Vastu Tips: ನೀವು ಬೇಕಾ ಶ್ರೀಮಂತರಾಗಬೇಕಾ? ಕೈ ತುಂಬಾ ಹಣ ಓಡಾಡಬೇಕಾ!? ಮನೆಯಲ್ಲಿ ವಾಸ್ತುಗೆ ಸಂಬಂಧಪಟ್ಟ ಇದೊಂದು ಟಿಪ್ಸ್ ಪಾಲಿಸಿದರೆ ಸಾಕು! ದುಡ್ಡೇ ದುಡ್ಡು!

Vastu Tips: ಇಂದು ಮನುಷ್ಯನ ಗುಣ ನೋಡಿ ಗೌರವಿಸುವುದಕ್ಕಿಂತ ಆತನಲ್ಲಿ ಇರುವ ಹಣ ಸಂಪತ್ತು ನೋಡಿ ಗುರುತಿಸುವವರೇ ಹೆಚ್ಚು. ಹಣ (Money) ಎಲ್ಲರಿಗೂ ಬೇಕು ಸ್ಥಿತಿವಂತರಾಗಿದ್ದರೆ ಮಾತ್ರ ಜನರು ಕೂಡ ಮಾತನಾಡಿಸುತ್ತಾರೆ. ಕೆಲವೊಮ್ಮೆ ನಾವು ದುಡಿದರೆ ಮಾತ್ರ ಸಾಲುವುದಿಲ್ಲ ಮನೆಯಲ್ಲಿ ಇರುವ ವಾಸ್ತು ಕೂಡ ನಮ್ಮ ಆರ್ಥಿಕ ಪರಿಸ್ಥಿತಿಯನ್ನು ನಿರ್ಧರಿಸುತ್ತದೆ. ವಾಸುವಿನಲ್ಲಿ ಇರುವ ಕೆಲವು ಪರಿಹಾರಗಳು ನಮ್ಮನ್ನು ಶ್ರೀಮಂತರನ್ನಾಗಿಸುವಲ್ಲಿ ಸಹಾಯ ಮಾಡುತ್ತವೆ.

ನಾವು ಒಂದು ಮನೆ ಕಟ್ಟಡವನ್ನು ಕಟ್ಟಬೇಕಾದರೆ ವಾಸ್ತು ಬಗ್ಗೆ ಯೋಚನೆ ಮಾಡುವುದು ಬಹಳ ಮುಖ್ಯ. ಮನೆಯ ಆರ್ಥಿಕ ಪರಿಸ್ಥಿತಿಗೆ ಸುಖ ನೆಮ್ಮದಿ ಎಲ್ಲಾ ವಿಷಯದಲ್ಲಿ ಮನೆಯ ವಾಸ್ತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮೊದಲಿಗೆ ಮನೆಯ ವಾಸ್ತು ವನ್ನು ಗಮನಿಸಬೇಕು ಮನೆಯ ವಾಸ್ತು ಸರಿ ಇಲ್ಲದೆ ಇದ್ದರೆ ಆ ಮನೆಯಲ್ಲಿ ಏನಿದೆ ಬಹಳ ಕಷ್ಟ ಹಾಗಾಗಿ ವಾಸ್ತು ಸರಿ ಇಲ್ಲ ಎನಿಸಿದರೆ ಅದಕ್ಕೆ ಅಗತ್ಯವಾದ ಪರಿಹಾರವನ್ನು ಮಾಡಿಕೊಳ್ಳಿ.

ಉತ್ತರ ದಿಕ್ಕು:

ಉತ್ತರ ದಿಕ್ಕಿನಲ್ಲಿ ನೀಲಿ ಬಣ್ಣ ಬಳಸುವುದು ಶ್ರೇಷ್ಠ. ಯಾವುದೇ ಕಾರಣಕ್ಕೂ ಕೆಂಪು ಬಣ್ಣವನ್ನು ಬಳಸಬೇಡಿ. ಶೌಚಾಲಯ ಹಾಗೂ ಅಡುಗೆ ಮನೆಗೆ ಸರಿಯಾದ ಸ್ಥಳವನ್ನು ಮೀಸಲಿಡಿ. ಉತ್ತರದಲ್ಲಿ ಮನಿ ಪ್ಲಾಂಟ್ ಬೆಳಸಿ. ಜೊತೆಗೆ ಹಸಿರು ಕಾಡನ್ನು ಹೊಂದಿರುವ ಚಿತ್ರವನ್ನು ಉತ್ತರ ಭಾಗದಲ್ಲಿ ಅಂಟಿಸಬಹುದು. ಇದು ಸಂಪತ್ತನ್ನು ಆಕರ್ಷಿಸುತ್ತೆ ನಿಮ್ಮ ಬ್ಯಾಂಕಿಂಗ್ ಹಾಗೂ ಇತರ ಯಾವುದೇ ಕೆಲಸಗಳು ಸರಾಗವಾಗಿ ಆಗುವಂತೆ ಮಾಡುತ್ತದೆ. ಆರ್ಥಿಕವಾಗಿ ನಿಮ್ಮನ್ನು ಬಲಪಡಿಸುತ್ತೆ.

