Baby Shamlee: ಶಿವಣ್ಣನ ಜೊತೆಗೆ ಅಭಿನಯಿಸುವ ಅವಕಾಶವನ್ನೂ ತಿರಸ್ಕರಿಸಿದ್ದ ಬೇಬಿ ಶ್ಯಾಮಿಲಿ: ಬಾಲ ನಟಿಯಾಗಿ ಗೆದ್ದ ಅಮಲು ನಾಯಕಿಯಾಗಿ ಸೋಲೋದಕ್ಕೆ ಕಾರಣವಾಯಿತಾ?

Baby Shamlee: ಪಂಚ ಭಾಷಾ ತಾರೆ ಬೇಬಿ ಶ್ಯಾಮಿಲಿ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆಕೆ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದ ಕಾಲದಲ್ಲಿ ಅವರಿಗೆ ಇದ್ದಷ್ಟು ಬೇಡಿಕೆ ಬೇರೆ ಯಾವ ಬಾಲ ನಟಿಯರಿಗೂ ಇರಲಿಲ್ಲ. ಆ ಕಾಲದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಸ್ಟಾರ್ ಸೆಲೆಬ್ರಿಟಿ ನಟಿ ಆಗಿದ್ದವರು ಬೇಬಿ ಶ್ಯಾಮಿಲಿ.

ತಮಿಳು ಸಿನಿಮಾದ ಮೂಲಕ ತನ್ನ ಕರಿಯರ್ ಆರಂಭಿಸಿದ ಬೇಬಿ ಶ್ಯಾಮಿಲಿ ಎರಡು ವರ್ಷ ವಯಸ್ಸು ಇರುವಾಗಲೇ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ತಮಿಳು, ತೆಲುಗು, ಮಲಯಾಳಂ, ಕನ್ನಡ ಹಿಂದಿ ಹೇಗೆ ಹಲವು ಭಾಷೆಗಳಲ್ಲಿ ಬಾಲ ನಟಿಯಾಗಿ 60 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದಲ್ಲಿ ಬೇಬಿ ಶ್ಯಾಮಿಲಿ ಅಭಿನಯದ ಶಾಂಭವಿ, ಕರುಳಿನ ಕುಡಿ ಮೊದಲಾದ ಚಿತ್ರಗಳನ್ನು ಇಂದಿಗೂ ಜನ ಮರೆಯಲು ಸಾಧ್ಯವೇ ಇಲ್ಲ. ಅ ಪುಟ್ಟ ಮಗುವಿನ ಮಾತು ಆಕೆಯ ನೋಟ ಆ ಮುದ್ದಾದ ಮುಖ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಬೇಬಿ ಶ್ಯಾಮಿಲಿ ಬೆಳೆದು ದೊಡ್ಡವಳಾಗುತ್ತಿದ್ದ ಹಾಗೆ ಆಕೆಗೆ ಬಾಲ ನಟಿಯಾಗಿ ಅವಕಾಶಗಳು ಸಿಗಲಿಲ್ಲ ಶ್ಯಾಮಿಲಿ ಕೂಡ ಸಿನಿಮಾ ರಂಗದಿಂದ ದೂರ ಸರಿದು ತಮ್ಮ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರು.

ನಂತರ ಬಹಳ ದೊಡ್ಡ ಬ್ರೇಕ್ ಪಡೆದುಕೊಂಡ ಬೇಬಿ ಶ್ಯಾಮಿಲಿ ಮತ್ತೆ ಸಿನಿಮಾ ರಂಗಕ್ಕೆ ಹಿರೋಯಿನ್ ಆಗಿ ಎಂಟ್ರಿ ಕೊಡುತ್ತಾರೆ ತೆಲುಗು ಸಿನಿಮಾದಲ್ಲಿ ಸಿದ್ದಾರ್ಥ್ ಜೊತೆಗೆ ಅಭಿನಯಿಸುತ್ತಾರೆ. ನಂತರ ಮಲಯಾಳಂ ನಲ್ಲಿಯು ಒಂದು ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಆದರೆ ಅವರ ನಟನಿಗೆ ಯಾರು 100 ಮಾರ್ಕ್ಸ್ ನೀಡುವುದೇ ಇಲ್ಲ. ಸಿನಿಮಾ ರಂಗದಲ್ಲಿ ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಯಾರಾದರೂ ಬೇಬಿ ಶ್ಯಾಮಿಲಿಗೆ ಅವಕಾಶವನ್ನು ನೀಡಿ ಚಿತ್ರೀಕರಣದ ಸಮಯದಲ್ಲಿ ಅಭಿನಯದ ಬಗ್ಗೆ ಹೇಳಲು ಹೋದರೆ ನಾನು ಆಗಿನ ಕಾಲದಲ್ಲಿ ಸ್ಟಾರ್ ನಟಿ ಆಗಿದ್ದವಳು ನನಗೆ ನೀವು ಅಭಿನಯ ಹೇಳಿಕೊಡುವುದು ಎನ್ನುವಂತಹ ಅಹಂಕಾರದ ಮಾತುಗಳನ್ನು ಆಡುತ್ತಿದ್ದರಂತೆ.

