Surya Grahan 2023: ವರ್ಷದ ಮೊದಲ ಸೂರ್ಯ ಗ್ರಹಣ; ಈ ರಾಶಿಯವರ ಮೇಲೆ ಬೀರಲಿದೆ ಗ್ರಹಣದ ಛಾಯೆ: ಎಚ್ಚರವಾಗಿರದಿದ್ದರೆ ಅಪಾಯ ತಪ್ಪಿದ್ದಲ್ಲ, ಯಾವ ರಾಶಿಯವರು ಗೊತ್ತೇ?

Surya Grahan 2023: ಈ ವರ್ಷದ ಮೊದಲ ಸೂರ್ಯ ಗ್ರಹಣ ಏಪ್ರಿಲ್ 20ರಂದು ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಣಕ್ಕೆ ವಿಶೇಷವಾದ ಮಹತ್ವವಿದೆ. ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ಸಂಭವಿಸಿದಾಗ ಎಲ್ಲಾ 12 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರುತ್ತವೆ. ಅದರಲ್ಲೂ ಈ ಬಾರಿ ಏಪ್ರಿಲ್ 20ರಂದು ನಡೆಯಲಿರುವ ಸೂರ್ಯ ಗ್ರಹಣ ಕೆಲವು ರಾಶಿಯವರ ಮೇಲೆ ಮಂಗಳಕರ ಪ್ರಭಾವ ಬೀರಲಿದ್ದರೆ ಇನ್ನು ಕೆಲವು ರಾಶಿಯವರ ಮೇಲೆ ಅಶುಭದ ಛಾಯೆ ಬೀರಲಿದೆ. ವರ್ಷದ ಮೊದಲ ಸೂರ್ಯ ಗ್ರಹಣ ಭಾರತದಲ್ಲಿ ಕಾಣಿಸುವುದಿಲ್ಲ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಫಿಲಿಪೈನ್ಸ್ ಮತ್ತು ಪೆಸಿಫಿಕ್ ಮಹಾಸಾಗರದ ಕಡೆಗೆ ಗೋಚರವಾಗುತ್ತದೆ. ಆದರೆ ಭಾರತದಲ್ಲಿ ಅನೇಕ ರಾಶಿಗಳ ಮೇಲೆ ಅದರ ಪರಿಣಾಮ ಅಂತೂ ಇದ್ದೇ ಇರುತ್ತದೆ. ಹಾಗಾದ್ರೆ ಗ್ರಹಣದ ಪ್ರಭಾವ ಯಾವ ರಾಶಿಯವರ ಮೇಲೆ ಇದೆ ನೋಡೋಣ.

ಮೇಷ ರಾಶಿ;

ಗ್ರಹಣದ ಸಮಯದಲ್ಲಿ ಸೂರ್ಯನು ಮೇಷ ರಾಶಿಯಲ್ಲಿ ಇರುತ್ತಾನೆ. ಇದು ಸೂರ್ಯನ ಶ್ರೇಷ್ಠ ಚಿಹ್ನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಗಣಿಸಲ್ಪಡುತ್ತದೆ. ಗ್ರಹಣದ ಸಮಯದಲ್ಲಿ ಮೇಷ ರಾಶಿಯವರ ಮೇಲೆ ಸಂಕಷ್ಟದ ಪ್ರಭಾವ ಉಂಟಾಗಲಿದೆ, ವೃತ್ತಿ ಜೀವನದಲ್ಲಿಯೂ ಸಮಸ್ಯೆ ಎದುರಿಸಬೇಕಾಗಬಹುದು. ಕೌಟುಂಬಿಕ ಶಾಂತಿ ಹಾಳಾಗುತ್ತದೆ.  ಆರೋಗ್ಯದಲ್ಲಿಯೂ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸಿಂಹ ರಾಶಿ:

ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯ ಗ್ರಹಣದ ಸಮಯದಲ್ಲಿ ಸಿಂಹ ರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಹಾಗಾಗಿ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತ ಅನುಭವಿಸ ಬೇಕಾಗಬಹುದು. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಲು ಸಾಧ್ಯವಿಲ್ಲ. ಪ್ರೀತಿ ಪ್ರೇಮದ ವಿಷಯಗಳು ಸೋಲುತ್ತವೆ. ಆರಂಭದಲ್ಲಿ ಹೆಚ್ಚಿನ ಸಮಸ್ಯೆ ಇದ್ದರೂ ಕ್ರಮೇಣ ಪರಿಸ್ಥಿತಿ ಸುಧಾರಣೆ ಆಗುತ್ತದೆ.

ಕನ್ಯಾ ರಾಶಿ:

ಕನ್ಯಾ ರಾಶಿಯ 8ನೇ ಮನೆಯಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ರಾಶಿಯವರು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಈ ಸಂದರ್ಭದಲ್ಲಿ ಹೆಚ್ಚು ಕೋಪ ಮಾಡಿಕೊಂಡರೆ ಸಮಸ್ಯೆ ಉದ್ಭವಿಸಬಹುದು ಸಂಬಂಧಗಳು ಹಾಳಾಗಬಹುದು. ಯಾವುದೇ ಮಾತನಾಡುವ ಮೊದಲು ಎಚ್ಚರಿಕೆ ವಹಿಸಿ ಯೋಚಿಸದೆ ಕೆಲಸ ಮಾಡಿದರೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವ್ಯಾಪಾರದಲ್ಲಿ ನಷ್ಟವು ಆಗಬಹುದು.

ಮಕರ ರಾಶಿ:

ಮಕರ ರಾಶಿಯ 4ನೇ ಮನೆಯಲ್ಲಿ ಸೂರ್ಯ ಗ್ರಹಣ ಸಂಭವಿಸುತ್ತದೆ ಈ ರಾಶಿಯವರ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಹಾಗಾಗಿ ಆರೋಗ್ಯದ ವಿಚಾರದಲ್ಲಿ ಎಚ್ಚರ ವಹಿಸಿ. ಹಳೆ ವಾಹನದ ರಿಪೇರಿ ಖರ್ಚು ಹೆಚ್ಚಾಗುತ್ತದೆ. ಹೊರಗಡೆ ತಿನ್ನುವುದನ್ನು ತಪ್ಪಿಸಿ ಕಾಯಿಲೆಗಳಿಂದಾಗಿ ಅಧಿಕ ಹಣ ಖರ್ಚಾಗಬಹುದು ಆರ್ಥಿಕವಾಗಿ ಸಂಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತದೆ.

Comments are closed.