-ಬೆಳಕು ಬರಲು ಸುಲಭವಾಗುತ್ತದೆ.  ಮನೆಯ ಸಂಪೂರ್ಣ ವಿದ್ಯುತ್ ಬಳಕೆಗಾಗಿ ಫಿನೋಲೆಕ್ಸ್ ವೈಯರ್ ಹಾಗೂ ಎಂಕರ್ ರೋಮಾ ಸ್ವಿಚ್ಚ ಬೋರ್ಡ್ ಬಳಕೆ ಮಾಡಲಾಗಿದೆ. ಅಲ್ಲದೆ ಎಲ್ಲ ಕಡೆ ಒಂದೇ ರೀತಿಯ ಟೈಲ್ಸ್ ಬಳಕೆ ಮಾಡಲಾಗಿದೆ.

ಹೀಗೆ ಮನೆ ನಿರ್ಮಾಣ ಮಾಡುವ ವೇಳೆ ಬುದ್ದಿವಂತಿಕೆಯಿಂದ ಕಡಿಮೆ ದರದ ಹಾಗೂ ಉತ್ಕೃಷ್ಟ ಕ್ವಾಲಿಟಿ ವಸ್ತುಗಳನ್ನು ಬಳಕೆ ಮಾಡುವುದರಿಂದ ಮನೆ ನಿರ್ಮಾಣದ ವೆಚ್ಚ ತಗ್ಗಿಸಬಹುದು.

Comments are closed.