Kannada Astrology: ಈ ನಾಲ್ಕು ರಾಶಿಯವರು ಬಂದ ಹಣವನ್ನೇಲ್ಲಾ ಖರ್ಚುಮಾಡುತ್ತಾರೆ, ಮತ್ತೆ ಸಾಲದಲ್ಲಿಯೇ ಮುಳುಗುತ್ತಾರೆ; ಯಾವ ರಾಶಿಯವರು ಗೊತ್ತೇ?

Kannada Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳ ಜನರ ವ್ಯಕ್ತಿತ್ವ, ಸ್ವರೂಪ ಬೇರೆಯದೆ ಆಗಿರುತ್ತದೆ. ಕೆಲವರು ಜೀವನದಲ್ಲಿ ಹೆಚ್ಚು ಹಣ ಮಾಡಿದರೆ ಇನ್ನೂ ಕೆಲವರು ಹಣ ಮಾಡಿದಷ್ಟನ್ನು ಕೂಡ ಕಳೆದುಕೊಳ್ಳುತ್ತಾರೆ. ಕಡೆಗೆ ಸಾಲದಲ್ಲಿ ಮುಳುಗುವ ಪರಿಸ್ಥಿತಿಯು ಬರುತ್ತದೆ. ಕೆಲವರಿಗೆ ಹಣವನ್ನು ಉಳಿಸುವ ಬುದ್ಧಿ ಇರುವುದಿಲ್ಲ. ಕೆಲವರು ಕಷ್ಟಪಟ್ಟು ದುಡಿದು ಮನೆ ಸಂಸಾರ ಅಂತ ಎಷ್ಟೇ ಹಣ ಸುರಿದರು ಅವರ ಕೈಯಲ್ಲಿ ಸ್ವಲ್ಪವೂ ಹಣ ನಿಲ್ಲುವುದಿಲ್ಲ ಇನ್ನು ಕೆಲವರು ತಮ್ಮ ಶೋಕಿಗಾಗಿ ಇತರ ಬೇಡದ ಕಾರಣಕ್ಕಾಗಿ ಹಣವನ್ನು ಖರ್ಚು ಮಾಡಿ ಕೊನೆಗೆ ಸಾಲದಲ್ಲಿ ಮುಳುಗುತ್ತಾರೆ. ಹಾಗಾದ್ರೆ ಯಾವ ರಾಶಿಯವರು ಹಣವನ್ನು ಉಳಿಸದೇ ಸಾಲದಲ್ಲಿಯೇ ಮುಳುಗಿರುತ್ತಾರೆ ನೋಡೋಣ.

ತುಲಾ ರಾಶಿ:

ಈ ರಾಶಿಯವರ ಕೈಯಲ್ಲಿ ಎಂದಿಗೂ ಹಣ ನಿಲ್ಲುವುದಿಲ್ಲ ಇವರು ಸ್ವಲ್ಪ ದುಂಡು ವೆಚ್ಚ ಮಾಡುತ್ತಾರೆ. ಐಷಾರಾಮಿ ಜೀವನಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ. ದುಡಿದ ಹಣವನ್ನೇಲ್ಲಾ ಕರ್ಚು ಮಾಡುತ್ತಾರೆ.

ಸಿಂಹ ರಾಶಿ:

ಈ ರಾಶಿಯವರು  ಕೂಡ ಸಾಕಷ್ಟು ಬಾರಿ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಾರೆ. ಹೈ ಫೈ ಜೀವನಶೈಲಿಯನ್ನು ಇವರು ಬಯಸುತ್ತಾರೆ. ಹೊರಗಡೆ ಆಹಾರ ಸೇವಿಸುವುದು, ಇದರ ಶೋಕಿಗಾಗಿ ಹಣ ಖರ್ಚು ಮಾಡುವುದು ಇವರ ಸ್ವಭಾವ.

ಮಿಥುನ ರಾಶಿ:

ಈ ರಾಶಿಯವರು ಕೂಡ ಸಾಕಷ್ಟು ಹಣ ಮಾಡುತ್ತಾರೆ ತುಂಬಾ ಸ್ಟೈಲಿಶ್ ಆಗಿರಲು ಬಯಸುವ ಈ ರಾಶಿಯವರು ಅದಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇವರಿಗೂ ಅಷ್ಟೇ ಐಷಾರಾಮಿ ಜೀವನ ನಡೆಸುವುದು ಅಂದರೆ ಬಹಳ ಇಷ್ಟ.

ವೃಶ್ಚಿಕ ರಾಶಿ:

ಈ ರಾಶಿಯವರಿಗೆ ಭವಿಷ್ಯದ ಬಗ್ಗೆ ಯೋಚನೆ ಇಲ್ಲ. ಹಣವನ್ನು ಖರ್ಚು ಮಾಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಇವರು ಜೀವನವನ್ನು ಎಂಜಾಯ್ ಮಾಡಲು ಬಯಸುತ್ತಾರೆ. ಅದಕ್ಕಾಗಿ ಎಷ್ಟು ಹಣ ಬೇಕಾದರೂ ಸುರಿಯುತ್ತಾರೆ.

Comments are closed.