Swara Bhaskar Marriage: ಇಷ್ಟು ದಿನ ಸೋಶಿಯಲ್ ಮೀಡಿಯಾದಲ್ಲಿ ’ಭಾಯಿ ಭಾಯಿ’ ಎಂದು ಕರೆದ ಫಹದ್ ಅವರನ್ನೇ ಮದುವೆ ಆದ ಸ್ವರ ಭಾಸ್ಕರ್; ಸಹೋದರನನ್ನ ಪತಿಯಾಗಿಸಿಕೊಳ್ಳುವ ಅನಿವಾರ್ಯತೆ ಇತ್ತಾ ಎಂದ ನೆಟ್ಟಿಗರು!

Swara Bhaskar Marriage: ಇತ್ತೀಚಿಗೆ ನಡೆಯುವ ಕೆಲವು ಮದುವೆ (Wedding) ಗಳು ಬಹಳ ವಿಚಿತ್ರವಾಗಿರುತ್ತವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವರ ಆಲೋಚನೆಗಳೇ ಬಹಳ ವಿಭಿನ್ನ. ಯಾಕೆಂದರೆ ಸಾಮಾನ್ಯರಲ್ಲಿ ಇರುವ ರೀತಿ ನೀತಿ ರಿವಾಜುಗಳು ಬಹುಶಃ ಕೆಲವು ಸೆಲೆಬ್ರಿಟಿಗಳಿಗೆ ಅಪ್ಲೈ ಆಗೋದೇ ಇಲ್ಲ. ನಟಿ ಸ್ವರಾ ಭಾಸ್ಕರ್ ಇದೀಗ ಲೇಟೆಸ್ಟ್ ಪೋಸ್ಟ್ (Letest Post)  ಒಂದನ್ನು ಮಾಡಿ ಸುದ್ದಿಯಲ್ಲಿದ್ದಾರೆ ಟ್ವಿಟರ್ (Twitter)  ಹಾಗೂ ಇನ್ಸ್ಟಾಗ್ರಾಮ್ (Instagram) ಮೊದಲದ ಸಾಮಾಜಿಕ ವೇದಿಕೆಗಳಲ್ಲಿ ಸ್ವರಾ ಭಾಸ್ಕರ್ ಅವರ ಮದುವೆಯ ವಿಚಾರ ಸಿಕ್ಕಾಪಟ್ಟೆ ಸುದ್ದಿಯಾಗಿದೆ.

ನಟಿ ಸ್ವರ ಭಾಸ್ಕರ್ ರಾಜಕಾರಣಿ ಹಾಗೂ ಕಾರ್ಯಕರ್ತ ಫಹಾದ್ ಅಹಮದ್ (Fahad Ahmad) ಅವರನ್ನು ವಿವಾಹವಾಗಿದ್ದಾರೆ. ತಮ್ಮ ಮದುವೆಯ ಫೋಟೋ (Photo) ಹಂಚಿಕೊಂಡ ಸ್ವರ ಭಾಸ್ಕರ್ ಲವ್ ಸ್ಟೋರಿ ಹೇಳುವಂತಹ ವಿಡಿಯೋ ತುಣುಕನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಜನವರಿ 2023ರಲ್ಲಿ ವಿಶೇಷ ವಿವಾಹ ಕಾಯ್ದೆ (Special Marriage act) ಅಡಿ ತಮ್ಮ ವಿವಾಹವನ್ನು ನಟಿ ನೋಂದಾಯಿಸಿಕೊಂಡಿದ್ದಾರೆ. ಇದನ್ನೂ ಓದಿ: DBoss Birthday: ಇವತ್ತೂ ಸುಮ್ಮನಿರಲಿಲ್ಲ ಒಳ್ಳೆ ಹುಡುಗ ಪ್ರಥಮ್ ಬಾಯಿ; ದರ್ಶನ್ ಹುಟ್ಟುಹಬ್ಬದಂದೇ ಅವರಿಗೆ ಬುದ್ದಿ ಹೇಳಲು ಹೋದ ಪ್ರಥಮ್ ಗೆ ಡಚ್ಚು ಅಭಿಮಾನಿಗಳು ಕೊಟ್ರು ಟಾಂಗ್; ಇಷ್ಟಕ್ಕೂ ಪ್ರಥಮ್ ಹೇಳಿದ್ಡೇನು ಗೊತ್ತಾ?

