Film News: ನಟಿ ಮೀನಾಗೆ ಆ ನಟನ ಮೇಲೆ ಫುಲ್ ಪ್ರೀತಿ ಜಾಸ್ತಿ ಆಗಿತ್ತಂತೆ, ಆದರೆ ಆತ ಮತ್ತೊಬ್ಬರನ್ನು ಮದುವೆಯಾದಾಗ ನಟಿ ಮಾಡಿದ್ದೇನು ಗೊತ್ತೇ??

Film News: ನಟಿ ಮೀನಾ ಅವರ ಹೆಸರಿಗೆ ಪರಿಚಯದ ಅವಶ್ಯಕತೆಯೇ ಇಲ್ಲ.ಇ ಈ ನಟಿ ಬಣ್ಣದ ರಂಗದಲ್ಲಿ ಗುರುತಿಸಿಕೊಂಡು ದಶಕಗಳೇ ಉರುಳಿವೆ. ಮೀನ ಅವರು ಕನ್ನಡ ಅಲ್ಲದೆ ತೆಲುಗು ತಮಿಳು ಹಾಗೂ ಮಲಯಾಳಂ ನಲ್ಲಿ ಕೂಡ ಒಳ್ಳೆಯ ಹೆಸರು ಮಾಡಿದ್ದಾರೆ. ಒಂದು ಕಾಲದಲ್ಲಿ ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಇಂದು ಕೂಡ ಬಣ್ಣ ಪ್ರಪಂಚದಲ್ಲಿ ಸಕ್ರಿಯರಾಗಿದ್ದಾರೆ. ಇವರು ನಟಿಸುತ್ತಿರುವ ಪಾತ್ರಗಳನ್ನು ಮರೆಯದ ಹಾಗೆ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಈಗ ಮೀನ ಅವರು ಕನ್ನಡ ತೆಲುಗು ತಮಿಳು ಹಾಗೂ ಮಲಯಾಳಂ ನಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ನಟಿ ಮೀನಾ ಅವರು ತಮ್ಮ ಫಸ್ಟ್ ಲವ್ ಬಗ್ಗೆ ಲೈವ್ ಶೋ ನಲ್ಲಿ ಹೇಳಿರುವ ಮಾತುಗಳು ಈಗ ಎಲ್ಲೆಡೆ ವೈರಲ್ ಆಗಿದೆ. ಎಲ್ಲರಿಗು ತಿಳಿದಿರುವ ಹಾಗೆ ನಟಿ ಮೀನಾ ಅವರು 2009ರಲ್ಲಿ ವಿದ್ಯಾ ಸಾಗರ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರಿಬ್ಬರ ಪ್ರೀತಿಯ ಸಂಕೇತವಾಗಿ ನೈನಿಕಾ ಎನ್ನುವ ಹೆಣ್ಣುಮಗುವಿದೆ. ನೈನಿಕಾ ಈಗಾಗಲೇ ನಟ ವಿಜಯ್ ಅವರೊಟ್ಟಿಗೆ ತೆರಿ ಚಿತ್ರದಲ್ಲಿ ಅವರ ಮಗಳಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಆದರೆ ಮೀನಾ ಅವರ ಗಂಡ ಕಳೆದ ವರ್ಷ ಜೂನ್ ತಿಂಗಳಲ್ಲಿ ಅಂಗಾಗಳ ವೈಫಲ್ಯದಿಂದ ಚೆನ್ನೈ ನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದೀಗ ಎಲ್ಲವನ್ನೂ ಮರೆತು ಮೀನಾ ಮತ್ತೆ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

film news actress meena life story 1 | Live Kannada News
Meena and Hrithik Roshan

ಬಹಳ ವರ್ಷಗಳ ಹಿಂದೆ ಟಿವಿ ಮಾಧ್ಯಮದಲ್ಲಿ ಸುಹಾಸಿನಿ ಅವರು ನಡೆಸಿಕೊಡುತ್ತಿದ್ದ ಸಿನಿ ಉಲಗಂ ಎಂಬ ಇಂಟರ್ವ್ಯೂ ನಲ್ಲಿ ತಮ್ಮ ಮೊದಲ ಪ್ರೀತಿ ಬಗ್ಗೆ ಬಹಿರಂಗವಾಗಿ ತಿಳಿಸಿದ್ದರು. ಹೌದು ನಟಿ ಸುಹಾಸಿನಿ ಅವರು ಪರದೆಯ ಮೇಲೆ ಹೃತಿಕ್ ರೋಷನ್ ಹಾಗೂ ಮೀನಾ ಅವರ ಫೋಟೋವನ್ನು ಹಾಕಿ ತೋರಿಸಿದಾಗ ಮೀನಾ ಅವರು ಈ ನಟ ನನ್ನ ಮೊದಲ ಪ್ರೇಮಿ ಎಷ್ಟರ ಮಟ್ಟಿಗೆ ಎಂದರೆ ಅವರು ಸಿನಿಮಾ ನೋಡಿ ಹುಚ್ಚಿಯಾಗಿದ್ದೆ.. ಯಾವಾಗಲು ನಮ್ಮ ಅಮ್ಮನ ಬಳಿ ನನ್ನನ್ನು ಹೃತಿಕ್ ರೋಷನ್ ಜೊತೆ ಮದುವೆ ಮಾಡಿ ಕೊಡಿ ಎಂದು ಕೇಳುತ್ತಿದ್ದೆ. ಅವರ ಮದುವೆಯ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ ಎಂದು ಕೂಡ ಹೇಳಿದ್ದರು. ಹೀಗೆ ಶುರುವಾದ ಈ ಪ್ರೀತಿ ವರ್ಷಗಳು ಉರುಳಿದಂತೆ ಕಡಿಮೆಯಾಗಿ ಈಗ ಕೇವಲ ಅಭಿಮಾನಿಯಾಗಿದ್ದೇನೆ ಎಂದು ತಿಳಿಸಿದರು.

Comments are closed.