ಬೇಬಿ ಶ್ಯಾಮಿಲಿ ಖ್ಯಾತ ನಟ ಅಜಿತ್ ಅವರ ಸಂಬಂಧಿ ಕೂಡ ಹೌದು. ಬಲನಟಿಯಾಗಿ ಮಿಂಚಿದ್ದ ಬೇಬಿ ಶ್ಯಾಮಿಲಿ ಅವರಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದ ಹಾಗೆ ಅಹಂಕಾರ ನೆತ್ತಿಗೇರಿತ್ತೋಏನೂ ಗೊತ್ತಿಲ್ಲ ಅಂತ ಸಿನಿಮಾದಲ್ಲಿ ಅವಕಾಶಗಳು ಸಿಕ್ಕಾಗಲೆಲ್ಲಾ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆ ಕಿರಿಕ್ ಮಾಡಿಕೊಳ್ಳುತ್ತಿದ್ದರು. ಶಿವರಾಜಕುಮಾರ್ ಅವರ ಜೊತೆಗೆ ಅಭಿನಯಿಸಲು ಕೇಳಿದಾಗಲೂ ಬೇಬಿ ಶ್ಯಾಮಿಲಿ ಅದನ್ನ ತಿರಸ್ಕರಿಸಿದ್ದರಂತೆ. ಹೀಗೆ ಬೇಬಿ ಶ್ಯಾಮಿಲಿ ಬೆಳಿತಾ ಬೆಳಿತಾ ತನ್ನ ಜೊತೆಗೆ ತನ್ನ ಅಹಂಕಾರವನ್ನು ಕೂಡ ಬೆಳೆಸಿಕೊಂಡರು ಹಾಗಾಗಿ ಅವರಿಗೆ ಸಿನಿಮಾದಲ್ಲಿ ಅವಕಾಶಗಳು ಸಿಗುವುದು ಕಡಿಮೆ ಆಯಿತು.

ಬೇಬಿ ಶ್ಯಾಮಿಲಿ ಹಾಗೂ ಅವರ ಅಕ್ಕ ಅಂಜಲಿ ಇಬ್ಬರೂ ಕೂಡ ಬಾಲ ನಟಿಯಾಗಿ ಅಭಿನಯಿಸಿದವರು ಆದರೆ ಬೇಬಿ ಶ್ಯಾಮಿಲಿ ಅವರ ಕಿರಿಕ್ ಸ್ವಭಾವದಿಂದ ಅವರಿಗೆ ಈಗ ಅವಕಾಶಗಳು ಸಿಗುತ್ತಿಲ್ಲ ಯಾವಾಗಲೂ ಸಿನಿಮಾ ಸೆಟ್ ಗೆ ಲೇಟ್  ಆಗಿ ಬರುವುದು, ಕೇಳಿದರೆ ಅಸಡ್ಡೆಯಾಗಿ ಮಾತನಾಡುವುದು ಈ ರೀತಿಯಾದಂತಹ ಬೇಬಿ ಶ್ಯಾಮಿಲಿ ಅವರ ವರ್ತನೆ ಸಿನಿಮಾರಂಗದಲ್ಲಿ ಎಲ್ಲರಿಗೂ ಬೇಸರ ತರಿಸಿತ್ತು. ಇದೀಗ ನೀವು ಬೇಬಿ ಶ್ಯಾಮಿಲಿಯನ್ನ ಬೇಬಿ ಆಗಿ ನೆನಪಿಟ್ಟುಕೊಳ್ಳಬಹುದೇ ಹೊರತು ಒಬ್ಬ ಹೀರೋಯಿನ್ ಆಗಿ ಎಲ್ಲಿಯೂ ಕಾಣಿಸಿಕೊಳ್ಳುವುದೇ ಇಲ್ಲ. ಇದು ಅವರ ದುರಹಂಕಾರದ ಫಲವೇ ಹೊರತು ಮತ್ತೇನು ಅಲ್ಲ ಅಂತ ಸಾಕಷ್ಟು ಜನ ಹೇಳುತ್ತಾರೆ.

Comments are closed.