Job Opportunity: ಹಳ್ಳಿಗಳಲ್ಲಿ ಡಿಮ್ಯಾಂಡ್ ಹೆಚ್ಚುತ್ತಿರುವ ಈ ಉದ್ಯಮ ಆರಂಭ ಮಾಡಿ, ಲಕ್ಷ ಲಕ್ಷ ಆದಾಯ ಗಳಿಸಿ. ನಿಮಗೆ ನೀವೇ ಬಾಸ್ ಆಗಿ

Job Opportunity: ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಕರೊನಾ ಸೋಂಕಿನ ಪರಿಣಾಮ ಹಲವು ಜನರು ಕೆಲಸ ಕಳೆದುಕೊಂಡ ನಂತರ, ಹಲವರು ಸ್ವಂತ ಉದ್ಯಮ ಶುರು ಮಾಡುವ ಆಸಕ್ತಿ ಹೊಂದಿದ್ದಾರೆ. ಇಂಥಹ ಪ್ಲಾನ್ ಹೊಂದಿರುವವರಿಗೆ ಒಂದು ಲಾಭದಾಯಕ ಬ್ಯುಸಿನೆಸ್ ಐಡಿಯಾವನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಬ್ಯುಸಿನೆಸ್ ಶುರು ಮಾಡಲು ನಿಮಗೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿ ಬೇಕಾಗುತ್ತದೆ, ಇದರಿಂದ ತಿಂಗಳಿಗೆ ಲಕ್ಷ ರೂಪಾಯಿ ಗಳಿಸಬಹುದು. ಇಷ್ಟು ಲಾಭ ತರುವ ಬ್ಯುಸಿನೆಸ್ ಸಿಸಿಟಿವಿ ಬ್ಯುಸಿನೆಸ್ ಆಗಿದೆ..

ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ, ಕ್ಯಾಮರಾಗಳನ್ನು ಅಳವಡಿಸಲು ಒಬ್ಬ ವ್ಯಕ್ತಿ ಮಾತ್ರ ಕೆಲಸಕ್ಕೆ ಸಹಾಯಕ್ಕೆ ಬೇಕಾಗುತ್ತಾನೆ. ಇದು ಕ್ಲೋಸ್ಡ್ ಸಿಸ್ಟಂ ಅಗಿರುವ ಕಾರಣ, ಇಲ್ಲಿನ ಎಲ್ಲಾ ಅಂಶಗಳು ನೇರವಾಗಿ ಕನೆಕ್ಟ್ ಆಗಿರುತ್ತದೆ. ಇಲ್ಲಿ ರೆಕಾರ್ಡ್ ಆಗುವ ವಿಡಿಯೋವನ್ನು ಲೈವ್ ಟೆಲಿಕಾಸ್ಟ್ ಮಾಡಲಾಗದು, ಆದರೆ ರೆಕಾರ್ಡ್ ಆಗುತ್ತದೆ. ಸಿಸಿಟಿವಿ ಕ್ಯಾಮೆರಾಗೆ ಪುಟ್ಟ ಹಳ್ಳಿಗಳಿಂದ ಹಿಡಿದು ದೊಡ್ಡ ದೊಡ್ಡ ನಗರಗಳವರೆಗೂ ಎಲ್ಲೆಡೆ ಬೇಡಿಕೆ ಇದೆ. ಸೆಕ್ಯೂರಿಟಿ ವಿಚಾರದಲ್ಲಿ ಸಿಸಿಟಿವಿ ಕ್ಯಾಮೆರಾ ಬಹಳ ಮುಖ್ಯ, ಹಾಗಾಗಿ ಸಿಸಿಟಿವಿ ಕ್ಯಾಮೆರಾ ಬ್ಯುಸಿನೆಸ್ ಗೆ ಬೇಡಿಕೆ ವರ್ಷಗಳು ಕಳೆದ ಹಾಗೆ ಹೆಚ್ಚಾಗುತ್ತಲೇ ಇದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ನಾಲ್ಕು ವಿಭಿನ್ನ ರೀತಿಗಳಿವೆ.. ಮೊದಲನೆಯದು.. ಮನೆಗಳು ಹಾಗೂ ಕಮರ್ಶಿಯಲ್ ಆಫೀಸ್ ಗಳಿಗೆ ಸಿಸಿಟಿವಿ ಕ್ಯಾಮೆರಾ ಹಾಕುವುದು, ಈ ರೀತಿ ಮನೆಗಳು, ಕ್ಯಾಸಿನೊಗಳು, ಅಂಗಡಿಗಳು, ರೆಸ್ಟೋರೆಂಟ್ ಇವುಗಳಿಗೆ ಡೊಮ್ ಕ್ಯಾಮೆರಾವನ್ನು ಇನ್ಸ್ಟಾಲ್ ಮಾಡಲಾಗುತ್ತದೆ. ಇದರ ಶೇಪ್ ನೋಡಿದರೆ, ಮುಖ ಮಾಡಿರುವುದು ಯಾವ ಕಡೆಗೆ ಎಂದು ಹೇಳುವುದು ಕಷ್ಟ. ಇದರ ಬೆಲೆ 1500 ರಿಂದ 2000 ವರೆಗು ಇರುತ್ತದೆ.
ಎರಡನೆಯದು. ಹಗಲು ರಾತ್ರಿ ಒಳ್ಳೆಯ ಲೈಟಿಂಟ್ ಜೊತೆಗೆ ರೆಕಾರ್ಡ್ ಮಾಡುತ್ತದೆ. ಎರಡು ಸಮಯದಲ್ಲಿ ಒಳ್ಳೆಯ ಕ್ಲಾರಿಟಿ ಜೊತೆಗೆ ಬ್ಲ್ಯಾಕ್ ಅಂಡ್ ವೈಟ್ ನಲ್ಲಿ ನಡೆಯುವುದನ್ನು ರೆಕಾರ್ಡ್ ಮಾಡುತ್ತದೆ.

ಇನ್ ಡೋರ್ ಮತ್ತು ಔಟ್ ಡೋರ್ ಎರಡು ಕಡೆ, 24 ಗಂಟೆ ರೆಕಾರ್ಡ್ ಮಾಡುವ ಈ ಕ್ಯಾಮೆರಾದ ಬೆಲೆ 2500 ರಿಂದ 3500 ರೂಪಾಯಿಗಳು.
ಮೂರನೆಯದು, ಬುಲೆಟ್ ಸಿಸಿಟಿವು ಕ್ಯಾಮೆರಾ, ಇದು ಮಳೆ, ಧೂಳು, ಕೆಸರು ಇಂಥಹ ಯಾವುದೇ ಸಂದರ್ಭ ಇದ್ದರು ಬಳಕೆಗೆ ಬರುತ್ತದೆ, ಹಾಳಾಗದೆ ರೆಕಾರ್ಡ್ ಮಾಡಿಕೊಳ್ಳುತ್ತದೆ. ಇದರ ಬೆಲೆ 1400 ರಿಂದ 2400 ರೂಪಾಯಿ ವರೆಗು ಇರುತ್ತದೆ. ನಿಮ್ಮ ಮಾರ್ಕೆಟಿಂಗ್ ಸ್ಕಿಲ್ ಚೆನ್ನಾಗಿದ್ದರೆ, ಕಡಿಮೆ ಬಜೆಟ್ ನಲ್ಲಿ ಈ ಬ್ಯುಸಿನೆಸ್ ಶುರು ಮಾಡಿ, ಒಳ್ಳೆಯ ಲಾಭ ಗಳಿಸಬಹುದು.

Comments are closed.