women’s Cricket: ಆ ಒಂದು  ಕಾರಣಕ್ಕೆ ಸ್ಮೃತಿ ಮಂಧಾನ ಅವರನ್ನು ಹಿಗ್ಗಾಮುಗ್ಗ ನಿಂದಿಸಿದ ಅಭಿಮಾನಿಗಳು; ತಪ್ಪು ತಿದ್ದಿಕೊಳ್ಳುತ್ತಾರಾ ದುಬಾರಿ ಆಟಗಾರ್ತಿ? ಏನಾಗಿದೆ ಗೊತ್ತೇ?

women’s Cricketರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡ ಡಬ್ಲ್ಯೂ ಪಿ ಎಲ್ 2023 ಈಗಾಗಲೇ ಆರಂಭವಾಗಿದ್ದು ಕಪ್ಪು ನಮ್ಮದೇ ಎನ್ನುವ ಜನರ ನಿರೀಕ್ಷೆಯನ್ನು ಹುಸಿ ಮಾಡುವಲ್ಲಿ ನಾಂದಿ ಹಾಡಿದೆ. ಸತತ ಸೋಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಕ್ರಿಕೆಟ್ ತಂಡವನ್ನು ಆತಂಕಕ್ಕೆ ಒಳಪಡಿಸಿದೆ. ಸ್ಮೃತಿ ಮಂಧಾನ ನೇತೃತ್ವದ ತಂಡವು ನಿರೀಕ್ಷಿತ ಪ್ರದರ್ಶನ ನೀಡದೆ ಅಭಿಮಾನಿಗಳ ಎದುರು ತಲೆತಗ್ಗಿಸುವಂತಾಗಿದೆ.

ಡಬ್ಲ್ಯೂ ಬಿ ಎಲ್ ಪಾಯಿಂಟ್ ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ ಆರ್‌ಸಿಬಿ ಮಹಿಳಾ ತಂಡ. ಮಂಧಾನ ಅವರ ನೇತೃತ್ವದ ತಂಡದಲ್ಲಿ ಅವರ ಯಾವುದೇ ಟ್ರಿಕ್ಸ್ ವರ್ಕ್ ಆಗುತ್ತಿಲ್ಲ. ಆರ್ ಸಿ ಬಿ ತಂಡದ ನಾಯಕಿ, ನಾಯಕ ಎಲ್ಲರ ಪರಿಸ್ಥಿತಿಯು ಇದೆ. ತಂಡ ಗೆಲ್ಲಿಸಲು ಅವರಿಂದ ಸಾಧ್ಯವಾಗುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಅಭಿಮಾನಿಗಳು ಬಯ್ಯುತ್ತಿದ್ದಾರೆ. ಸ್ಮೃತಿ ಮಂದಾನ ಅವರ ಬಗ್ಗೆಯಂತೂ ನಿಂದನೆ ಮಾಡಲಾಗುತ್ತಿದೆ.

ಕ್ರಿಕೆಟ್ ಪ್ರೇಮಿಗಳ ಹತಾಶೆ ಮಿತಿ ಮೀರಿದ ಇಂದು ಗೆಲ್ಲಬಹುದು ನಾಳೆ ಗೆಲ್ಲಬಹುದು ಎಂದುಕೊಂಡರೆ ಆರ್‌ಸಿಬಿ ಮಹಿಳಾ ತಂಡ ಒಂದರ ಹಿಂದೆ ಒಂದು ಸೋಲನ್ನೇ ಕಾಣುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವು ತಂಡ ಸೋಲನ್ನು ಅನುಭವಿಸಿತು. ಅದೇ ರೀತಿ ಮುಂಬೈ ಇಂಡಿಯನ್ಸ್ ವಿರುದ್ಧವು ಹೀನಾಯ ಸೋಲು ಕಂಡಿತು. ಮೂರನೆಯದಾಗಿ ಗುಜರಾತ್ ಜೈಂಟ್ಸ್ ವಿರುದ್ಧವೂ ಕೂಡ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಯಿತು. ಅಷ್ಟೇ ಅಲ್ಲದೆ ಯುಪಿ ವಾರಿಯರ್ಜ್ ವಿರುದ್ಧವು ಹೀನಾಯ ಸೋಲು ಕಂಡಿದ್ದಾಯಿತು.

ಆರ್ ಸಿ ಬಿ ಮಹಿಳಾ ತಂಡ ಸೋಲುವುದಕ್ಕಾಗಿ ಕಣಕ್ಕೆ ಇಳಿದಂತಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ನಾಲ್ಕನೇ ಪಂದ್ಯ ಸೋತ ನಂತರ ಮಾತನಾಡಿದ ಮಂಧಾನ “ಉತ್ತಮ ಆಟದ ನಂತರ ಸೋಲನ್ನ ಕಾಣುತ್ತಿದ್ದೇವೆ ನಾಲ್ಕು ಪಂದ್ಯಗಳನ್ನು ಸೋತಿದ್ದೇವೆ. ಈ ಆಪಾದನೆಯನ್ನು ಸ್ವೀಕರಿಸುತ್ತೇನೆ. ಅಗ್ರ ಕ್ರಮ ಅಂಕದ ಬ್ಯಾಟರ್ ಆಗಿ ಬೌಲರ್ ಗಳನ್ನು ರಕ್ಷಿಸಲು ರನ್ನಗಳನ್ನು ಕಲೆ ಹಾಕಬೇಕಾಗಿದೆ” ಎಂದು ಮಂಧಾನ ಹೇಳಿದ್ದಾರೆ.

ನಾವು ಪಂದ್ಯವನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಎಲ್ಲಾ ಆಟಗಾರರ ಜೊತೆಗೆ ಮಾತನಾಡಿ ಅವರನ್ನು ಹುರಿದುಂಬಿಸುತ್ತಿದ್ದೇನೆ. ಕಳೆದ ವಾರ ಕಠಿಣವಾಗಿತ್ತು ಈ ಮೊದಲು ಇಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೇವೆ. ನಮ ತಪ್ಪುಗಳನ್ನು ನಾವೇ ಸರಿಪಡಿಸಿಕೊಳ್ಳಬೇಕು” ಎಂದು ಹೇಳಿದ್ದಾರೆ.

ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಮೃತಿ ಮಂಧಾನ ತನ್ನ ತಂಡವನ್ನು ಕಣಕ್ಕಿಳಿಸಲಿದ್ದಾರೆ. ಈ ಪಂದ್ಯದಲ್ಲಿ ಆದರೂ ಗೆದ್ದು ಟೀಕಿಸುವವರ ಬಾಯಿ ಮುಚ್ಚಿಸುತ್ತಾರಾ ಕಾದು ನೋಡಬೇಕು.

Comments are closed.