Actress Kushboo: ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಷ್ಟು ಬರಗೆಟ್ಟು ಹೋಗಿದ್ನಾ ಆ ಅಪ್ಪ? ಖ್ಯಾತ ನಟಿ ಬಿಚ್ಚಿಟ್ಟ ಜೀವನದ ಕಹಿ ಸತ್ಯ; ಯಾವ ನಟಿ ಗೊತ್ತೇ?

Actress Kushboo: ಅಬ್ಬಾ ಇಂತವರೂ ಇರ್ತಾರಾ ಅಂತ ಅನ್ನಿಸದೇ ಇರಲ್ಲ ಈ ಘಟನೆಯ ಬಗ್ಗೆ ತಿಳಿದ್ರೆ! ತಂದೆ ಮಗಳ ನಡುವಿನ ಸಂಬಂಧ ಬಹಳ ಪವಿತ್ರವಾದದ್ದು. ಮಗಳಿಗೆ ತಂದೆಯೇ ಎಲ್ಲಾ. ಅಮ್ಮನಿಗಿಂತಲೂ ಒಂದು ಹಿಡಿ ಜಾಸ್ತಿನೇ ಅಪ್ಪನನ್ನು ಮಗಳು ಪ್ರೀತಿ ಮಾಡುತ್ತಾಳೆ. ಅದೆಷ್ಟೋ ಅಪ್ಪನಿಗೆ ಮಗಳೇ ಸೂಪರ್ ವೂಮೆನ್. ತಂದೆಯನ್ನ ಮಗಳು ಸೂಪರ್ ಮ್ಯಾನ್ ಎಂದೇ ಭಾವಿಸುತ್ತಾಳೆ. ಆಕೆಗೆ ಜಗತ್ತಿನಲ್ಲಿ ಎಲ್ಲವೂ ಅಪ್ಪನೇ ಆಗಿರುತ್ತಾನೆ. ಆದರೆ ಇಂಥ ಸಮಾಜದಲ್ಲಿ ಕೆಟ್ಟ ತಂದೆಯರೂ ಇರ್ತಾರೆ ಅನ್ನೋದೆ ವಿಪರ್ಯಾಸ.

ಇತ್ತೀಚಿಗೆ ನಟಿ ಖುಷ್ಭು ಅವರು ತಮ್ಮ ಜೀವನದಲ್ಲಿ ನಡೆದಿದ್ದ ಕಹಿ ಘಟನೆಯನ್ನು ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಖುಷ್ಬು, ತಮಿಳು, ತೆಲುಗು, ಕನ್ನಡ ಮೊದಲಾದ ಭಾಷೆಗಳಲ್ಲಿ ನಟಿಸಿದ್ದಾರೆ. ಇಂತಿಪ್ಪ ಖುಷ್ಬು ಅವರು ಇದೀಗ ರಾಜಕೀಯದಲ್ಲಿಯೂ ಕೂಡ ಸಕ್ರಿಯರಾಗಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಖುಷ್ಭು ತಮ್ಮ ಜೀವನದಲ್ಲಿ ನಡೆದಿದ್ದ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಟಿ ಖುಷ್ಭು ಅವರಿಗೆ ಅವರು 8 ವರ್ಷ ವಯಸ್ಸಿರುವಾಗ ಅವರ ತಂದೆಯೇ ಲೈಂಗಿಕ ಕಿರುಕುಳ ನೀಡುತ್ತಿದ್ದರಂತೆ. ಸುಮಾರು ವರ್ಷ ಈ ವಿಷಯವನ್ನು ಯಾರಿಗೂ ಹೇಳಿಕೊಳ್ಳದ ಆಕೆ ಕೊನೆಗೆ 15 ವರ್ಷ ವಯಸ್ಸಿನಲ್ಲಿ ಈ ವಿಷಯವನ್ನು ಅಮ್ಮನ ಬಳಿ ಹೇಳಿದರಂತೆ. ಎಲ್ಲಿ ತನ್ನ ಮಾತನ್ನು ತಾಯಿ ಒಪ್ಪುವುದಿಲ್ಲವೋ ಎಂದೇ ಭಯದಿಂದ ಖುಷ್ಬು ಅಷ್ಟು ವರ್ಷ ಸುಮ್ಮನಿದ್ದರು.

ಇದು ಈ ನಟಿಯೊಬ್ಬರ ಜೀವನದಲ್ಲಿ ಮಾತ್ರ ನಡೆದಿರುವುದಲ್ಲ. ಇಂದು ಸಮಾಜದಲ್ಲಿ ಇಂತಹ ಘಟನೆಗಳು ಹಲವಾರು ನಡೆಯುತ್ತಿವೆ. ಮಗಳಿಗೆ ರಕ್ಷಣೆ ಕೊಡಬೇಕಾಗಿರುವ ಅಪ್ಪನೇ ಮಗಳ ಮೇಲೆ ಕಣ್ಣು ಹಾಕುವುದು ಅಂದ್ರೆ ಕ್ಷಮಿಸುವಂತಹ ವಿಚಾರವೂ ಅಲ್ಲ, ಅರಗಿಸಿಕೊಳ್ಳುವುದಕ್ಕೂ ಸಾಧ್ಯವೇ ಇಲ್ಲ. ಮಗಳನ್ನು ರಕ್ಷಣೆ ಮಾಡಬೇಕಾಗಿರುವುದು ತಂದೆ. ಬೆಲಿಯೇ ಎದ್ದು ಹೊಲ ಮೈದಂತೆ ಎನ್ನುವ ಮಾತಿದೆ. ಅಂತೆಯೇ ತಂದೆಯಿಂದ ಮಗಳೆ ರಕ್ಷಣೆಗಾಗಿ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದೇ ನಿಜಕ್ಕೂ ಶೋಚನೀಯ!

Comments are closed.