Interesting facts:ಹುಡುಗಿಯರು ತಮಗಿಂತ ಎತ್ತರದ ಹುಡುಗರನ್ನು ಇಷ್ಟ ಪಡಲು ಕಾರಣವೇನು ಗೊತ್ತೇ? ತಿಳಿದರೆ ಇಂದೇ ಉದ್ದ ಆಗ್ತೀರಾ!

Interesting facts:ವಿಶ್ವದಲ್ಲಿರುವ ಎಲ್ಲಾ ಹುಡುಗರು ಒಂದೇ ಥರ ಇರೋದಿಲ್ಲ. ಹುಡುಗರ ಎತ್ತರ, ಲುಕ್ಸ್ ಇದೆಲ್ಲವೂ ಪ್ರತಿ ಹುಡುಗನಲ್ಲೂ ಬೇರೆ ಬೇರೆ ರೀತಿ ಇರುತ್ತದೆ. ಒಂದು ಹುಡುಗಿ ಹುಡುಗನನ್ನು ಇಷ್ಟಪಡುವಾಗ ಅವರು ನೋಡೋದಕ್ಕೆ ಎಷ್ಟು ಸುಂದರವಾಗಿ ಇರುತ್ತಾರೆ ಎಂದು ನೋಡುವುದಕ್ಕಿಂತ ಹೆಚ್ಚಾಗಿ, ಹುಡುಗನ ಎತ್ತರ ಎಷ್ಟಿದೆ ಎಂದು ನೋಡುತ್ತಾರೆ. ಹುಡುಗಿಯರು ಸಾಮಾನ್ಯವಾಗಿ ತಮಗಿಂತ ಎತ್ತರ ಇರುವ ಹುಡುಗನ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ? ಈ ಲೇಖನಿ ಮೂಲಕ ತಿಳಿಯಿರಿ..

ಸುರಕ್ಷತೆ :- ಹುಡುಗಿಯರು ತಮಗಿಂತ ಎತ್ತರ ಇರುವ ಹುಡುಗನನ್ನು ಡೇಟ್ ಮಾಡಿದರೆ, ಅವರ ತೋಳಿನ ಮೇಲೆ ಮಲಗುವುದು ಅಥವಾ ಹುಡುಗನ ತೋಳಿನಲ್ಲಿ ಬಂಧಿಯಾಗುವುದು ಸುರಕ್ಷತೆ ಎಂದು ಅಂದುಕೊಳ್ಳುತ್ತಾರೆ. ಎತ್ತರ ಇರುವ ಹುಡುಗನ ತೋಳು ಚೆನ್ನಾಗಿರುತ್ತದೆ ಎನ್ನುವ ಭಾವನೆ ಹುಡುಗಿಯರಲ್ಲಿ ಇರುತ್ತದೆ.

ಹಾರ್ಟ್ ಬೀಟ್ಸ್ ಕೇಳಿಸುತ್ತದೆ :- ಜಾಸ್ತಿ ಹೈಟ್ ಇರುವ ಹುಡುಗನನ್ನು ಪ್ರೀತಿಸಿದರ, ಅವರನ್ನು ಹಗ್ ಮಾಡುವಾಗ ಹುಡುಗನ ಹೃದಯದ ಬಡಿತವನ್ನು ಕೇಳಬಹುದು, ಅದು ಹುಡುಗಿಯರಿಗೆ ಸ್ಪೆಷಲ್ ಫೀಲಿಂಗ್ ಕೊಡುತ್ತದೆ. ಹಾಗೆಯೇ ರೊಮ್ಯಾಂಟಿಕ್ ಆಗಿ ಕೂಡ ಇರುತ್ತದೆ. ಹುಡುಗಿಯರಿಗೆ ಇದು ತುಂಬಾ ಇಷ್ಟ.

ಗಮನ ಸೆಳೆಯಬಹುದು :- ಹುಡುಗರು ಎತ್ತರ ಇದ್ದರೆ, ಗುಂಪಿದ್ದರು ಕೂಡ ಅವರನ್ನು ಕಂಡುಹಿಡಿಯುವುದು ಈಸಿ. ಹೈಟ್ ಇರುವವರು ಎಲ್ಲರ ಗಮನ ಸೆಳೆಯುತ್ತಾರೆ. ಹಾಗೆಯೇ ಮನೆಯಲ್ಲಿ ಎತ್ತರದಲ್ಲಿ ಇರುವ ವಸ್ತುಗಳನ್ನು ಅವರು ಬಹಳ ಬೇಗ ತೆಗೆದುಕೊಡಬಹುದು.

ಸೆಕ್ಸಿ ಆಗಿರುತ್ತಾರೆ :- ಹೆಚ್ಚು ಹೈಟ್ ಇರುವ ಹುಡುಗರು ನೋಡುವುದಕ್ಕೆ ಸೆಕ್ಷಿ ಆಗಿರುತ್ತಾರೆ ಎನ್ನುವ ಫೀಲಿಂಗ್ ಹುಡುಗಿಯರಲ್ಲಿ ಇರುತ್ತದೆ. ಅವರ ಹೈಟ್ ಗೆ ತಕ್ಕ ಹಾಗೆ ಫಿಟ್ನೆಸ್ ಕೂಡ ಇದ್ದರೆ ಹುಡುಗ ಪರ್ಫೆಕ್ಟ್ ಆಗಿರುತ್ತಾನೆ ಎಂದು ಅಂದುಕೊಳ್ಳುತ್ತಾರೆ. ಹಾಗಾಗಿ ಎತ್ತರ ಇರುವ ಹುಡುಗನಿಂದ ಈಕೆಗೆ ಸಂತೋಷ ಸಿಗುತ್ತದೆ ಎಂದು ಅಂದುಕೊಳ್ಳುತ್ತಾರೆ.

ಆತ್ಮವಿಶ್ವಾಸ ಹೆಚ್ಚಿರುತ್ತದೆ :- ಹೆಚ್ಚು ಹೈಟ್ ಇರುವ ಹುಡುಗರಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ, ಹೈಟ್ ಕಡಿಮೆ ಇರುವವರಲ್ಲಿ ಆತ್ಮವಿಶ್ವಾಸ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ. ಹೈಟ್ ಹೆಚ್ಚಾಗಿರುವ ಹುಡುಗರು ಯಾವುದೇ ಪರಿಸ್ಥಿತಿ ಇದ್ದರು ಅದನ್ನು ಧೈರ್ಯವಾಗಿ ಎದುರಿಸುತ್ತಾರೆ.

Comments are closed.