ಪ್ರವೇಶ ದ್ವಾರ:

ಮನೆಯ ಮುಂಬಾಗಿಲು ನೋಡುವುದಕ್ಕೆ ಆಕರ್ಷಕವಾಗಿರಬೇಕು. ಉತ್ತರದಲ್ಲಿರುವ ಬಾಗಿಲು ಮನೆಯಲ್ಲಿ ಸಂಪತ್ತು ಹಣ ನೆಮ್ಮದಿ ಎಲ್ಲವೂ ತುಂಬಿ ತುಳುಕುವಂತೆ ಮಾಡುತ್ತದೆ. ಇನ್ನು ಪೂರ್ವದಲ್ಲಿ ಪ್ರವೇಶ ದ್ವಾರ ಇದ್ರೆ ಅದು ಮನೆಯಲ್ಲಿ ಸುಖ ಹಾಗೂ ಶಾಂತಿಯನ್ನು ತರುತ್ತದೆ. ಪಶ್ಚಿಮ ದಿಕ್ಕಿನಲ್ಲಿದ್ರೆ ಸಂಪತ್ತು ಹಾಗೂ ಹಣವನ್ನು ತರುತ್ತದೆ. ಇನ್ನು ದಕ್ಷಿಣ ದಿಕ್ಕಿನಲ್ಲಿ ಇರುವ ಪ್ರವೇಶದ ಬಾಗಿಲು ಅದೃಷ್ಟದ ಸಂಕೇತ. ನೈರುತ್ಯ ದಿಕ್ಕಿನಲ್ಲಿ ಮಾತ್ರ ಪ್ರವೇಶದ ಬಾಗಿಲು ಇರಬಾರದು ಇದು ಮನೆಯಲ್ಲಿ ಸಾಕಷ್ಟು ಸಮಸ್ಯೆಗೆ ಕಾರಣವಾಗಬಹುದು.

ಅಡುಗೆ ಮನೆ ದಿಕ್ಕು:

ಮನೆಯ ಆತ್ಮೀಯ ಭಾಗದಲ್ಲಿ ಅಡುಗೆ ಮನೆ ಇರಬೇಕು ಕೆಂಪು ಕಿತ್ತಳೆ ನೀಲಿ ತಿಳಿ ಗುಲಾಬಿ ಈ ಬಣ್ಣಗಳನ್ನು ಅಡುಗೆ ಮನೆಗೆ ಬಳಸಿ. ಕೆಲಸ ಮಾಡುವ ಸ್ಥಳ ಹಾಗೂ ಟೇಬಲ್ ಅನ್ನು ಉತ್ತರ ದಿಕ್ಕಿನಲ್ಲಿ ಸ್ಥಾಪನೆ ಮಾಡಬೇಕು ಆಗ ಹಣದ ಹರಿವು ಹೆಚ್ಚಾಗುತ್ತದೆ.

ಇನ್ನು ಮನೆಯ ಪಶ್ಚಿಮ ಭಾಗಕ್ಕೆ ಹಳದಿ ಮತ್ತು ಬಿಳಿ ಬಣ್ಣವನ್ನು ಬಳಸಿ. ವಿಭಾಗದಲ್ಲಿ ವೃತ್ತಾಕಾರದ ಯಾವುದಾದರು ವಸ್ತುವನ್ನು ಇಡಬಹುದು. ಇನ್ನು ಮನೆಯ ನೈರುತ್ಯ ವಲಯವನ್ನು ಸ್ವಚ್ಛವಾಗಿದೆ ಇದು ಉಳಿತಾಯದ ವಲಯವಾಗಿದೆ ಈ ಭಾಗದಲ್ಲಿ ಸ್ಟಡಿ ರೂಂ ನಿರ್ಮಿಸುವುದು ಒಳ್ಳೆಯದು ವಿದ್ಯಾರ್ಥಿಗಳಿಗೆ ಇದರಿಂದ ಯಶಸ್ಸು ಸಿಗುತ್ತದೆ. ಜೊತೆಗೆ ಈ ಭಾಗದಲ್ಲಿ ಹಣ ಅಥವಾ ಅಮೂಲ್ಯವಾದ ವಸ್ತುವನ್ನು ಇಡುವುದು ಒಳ್ಳೆಯದು. ಹೀಗೆ ನೀವು ಸಂರಕ್ಷಿಸಿ ಇಟ್ಟರೆ ಹಣ ಅಥವಾ ಸಂಪತ್ತು ದುಪ್ಪಟ್ಟಾಗುತ್ತದೆ.

Comments are closed.