Maha Shivaratri 2023: ಮಹಾಶಿವರಾತ್ರಿ ಎಂದು ಉಪವಾಸ ಮಾಡಿದರೆ ಮುಗಿಲಿಲ್ಲ, ಈ ಮೂರು ಕೆಲಸ ಮಾಡಿದರೆ ಮಾತ್ರ ನಿಮ್ಮ ಜೀವನದ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತೆ, ಏನು ಮಾಡಬೇಕು ಗೊತ್ತಾ?

Maha Shivaratri 2023: ಹಿಂದೂ ಧರ್ಮ (Hindu Dharma) ದಲ್ಲಿ ಮಹಾಶಿವರಾತ್ರಿಗೆ ಬಹಳ ಮುಖ್ಯವಾದ ಸ್ಥಾನ ನೀಡಲಾಗಿದೆ. ಬಹಳ ವಿಜೃಂಭಣೆಯಿಂದ ಮಹಾಶಿವರಾತ್ರಿಯನ್ನ ಆಚರಿಸಲಾಗುತ್ತದೆ. ರಾತ್ರಿ ಇಡೀ ಎಚ್ಚರವಿದ್ದು ಉಪವಾಸ ಮಾಡಿ ಶಿವನನ್ನ ಆರಾಧಿಸಲಾಗುತ್ತದೆ ಶಿವರಾತ್ರಿಯಂದು ಜಾಗರಣೆ ಹಾಗೂ ಉಪವಾಸ ಬಹಳ ಮುಖ್ಯವಾದ ವಿಧಿ ವಿಧಾನ. ಈ ದಿನ ಭಕ್ತಾದಿಗಳು ಶಿವನನ್ನ ನಾನಾ ರೀತಿಯಲ್ಲಿ ಪೂಜಿಸುತ್ತಾರೆ. ಶಿವರಾತ್ರಿಯ ರುದ್ರಾಭಿಷೇಕಕ್ಕೆ ಬಹಳ ಮಹತ್ವವಿದೆ. ಶಿವರಾತ್ರಿ ಅಂದು ಭಕ್ತರು ಕೇಳಿದ ಎಲ್ಲಾ ವರವನ್ನು ಶಿವ ದಯಪಾಲಿಸುತ್ತಾನೆ ಎನ್ನುವ ನಂಬಿಕೆ ಇದೆ ಹಾಗಾಗಿ ಶಿವರಾತ್ರಿಯ ದಿನ ಉಪವಾಸ ಮಾಡುವವರು ಈ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಇಲ್ಲವಾದರೆ ಶಿವರಾತ್ರಿ ಉಪವಾಸದ ಪೂರ್ಣ ಫಲ ಸಿಗುವುದಿಲ್ಲ ಜೊತೆಗೆ ಶಿವನ ಕೃಪೆಯು ಕೂಡ ಸಿಗುವುದಿಲ್ಲ. ಇನ್ನು ಎರಡು ದಿನಗಳಲ್ಲಿ ಮಹಾಶಿವರಾತ್ರಿ. ಅಂದರೆ ಫೆಬ್ರುವರಿ 18 ಶನಿವಾರ ಶಿವರಾತ್ರಿ ನಡೆಯಲಿದೆ. ಹಾಗಾದರೆ ಶಿವರಾತ್ರಿ ದಿನ ಏನು ಮಾಡಬೇಕು ನೋಡೋಣ. ಇದನ್ನೂ ಓದಿ: Rashmika- Vijay Trip: ಕೊನೆ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ವಿಜಯ್ ದೇವರಕೊಂಡ ಮನೆಯವರು: ರಶ್ಮಿಕಾ ಗೆ ಕೊನೆಗೂ ಸಿಕ್ಕೇ ಬಿಡ್ತಾ ಸಿಹಿ ಸುದ್ದಿ. ಏನಾಗಿದೆ ಗೊತ್ತೆ??

ಉಪವಾಸವೃತ:

ಶಿವರಾತ್ರಿಯಂದು ಉಪವಾಸ ಹಾಗೂ ಜಾಗರಣೆ ಸಾಮಾನ್ಯ. ಉಪವಾಸದ ಪೂರ್ಣ ಫಲ ಸಿಗಬೇಕು ಅಂದ್ರೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ. ನಂತರ ಕೈಯಲ್ಲಿ ಸ್ವಲ್ಪ ನೀರು ಹಾಗೂ ಅಕ್ಕಿ ಕಾಳನ್ನ ತೆಗೆದುಕೊಂಡು ಶಿವನ ಮುಂದೆ ಉಪವಾಸ ಮಾಡುವ ಸಂಕಲ್ಪ ಮಾಡಬೇಕು. ನೀವು ಉಪವಾಸವನ್ನು ಯಾವ ರೀತಿ ಮಾಡುತ್ತೀರಿ ಎನ್ನುವುದನ್ನು ಭೋಲೆನಾಥನ ಬಳಿ ಹೇಳಿಕೊಳ್ಳಿ ಕೆಲವರು ಹಣ್ಣು ಅಥವಾ ಫಲಹಾರ ತಿಂದು ಉಪವಾಸ ಮಾಡಿದರೆ ಇನ್ನೂ ಕೆಲವರು ಆಹಾರವನ್ನೇ ಸೇವಿಸುವುದಿಲ್ಲ ನಿಮ್ಮ ಸಂಕಲ್ಪವನ್ನು ನೀವು ಯಾವ ರೀತಿ ಮಾಡುತ್ತೀರಿ ಎಂಬುದರ ಮೇಲೆ ನಿರ್ಧಾರ ಮಾಡಿಕೊಳ್ಳಿ.

