Nityananda: ದೇಶದಿಂದ ತಲೆ ಮರೆಸಿಕೊಂಡಿರುವ ನಿತ್ಯಾನಂದನಿಗೆ ಭಾರತದಿಂದ ಹಿಂಸೆ ನೀಡಲಾಗುತ್ತಿದೆಯಂತೆ ವಿಶ್ವಸಂಸ್ಥೆಯಲ್ಲಿ ನಿತ್ಯಾನಂದನ ಪ್ರತಿನಿಧಿ ಹೇಳಿದ್ದೇನು ಗೊತ್ತಾ?

Nityananda: ದೇಶದಲ್ಲಿ ಹಲವಾರು ತಪ್ಪುಗಳನ್ನ ಮಾಡಿ ಇದೀಗ ತಲೆಮರೆಸಿಕೊಂಡು ತನ್ನದೇ ಆದ ಕೈಲಾಸಂ  ನಿರ್ಮಾಣ ಮಾಡಿಕೊಂಡು ಅಲ್ಲೆಲ್ಲೋ, ದ್ವೀಪದಲ್ಲಿ ಇರುವ ನಿತ್ಯಾನಂದನ ರಾಷ್ಟ್ರವನ್ನು ವಿಶ್ವಸಂಸ್ಥೆ ಕೂಡ ಗುರುತಿಸಿದೆಯಾ?ಯ ಎಂದು ಹಲವರಲಿ ಪ್ರಶ್ನೆ ಮೂಡುವುದು ಸಹಜ. ಯಾಕಂದರೆ ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ಎಂದು ತನ್ನ ರಾಷ್ಟ್ರವನ್ನು ಕರೆದುಕೊಂಡಿರುವ ನಿತ್ಯಾನಂದ ಇದೀಗ ವಿಶ್ವಸಂಸ್ಥೆಯ ಸಭೆ ಒಂದರಲ್ಲಿ ತನ್ನ ಪ್ರತಿನಿಧಿಯನ್ನು ಮಾತನಾಡಲು ಕಳುಹಿಸಿದ್ದಾರೆ ಸದ್ಯ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಇನ್ನು ಚೇರ್ ಪರ್ಸನ್ ಎ. ಅಭಾಸಿಂಧಜಿ ಅವರು ವಿಜಯಪ್ರಿಯ ಎನ್ನುವ ಕೈಲಾಸದ ರಾಯಭಾರಿಗೆ ಕೇಳಿರುವ ಪ್ರಶ್ನೆಗೆ ಸುಸ್ಥಿರ ಅಭಿವೃದ್ಧಿ ಕುರಿತು ಮಾತನಾಡುವುದನ್ನು ಬಿಟ್ಟು ಕೈಲಾಸದ ದೇವರ ಬಗ್ಗೆ ಆಕೆ ಮಾತನಾಡುತ್ತಾಳೆ. ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ ಆಗಿರುವ ನಿತ್ಯಾನಂದ ಅವರಿಗೆ ರಕ್ಷಣೆ ನೀಡಿ ಎಂದು ಕೇಳಿದ್ದಾಳೆ ಭಾರತದಿಂದ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಕೆ ಹೇಳಿದ್ದಾಳೆ.

2019 ರಿಂದ ವಿಶ್ವಸಂಸ್ಥೆಗೆ ತನ್ನ ರಾಷ್ಟ್ರದ ಬಗ್ಗೆ ತಿಳಿಸಲು ನಿತ್ಯನಿಂದ ಪ್ರಯತ್ನಿಸುತ್ತಿದ್ದಾನೆ ಎಂದು ವರದಿಯಾಗಿತ್ತು. ಇದೇ ವರ್ಷ ನಿತ್ಯಾನಂದ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ದೇಶದಿಂದಲೇ ತಲೆಮರಿಸಿಕೊಂಡಿದ್ದ. ನಿತ್ಯಾನಂದನ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಕಿರುಕುಳದ ಆರೋಪವಿದೆ. ದೇಶದಿಂದ ತಲೆಮರೆಸಿಕೊಂಡು ನಿತ್ಯಾನಂದ ಅಜ್ಞಾತ ಸ್ಥಳದಲ್ಲಿ ಕೈಲಾಸ ರಾಷ್ಟ್ರವನ್ನು ಸ್ಥಾಪಿಸಿದ್ದೇನೆ ಎಂದು ಹೇಳಿಕೊಂಡಿದ್ದ.

ವಿಶ್ವಸಂಸ್ಥೆಯಲ್ಲಿ ಕೈಲಾಸ ರಾಷ್ಟ್ರದ ಪ್ರತಿನಿಧಿ:

ನಿತ್ಯಾನಂದನ ಕೈಲಾಸ ರಾಷ್ಟ್ರವನ್ನು ವಿಶ್ವಸಂಸ್ಥೆ ಗುರುತಿಸಿದೆಯೇ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ ಆದರೆ ಫೆಬ್ರುವರಿ 22ರಂದು ಮಾ ವಿಜಯಪ್ರಿಯ ಎನ್ನುವ ಮಹಿಳೆ 19ನೇ ವಿಶ್ವಸಂಸ್ಥೆಯ ಆರ್ಥಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ 73ನೇ ಸೆಶನ್ ನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇದರ ಪ್ರತಿನಿಧಿಯಾಗಿ ಮಾತನಾಡಿದ್ದಾರೆ. ವಿಜಯಪ್ರಿಯ ಕೈಲಾಸದ ಕಾಯಂ ರಾಯಭಾರಿ ಆಗಿದ್ದಾರೆ. ವಿಜಯಪ್ರಿಯ ಮಾತನಾಡಿರುವ ವಿಡಿಯೋ ವಿಶ್ವಸಂಸ್ಥೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿದೆ.

ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ ಎಂದು ಕೈಲಾಸವನ್ನು ವಿಜಯಪ್ರಿಯ ಕರೆದಿದ್ದಾರೆ. ಜೊತೆಗೆ ಕೈಲಾಸವನ್ನು ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶ ನಿತ್ಯಾನಂದ ಪರಮಶಿವಂ ಅವರು ಸ್ಥಾಪನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಪ್ರಭುದ್ಧ ಹಿಂದೂ ನಾಗರಿಕತೆ ಮತ್ತು ಆದೇಶ ಯುವ ಸ್ಥಳೀಯ ಕೃಷಿ ಬುಡಕಟ್ಟು ಸೇರಿದಂತೆ ಬೇರೆ ಬೇರೆ ಧರ್ಮದ 10000 ಸಂಪ್ರದಾಯಗಳನ್ನ ಕೈಲಾಸಂನಲ್ಲಿ ಪುನರುಜ್ಜೀವನಗೊಳಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದ್ದಾಳೆ. ಇದಕ್ಕೆಲ್ಲಾ ನಾಯಕ ನಿತ್ಯಾನಂದನಂತೆ.

Comments are closed.