Tamanna:ಬಾಯ್ ಫ್ರೆಂಡ್ ಸಿಕ್ಕಿದ ತಕ್ಷಣ ರೊಚ್ಚಿಗೆದ್ದಿರುವ ತಮನ್ನಾ, ಪಬ್ಲಿಕ್ ನಲ್ಲಿ ಈ ಕೆಲಸ ಏನು ಮೇಡಂ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ??

Tamanna:ನಟಿ ತಮನ್ನಾ ಅವರು ಮಿಲ್ಕಿ ಬ್ಯೂಟಿ ಎಂದೇ ಹೆಸರು ಮಾಡಿದ್ದಾರೆ. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತೆಲುಗು ಸಿನಿಮಾ ಹ್ಯಾಪಿಡೇಸ್ ಮೂಲಕ. ಈ ಸಿನಿಮಾ ಯಶಸ್ಸಿನ ನಂತರ ತಮನ್ನಾ ಅವರಿಗೆ ಬಹಳಷ್ಟು ಅವಕಾಶಗಳು ಸಿಕ್ಕವು. ತಮಿಳು ಮತ್ತು ತೆಲುಗಿನ ಎಲ್ಲಾ ಸ್ಟಾರ್ ಗಳ ಜೊತೆಗೂ ತೆರೆ ಹಂಚಿಕೊಂಡು ಒಳ್ಳೆಯ ಹೆಸರನ್ನು ಪಡೆದರು ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದರು ತಮನ್ನಾ. ಈಗ ತಮನ್ನಾ ಅವರು ಬಾಲಿವುಡ್ ನಲ್ಲೂ ಮಿಂಚುತ್ತಿದ್ದಾರೆ.

ಹಿಂದಿಯಲ್ಲಿ ಒಂದರ ನಂತರ ಒಂದು ಸಿನಿಮಾ ಆಫರ್ ಗಳು ತಮನ್ನಾ ಅವರಿಗೆ ಸಿಗುತ್ತಿದೆ. ಜೊತೆಗೆ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಾಗುತ್ತಿದ್ದಾರೆ, ತಮನ್ನಾ ಅವರು ಬಾಲಿವುಡ್ ನಟ ವಿಜಯ್ ವರ್ಮಾ ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಇದ್ದು, ಇವರಿಬ್ಬರು ಜೊತೆಯಾಗಿ ಗೋವಾದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಿದರು. ಅಲ್ಲಿ ಕಿಸ್ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಅದನ್ನು ನೋಡಿ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಇವರಿಬ್ಬರ ಇನ್ಸ್ಟಾಗ್ರಾಮ್ ಸ್ಟೋರಿ ಕೂಡ ವೈರಲ್ ಆಗುತ್ತಿದೆ.

ವಿಜಯ್ ವರ್ಮಾ ಅವರ ದಹದ್ ಸಿನಿಮಾ ಬರ್ಲಿನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವ ಭಾರತದ ಮೊದಲ ಸಿನಿಮಾ ಆಗಿದ್ದು, ಸಿನಿಮಾಗೆ ಪ್ರಶಂಸೆ ನೀಡಿ ತಮನ್ನಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಹಾಕಿದ್ದಾರೆ, ವಿಜಯ್ ವರ್ಮಾ ಅವರನ್ನು ಸ್ಪೆಶಲ್ ಆಗಿ ಹೊಗಳಿದ್ದು, ಅದಕ್ಕೆ ವಿಜಯ್ ವರ್ಮಾ ಅವರು ರಿಪ್ಲೈ ಮಾಡಿದ್ದು, ಥ್ಯಾಂಕ್ ಯೂ ಟೊಮ್ಯಾಟೋ ಎಂದು ಬರೆದು ಟೊಮ್ಯಾಟೋ ಸಿಂಬಲ್ ಹಾಕಿಕೊಂಡಿದ್ದು, ಇವರಿಬ್ಬರ ಪೋಸ್ಟ್ ಈಗ ವೈರಲ್ ಆಗಿದ್ದು, ಎಲ್ಲಾ ಅಭಿಮಾನಿಗಳು ಇವರು ಬೇಗ ಮದುವೆಯಾಗಿ ಎನ್ನುತ್ತಿದ್ದಾರೆ.

Comments are closed.