ಬಾಲಿವುಡ್ ನ ವೀರೇ ದಿ ವೆಡ್ಡಿಂಗ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿ ಹೆಸರು ಪಡೆದುಕೊಂಡ ಸ್ವರ ಅದಾದ ಬಳಿಕ ಇನ್ನೂ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಮುಕ್ತವಾಗಿ ತಿಳಿಸುವ ಸ್ವಭಾವ ಹೊಂದಿರುವ ಸ್ವರ ಭಾಸ್ಕರ್ ಇದೀಗ ಫಹಾದ್ ಅಹ್ಮದ್ ಅವರನ್ನು ಮದುವೆಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ.

ಸ್ವರಾ ಭಾಸ್ಕರ್ ಮದುವೆ ಆಗಿರುವ ಹುಡುಗ ಫಹದ್ ಅಹಮದ್ ಸಮಾಜವಾದಿ ಪಕ್ಷದ ಯುವ ಘಟಕ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎನ್ನಲಾಗಿದೆ. ಸ್ವರ ಭಾಸ್ಕರ ತಮ್ಮ ಪ್ರೇಮಕಥೆಯನ್ನು ಹೇಳುವಂತಹ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಕೆಲವೊಮ್ಮೆ ನಮ್ಮ ಪಕ್ಕದಲ್ಲಿಯೇ ಯಾವುದೋ ಒಂದು ವಿಷಯ ಇದ್ದರೂ ದೂರದಲ್ಲಿ ಎಲ್ಲೋ ಅದನ್ನು ಹುಡುಕುತ್ತೇವೆ ನಾವು ಪ್ರೀತಿಯನ್ನು ಹುಡುಕುತ್ತಿದ್ದೆವು. ಆದರೆ ಮೊದಲು ಸ್ನೇಹವನ್ನು ಕಂಡುಕೊಂಡಿದ್ದೇವೆ. ನಂತರ ನಾವು ಒಬ್ಬರನ್ನು ಒಬ್ಬರು ಕಂಡುಕೊಂಡಿದ್ದೇವೆ ನನ್ನ ಹೃದಯಕ್ಕೆ ಸ್ವಾಗತ ನನ್ನ ಮನಸ್ಸು ದಿಗಿಲುಗೊಂಡಿದೆ ಆದರೆ ಅದು ಸಂಪೂರ್ಣವಾಗಿ ನಿನ್ನದು ಎಂಬುದಾಗಿ ಸ್ವರ ಭಾಸ್ಕರ್ ಪೋಸ್ಟ್ ಹಾಕಿಕೊಂಡಿದ್ದಾರೆ.

ನಟಿ ಸ್ವರಾ ಭಾಸ್ಕರ್ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು ಮಲಗಿಕೊಂಡಿರುವ ಫೋಟೋ ಅದಾಗಿತ್ತು ಹಾಸಿಗೆಯ ಮೇಲೆ ಆಕೆಯನ್ನು ಬಳಸಿದ ಆ ತೋಳು ಯಾರದಿರಬಹುದು ಅಂತ ಅಭಿಮಾನಿಗಳು ಗೆಸ್ ಮಾಡುತ್ತಿದ್ದರು. ಇನ್ನು ಬರಹಗಾರ ಹಿಮಾಂಶು ಶರ್ಮಾ (Himamshu Sharma) ಅವರ ಜೊತೆಗೆ ಸ್ವರ ಭಾಸ್ಕರ್ ರಿಲೇಶನ್ ಶಿಪ್ (Relationship)  ನಲ್ಲಿ ಇದ್ದಾರೆ ಎನ್ನುವ ವದಂತಿಯೂ ಇತ್ತು. ಆದರೆ 2019ರಲ್ಲಿ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದೆ ಎಂದು ವರದಿಯಾಗಿದೆ.

Comments are closed.