World’s Smartest Student Sametha Saxena: ‘ವಿಶ್ವದ ಅತಿ ಬುದ್ಧಿವಂತ ವಿದ್ಯಾರ್ಥಿ’ ಎನ್ನುವ ಪಟ್ಟ ಮುಡಿಗೇರಿಸಿಕೊಂಡ ಭಾರತದ 8 ವರ್ಷದ ಕೂಸು; ಯಾರು ಗೊತ್ತಾ ಆಕೆ?!

World’s Smartest Student Sametha Saxena: ಭಾರತ ಅದೆಷ್ಟೋ ವಿಷಯದಲ್ಲಿ ವಿಶ್ವಕ್ಕೆ ಮಾದರಿಯಾಗಿದೆ. ಭಾರತದಲ್ಲಿ ಬುದ್ಧಿವಂತರಿಗೆನೂ ಕಡಿಮೆ ಇಲ್ಲ. ಇಂದು ಅದೆಷ್ಟು ಸಂಶೋಧನೆಗಳಲ್ಲಿ, ವೈದ್ಯಕೀಯ ಕ್ಷೇತ್ರಗಳಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಭಾರತೀಯರು ಬುದ್ಧಿವಂತರು ಎನ್ನುವ ಕಾರಣಕ್ಕೆ ವಿದೇಶಿಯರು ಕೂಡ ಭಾರತೀಯರನ್ನ ತಮ್ಮತ್ತ ಸೆಳೆದುಕೊಳ್ಳುತ್ತಾರೆ. ಇದೀಗ ಭಾರತೀಯರು ಬುದ್ಧಿವಂತರು ಎನ್ನುವ ವಿಷಯ ಮತ್ತೊಮ್ಮೆ ಜಗತ್ತಿಗೆ ಗೊತ್ತಾಗಿದೆ ಹೇಗೆ ಅಂತೀರಾ !?

ಭಾರತೀಯ ಮೂಲದ ಅಮೆರಿಕನ್ ವಿದ್ಯಾರ್ಥಿನಿ ಸಮೇತ ಸಕ್ಸೇನಾ ಅವರನ್ನು ವಿಶ್ವದ ಬುದ್ಧಿವಂತ ವಿದ್ಯಾರ್ಥಿ ಎಂದು ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ (CTY) ಗುರುತಿಸಿದೆ. ಸಮೇತ ಕೇವಲ 8 ವರ್ಷ ವಯಸ್ಸಿನಲ್ಲಿ ಗ್ಲೋಬಲ್ ಟ್ಯಾಲೆಂಟ್ ಸರ್ಚ್ ಕಾರ್ಯಕ್ರಮಕ್ಕೆ ಅರ್ಹತೆ ಪಡೆದ ಕಿರಿಯ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕೆ 76 ದೇಶಗಳಿಂದ ಹದಿನೈದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದರು. ಇದರಲ್ಲಿ ಉನ್ನತ ಹಕ್ಕು ಪರೀಕ್ಷೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ವಿಶ್ವದ ಬುದ್ಧಿವಂತ ವಿದ್ಯಾರ್ಥಿ ಎಂದು ಸಮೇತ ಅವರನ್ನ ಗುರುತಿಸಲಾಗಿದ್ದು ಆಕೆಯ ಪ್ರತಿಭೆಯ ಆಧಾರದ ಮೇಲೆ ಈ ಕಾರ್ಯಕ್ರಮದಲ್ಲಿ ಈ ಒಂದು ಕಿರೀಟವನ್ನು ನೀಡುವುದಕ್ಕಾಗಿ ಸಾಕಷ್ಟು ಬೇರೆಬೇರೆ ರೀತಿಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಸಿಟಿವೈ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಡಾಕ್ಟರ್ ಆಮಿ ಶೆಲ್ಟನ್ “ನಮ್ಮ ವಿದ್ಯಾರ್ಥಿಗಳ ಯಶಸ್ಸನ್ನು ಕೇವಲ ಪರೀಕ್ಷೆ ಮೂಲಕ ಗುರುತಿಸುವುದಲ್ಲ. ಬದಲಾಗಿ ಅವರ ಕಲಿಕೆ, ಅವರು ತಮ್ಮ ಯುವ ಜೀವನದಲ್ಲಿ ಇದುವರೆಗೆ ಗಳಿಸಿರುವ ವಿಜ್ಞಾನ ಎಲ್ಲದಕ್ಕೂ ನಾವು ಕೊಡಲಾಗುವ ಒಂದು ಗೌರವ” ಎಂದು ಹೇಳಿದ್ದಾರೆ.

ಕಳೆದ ವರ್ಷ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿ ಎನ್ನುವ ಹೆಸರನ್ನು 13 ವರ್ಷದ ವಿದ್ಯಾರ್ಥಿನಿ ನತಾಶ ಪಡೆದುಕೊಂಡಿದ್ದಳು. ಈ ವರ್ಷ ಅದಕ್ಕಿಂತ ಚಿಕ್ಕ ವಯಸ್ಸಿನ ಅಂದರೆ ಎಂಟು ವರ್ಷದ ಸಮೇತ ಪಡೆದುಕೊಂಡಿದ್ದಾಳೆ. ಇದು ಭಾರತದ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ.

Comments are closed.