maha shivaratri 2023 upavasa 1 | Live Kannada News
Maha Shivaratri 2023: ಮಹಾಶಿವರಾತ್ರಿ ಎಂದು ಉಪವಾಸ ಮಾಡಿದರೆ ಮುಗಿಲಿಲ್ಲ, ಈ ಮೂರು ಕೆಲಸ ಮಾಡಿದರೆ ಮಾತ್ರ ನಿಮ್ಮ ಜೀವನದ ಅದೃಷ್ಟದ ಬಾಗಿಲು ತೆರೆದುಕೊಳ್ಳುತ್ತೆ, ಏನು ಮಾಡಬೇಕು ಗೊತ್ತಾ? https://sihikahinews.com/2023/02/16/maha-shivaratri-2023-upavasa/

ಇನ್ನು ಮಹಾ ಶಿವರಾತ್ರಿಯ ಉಪವಾಸ ಮಾಡುವವರ ಮನಸ್ಸು ಮೊದಲು ಶುದ್ಧವಾಗಿರಬೇಕು ಮನಸ್ಸಿನಲ್ಲಿ ಯಾವ ಕೆಟ್ಟ ಆಲೋಚನೆಗಳನ್ನು ಕೂಡ ಮಾಡಬಾರದು. ಯಾರ ಬಗ್ಗೆಯೂ ಯಾರ ಬಳಿಯೂ ಕೆಟ್ಟದಾಗಿ ಮಾತನಾಡಬಾರದು ಯಾರನ್ನು ಅವಮಾನ ಮಾಡಬಾರದು ದಿನವಿಡೀ ಸದ್ಗುಣಶೀಲ ಸನ್ನಡತೆಯನ್ನು ತೋರಿಸಿದರೆ ಆ ಶಿವನು ಕೂಡ ನಿಮ್ಮ ನಡವಳಿಕೆಯನ್ನು ಮೆಚ್ಚಿಕೊಳ್ಳುತ್ತಾನೆ. ಇದನ್ನೂ ಓದಿ: Jagapathi Babu: ದರ್ಶನ್ ಸಿನೆಮಾದಲ್ಲಿ ಅವಕಾಶ ಪಡೆದಿರುವ ಜಗಪತಿ ಬಾಬು ಪರಿಸ್ಥಿತಿ ಹೇಗಿದೆ ಗೊತ್ತೇ? ಅನ್ನ ಕೂಡ ತಿನ್ನಲು ಆಗದಂತಹ ಪರಿಸ್ಥಿತಿ. ಅಸಲಿಗೆ ಏನಾಗಿದೆ ಗೊತ್ತೇ?

ಇನ್ನು ಮೂರನೆಯದಾಗಿ ಮಹಾಶಿವರಾತ್ರಿಯ ದಿನ ಶಿವನ ಆರಾಧನೆ ಪ್ರಾರ್ಥನೆಯಲ್ಲಿ ಹೆಚ್ಚು ಸಮಯ ಕಳೆಯಿರಿ. ರಾತ್ರಿ ಜಾಗರಣೆ ಮಾಡುವುದಂತೂ ಇನ್ನು ಒಳ್ಳೆಯದು ಈ ಸಮಯದಲ್ಲಿ ಧಾರ್ಮಿಕ ಗ್ರಂಥಗಳನ್ನು ಕೇಳುವುದು ಓದುವುದು ಬಹಳ ಒಳ್ಳೆಯದು. ಯಾರು ಮಹಾಶಿವರಾತ್ರಿಯ ರಾತ್ರಿ ಎಚ್ಚರವಿದ್ದು ಶಿವನನ್ನ ಪೂಜಿಸುತ್ತಾರೋ ಪ್ರಾರ್ಥಿಸುತ್ತಾರೋ ಅಂತವರಿಗೆ ಆ ಪೂಜೆಯ ಪೂರ್ಣ ಫಲ ಸಿಗುವಂತೆ ಶಿವ ಮಾಡುತ್ತಾನೆ ಎಲ್ಲಾ ಇಷ್ಟಾರ್ಥಗಳನ್ನ ಈಡೇರಿಸುತ್ತಾನೆ ಎಂದು ಹೇಳಲಾಗಿದೆ. ಹಾಗಾಗಿ ಶಿವನ ಕೃಪೆಗೆ ಪಾತ್ರರಾಗಲು ಉಪವಾಸವನ್ನು ಕೂಡ ಸರಿಯಾದ ರೀತಿಯಲ್ಲಿಯೇ ಮಾಡಬೇಕು.

Comments are closed.