Weekend with Ramesh; ವೀಕೆಂಡ್ ವಿತ್ ರಮೇಶ್; ಕಡೆಗೂ ರೀವಿಲ್ ಆಯ್ತು ಕೆಂಪು ಕುರ್ಚಿಯ ಮೇಲೆ ಕೂರುವ ಮೊದಲ ಅತಿಥಿ ಹೆಸರು; ಗೊತ್ತಾದ್ರೆ ನಿಂತಲ್ಲೇ ‘ಡ್ಯಾನ್ಸ್ ‘ಮಾಡ್ತೀರಾ?! ಯಾವಾಗಿಂದ ಪ್ರಸಾರ ಗೊತ್ತಾ?

Weekend with Ramesh: ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ನೋಡೋಕೆ ನೀವ್ ರೆಡಿ ಅಲ್ವಾ? ಕಾರ್ಯಕ್ರಮ ನಡೆಸಿಕೊಡಲು ರಮೇಶ್ ಅರವಿಂದ್ ಕೂಡ ರೆಡಿ. ಹಾಗಾದ್ರೆ ಸಾಧಕರ ಕುರ್ಚಿಯಲ್ಲಿ ಮೊದಲು ಕೂರೋದು ಯಾರು? ರೀವಿಲ್ ಆಯ್ತು ಮೊದಲ ಸಾಧಕರ ಹೆಸರು.

ಈವರೆಗೆ ರಮೇಶ್ ಅರವಿಂದ್ ಅವರ ಜೊತೆ ಕೆಂಪು ಕುರ್ಚಿಯಲ್ಲಿ ಮೊದಲು ಕಾಂತಾರ ಸಿನಿಮಾದ ಮೂಲಕ ಕಮಾಲ್ ಮಾಡಿದ್ದ ರಿಷಬ್ ಶೆಟ್ಟಿ ಕೂರುತ್ತಾರೆ ಎಂದು ಹೇಳಲಾಗುತ್ತಿತ್ತು. ಇದರಲ್ಲಿ ಯಾರಿಗೂ ಆಷ್ಟಾಗಿ ಆಶ್ಚರ್ಯವೇನು ಇರಲಿಲ್ಲ. ಜನರೂ ಕೂದ ಇದನ್ನೆ ಊಹೆ ಮಡಿದ್ದರು. ಆದರೆ ಈಗಿನ ಮಾಹಿತಿಯ ಪ್ರಕಾರ, ಕರ್ನಾಟಕದವರೇ ಆದ, ವಿಶ್ವಾದ್ಯಂತ ತಮ್ಮ ನೃತ್ಯದ ಮೂಲಕವೇ ಫೇಮಸ್ ಅದ ದೇಶದ ಮೈಕಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವ ಅತಿಥಿಯಾಗಿ ಬರಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮೊದಲ ಎಪಿಸೋಡ್ ಚಿತ್ರೀಕರಣ ಮುಗಿದಿದ್ದು, ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆದಿದೆ. ಈ ಸಮಯದಲ್ಲಿ ನೃತ್ಯ ಸಂಯೋಜಕ ನಟ, ಪ್ರಭುದೇವ ಕೂಡ ಇದ್ದರು ಎಂದು ಹೇಳಲಾಗಿದೆ. ಹಾಗಾಗಿ ಮೈಸೂರು ಮೂಲದ ನಟ ಪ್ರಭುದೇವ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮದ ಸೀಸನ್ 5 ರ ಮೊದಲ ಅತಿಥಿ ಆಗಬಹುದು.

ಇನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸೀಸನ್ 5 ರ ಅತಿಥಿಯಾಗಿ ಯಾವೆಲ್ಲಾ ಗಣ್ಯರು, ಸಾಧರಕು ಬರಬೇಕು ಎಂಬುದರ ಬಗ್ಗೆ ಜನರೂ ಕೂದ ಹಲವರ ಹೆಸರನ್ನು ಸಜೆಸ್ಟ್ ಮಾಡುತ್ತಿದ್ದಾರೆ. ರಿಷಭ್ ಶೆಟ್ಟಿ ಅಂತೂ ಸಾಧಕರ ಸೀಟ್ ಅಲಂಕರಿಸಲಿದ್ದಾರೆ. ಯಾವ ಎಪಿಸೋಡ್ ಅನ್ನೋದು ಪಕ್ಕಾ ಆಗಬೇಕು ಅಷ್ಟೇ. ಇವರನ್ನು ಬಿಟ್ಟು ಜನರ ಬಾಯಿಂದ ಕೇಳಿಬರುತ್ತಿರುವ ಇನ್ನಷ್ಟು ಹೆಸರುಗಳೆಂದರೆ, ಡಾಲಿ ಧನಂಜಯ್, ಮಾಲಾಶ್ರೀ, ರಮ್ಯಾ, ಅನಿಲ್ ಕುಂಬ್ಳೆ, ರಾಹುಲ್ ದ್ರಾಮಿಡ್ ಮೊದಲಾದ ಹೆಸರುಗಳು ಕೇಳಿ ಬರುತ್ತಿವೆ. ಆದರೆ ವಾಹಿನಿ ಸಾಧಕರ ಬಗ್ಗೆ ಇನ್ನೂ ಬಿಟ್ಟುಕೊಟ್ಟಿಲ್ಲ.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಸದ್ಯದಲ್ಲಿಯೇ ಆರಂಭವಾಗಲಿದೆ. ವಾಹಿನಿ ಈಗಾಗಲೇ ಪ್ರೋಮೊ ಕೂಡ ಬಿಡುಗಡೆಯಾಗಿದೆ. ರಮೇಶ್ ಅರವಿಂದ ಇನ್ನಷ್ಟು ಯಂಗ್ ಅಗಿ ಕಾಣುತ್ತಿದ್ದು, ಜನ ಅವರನ್ನು ನೋಡಲು ಕಾತುರರಾಗಿದ್ದಾರೆ.  ಮಾರ್ಚ್ 18ರಂದು ರಮೇಶ್ ಅರವಿಂದ್ ಸಾಧಕರ ಸಾಧನೆಯನ್ನು ಹೊತ್ತು ನಿಮ್ಮ ಮುಂದೆ ಬರಲಿದ್ದಾರೆ ಎನ್ನುವ ಮಾಹಿತಿ ಇದೆ.

Comments are closed.