Cricket News: ಚಾಹಲ್ ಜೀವನದಲ್ಲಿ ಬೆಂಕಿ ಬಿರುಗಾಳಿ; ಟಿಕ್ ಟಾಕ್ ನೋಡಿ ಪ್ರೀತಿ ಮಾಡಿದ್ದ ಜೋಡಿಗೆ ಏನಾಗಿದೆ ಗೊತ್ತೆ? ಮದ್ಯ ಬಂದವರು ಯಾರು ಗೊತ್ತೇ??

Cricket News: ಚಿತ್ರರಂಗ ಕ್ರಿಕೆಟ್ ಪ್ರಪಂಚ ಸೆಲೆಬ್ರಿಟಿಗಳ ಲೋಕದಲ್ಲಿ ಯಾವ ಸಂಬಂಧ ಹೇಗೆ ಶುರುವಾಗುತ್ತದೆ, ಅದೇ ರೀತಿ ಅವರ ನಡುವೆ ಬಿರುಕು ಹೇಗೆ ಮೂಡುತ್ತದೆ ಎಂದು ಊಹೆ ಕೂಡ ಮಾಡಲು ಸಾಧ್ಯವಿಲ್ಲ. ಇಂತಹ ಹಲವು ವಿಚಾರಗಳನ್ನು ಸೆಲೆಬ್ರಿಟಿ ದಂಪತಿಗಳ ದಾಂಪತ್ಯ ಜೀವನದಲ್ಲಿ ನೋಡಿದ್ದೇವೆ. ಇಂಥದ್ದೇ ಸುದ್ದಿ ಈಗ ಖ್ಯಾತ ಕ್ರಿಕೆಟರ್ ಯುಜವೇಂದ್ರ ಚಾಹಲ್ ಅವರ ದಾಂಪತ್ಯ ಜೀವನದ ವಿಚಾರದಲ್ಲಿ ಕೂಡ ಕೇಳಿಬರುತ್ತಿದೆ.

ಚಾಹಲ್ ಟೀಮ್ ಇಂಡಿಯಾದ ಮತ್ತು ಐಪಿಎಲ್ ನ ಪ್ರಮುಖ ಆಟಗಾರ. ಇವರು ಮೊದಲಿಗೆ ಆರ್ಸಿಬಿ ತಂಡಕ್ಕಾಹಿ ಐಪಿಎಲ್ ನಲ್ಲಿ ಆಡುತ್ತಿದ್ದರು. ಆದರೆ ಈಗ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಆಡುತ್ತಾರೆ. ಚಾಹಲ್ ಅವರು ವೃತ್ತಿಯಲ್ಲಿ ಬಹಳ ಸಾಧನೆ ಮಾಡಿದ್ದಾರೆ. ವೈಯಕ್ತಿಕ ಜೀವನದಲ್ಲಿ ಟಿಕ್ ಟಾಕ್ ಸ್ಟಾರ್ ಮತ್ತು ಡೆಂಟಿಸ್ಟ್ ಕೂಡ ಆಗಿರುವ ಧನುಶ್ರೀ ವರ್ಮಾ ಅವರನ್ನು ಪ್ರೀತಿಸಿ ಅದ್ಧೂರಿಯಾಗಿ ಮದುವೆಯಾದರು ಚಾಹಲ್. ಇವರಿಬ್ಬರು ಅಪ್ಪಟ ಲವ್ ಮ್ಯಾರೇಜ್. ಈ ಜೋಡಿಯ ಡ್ಯಾನ್ಸ್ ವಿಡಿಯೋಗಳು ಜನರಿಗೂ ತುಂಬಾ ಇಷ್ಟವಾಗಿತ್ತು.

ಆದರೆ ಈಗ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದಕ್ಕೆ ಕಾರಣ ಮತ್ತೊಬ್ಬ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಅವರು ಎಂದು ಕೂಡ ಹೇಳಲಾಗುತ್ತಿದೆ. ಅದಕ್ಕೆ ಕಾರಣ ಈ ಹಿಂದಿನ ಕೆಲವು ಘಟನೆಗಳು ಜೊತೆಗೆ ಇತ್ತೀಚೆಗೆ ನಡೆದ ಶಾರ್ದುಲ್ ಠಾಕೂರ್ ಅವರ ಮದುವೆಯಲ್ಲಿ ಧನುಶ್ರೀ ವರ್ಮಾ ಶ್ರೇಯಸ್ ಅಯ್ಯರ್ ಅವರ ಜೊತೆಗೆ ಕಾಣಿಸಿಕೊಂಡಿದ್ದರು, ಆದರೆ ಚಾಹಲ್ ಅವರು ಬಂದಿರಲಿಲ್ಲ. ಇಂಥಹ ಕೆಲವು ಘಟನೆಗಳು ಈ ಜೋಡಿಯ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇಲ್ಲವೇನೋ ಎಂದು ಅನುಮಾನ ಶುರುವಾಗುವ ಹಾಗೆ ಮಾಡಿದೆ.

Comments are closed.