Rishab Shetty: ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯೂ ಒಲಿದು ಬಂತು ಶೆಟ್ರಿಗೆ; ಆದರೆ ವಿಮರ್ಶಕರು ಮಾತ್ರ ಹೇಳಿದ್ದೇ ಬೇರೆ, ಇದು ಫೇಕ್ ಪ್ರಶಸ್ತಿನಾ?

Rishab Shetty: ಸದ್ಯ ಭಾರತೀಯ ಚಿತ್ರರಂಗದಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವುದು ನಮ್ಮ ಕನ್ನಡ ಚಿತ್ರರಂಗ ಎಂದರೆ ಅದು ಅತಿಶಯೋಕ್ತಿ ಆಗಲಾರದು. ಹಾಗಾಗಿ ಪ್ರತಿಯೊಬ್ಬರ ಚಿತ್ತ ಈಗ ಕನ್ನಡ ಚಿತ್ರರಂಗದತ್ತ ನೆಟ್ಟಿದೆ. ಕನ್ನಡದಲ್ಲಿ ಯಾವ ಸಿನೆಮಾ ತಯಾರಾಗುತ್ತಿದೆ. ಅದು ಯಾವಾಗ ಬಿಡುಗಡೆ ಆಗಬಹುದು ಎಂದು ಪರಭಾಷಾ ಸಿನೆಮಾ ನಿರ್ಮಾಣ ಸಂಸ್ಥೆಗಳು ಯೋಚನೆ ಮಾಡುವ ಹಂತಕ್ಕೆ ಕನ್ನಡ ಚಿತ್ರರಂಗ ಬೆಳೆದು ನಿಂತಿದೆ. ಇದು ಕನ್ನಡಿಗರಾಗಿ ನಾವೆಲ್ಲ ಹೆಮ್ಮೆ ಪಡುವ ವಿಚಾರವಾಗಿದೆ. ಇದಕ್ಕೆಲ್ಲ ಕಾರಣ ಕಳೆದ ವರ್ಷ ಬಿಡುಗಡೆಯಾಗಿ ವಿಶ್ವದಾದ್ಯಂತ ಧೂಳೆಬ್ಬಿಸಿದ ಕೆ.ಜಿ.ಎಫ್. ಹಾಗೂ ಕಾಂತಾರ ಸಿನೆಮಾ.

ಕಾಂತಾರ ಸಿನೆಮಾವು ಕರ್ನಾಟಕದ ಕರಾವಳಿ ಭಾಗದ ದೈವ, ಭೂತಕೋಲ ಸೇರಿದಂತೆ ಜನಪದೀಯ ಆಚರಣೆಗಳನ್ನು ಬಿಂಬಿಸುವ ಸಿನೆಮಾ. ಈ ಸಿನೆಮಾವನ್ನು ರಿಶಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಈ ಸಿನೆಮಾವನ್ನು ಕೆ.ಜಿ.ಎಫ್ ಸಿನೆಮಾ ನಿರ್ಮಾಣ ಮಾಡಿದ್ದ ಹೊಂಬಾಳೆ ಸಂಸ್ಥೆಯು ಬಂಡವಾಳ ಹೂಡಿತ್ತು. ಈ ಸಿನೆಮಾವು ಯಾವ ಮಟ್ಟಿಗೆ ಹಿಟ್ ಆಗಿದೆ ಎನ್ನುವುದು ಈಗ ಇತಿಹಾಸವಾಗಿದೆ.

ಕಾಂತಾರಾ ಸಿನೆಮಾವು ಕನ್ನಡದ ಹೆಮ್ಮೆಯ ಸಿನೆಮಾ ಎಂದು ಹೇಳಿಕೊಳ್ಳಲು ಖುಷಿಯಾಗುತ್ತದೆ. ತುಳುನಾಡಿದ ದೈವದ ಅಂಶವನ್ನು ಪ್ರಧಾನವಾಗಿ ಇಟ್ಟುಕೊಂಡು ಈ ಸಿನೆಮಾ ನಿರ್ಮಾಣ ಮಾಡಲಾಗಿದೆ. ಇದು ರಿಶಬ್ ಶೆಟ್ಟಿ ಅವರ ಬದುಕಿಗೆ ದೊಡ್ಡ ಪ್ರಮಾಣದ ತಿರುವನ್ನು ನೀಡಿದ ಸಿನೆಮಾ ಎಂದರೆ ತಪ್ಪಾಗುವುದಿಲ್ಲ. ಇದರಿಂದ ರಿಶಬ್ ಶೆಟ್ಟಿವರಿಗೆ ಡಿವೈನ್ ಸ್ಟಾರ್ ಎನ್ನುವ ಪಟ್ಟ ಬಂತು. ಇದರ ಜೊತೆ ಹಲವು ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಾಣ ಮಾಡಿದೆ.

ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇನ್ನು ಹಲವು ವರ್ಷಗಳ ಕಾಲ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂತಾರ ಸಿನೆಮಾಗೆ ಪ್ರಶಸ್ತಿಗಳು ಬರುತ್ತಲೇ ಇರುತ್ತವೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಕಾಂತಾರ ಸಿನೆಮಾ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದು ಕನ್ನಡಿಗರಿಗೆ ಗರಿ ಇದ್ದ ಹಾಗೆ.

ಇದೀಗ ರಿಶಬ್ ಶೆಟ್ಟಿ ಅಭಿಮಾನಿಗಳಿಗೆ ಇನ್ನೊಂದು ಗುಡ್ ನ್ಯೂಸ್ ಸಿಕ್ಕಿದೆ. ದೇಶದ ಚಿತ್ರೋದ್ಯಮದ ಅತ್ಯುನ್ನತ ಪ್ರಶಸ್ತಿ ಎಂದು ಕರೆಯಿಸಿಕೊಳ್ಳುವ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ರಿಶಬ್ ಶೆಟ್ಟಿ ಅವರು ಭಾಜನರಾಗಿದ್ದಾರೆ. ಇದೇ ತಿಂಗಳು ೨೦ ರಂದು ಮುಂಬೈನ್ ತಾಜ್ ಹೋಟೇಲ್ನಲ್ಲಿ ನಡೆಯುವ ಸಮಾರಂಭದಲ್ಲಿ ರಿಶಬ್ ಶೆಟ್ಟಿ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಪ್ರಶಸ್ತಿ ಸಿಕ್ಕಿದ್ದು ನಕಲಿ ಎಂದು ಕೋಡ ಕೆಲವರು ಬೆಟ್ಟು ಮಾಡಿ ತೋರಿಸುತ್ತಿದ್ದಾರೆ.

Comments are closed.