Real Story: ಮಕ್ಕಳು ಆಗಿಲ್ಲ ಅಂತ ಸ್ವಾಮೀಜಿ ಬಳಿಗೆ ಹೋದ ಮಹಿಳೆಗೆ ವರ್ಷದೊಳಗೆ ಮಗು ಆಯಿತು ಅದು ಹೇಗೆ ಗೊತ್ತಾ; ಹೀಗೂ ನಡೆಯುತ್ತಾ? ಏನಾಗಿದೆ ಗೊತ್ತೇ?

Real Story: ಇದು ಇಬ್ಬರು ಗಂಡ ಹೆಂಡತಿ ಹಾಗೂ ಅವರ ಜೀವನದಲ್ಲಿ ನಡೆದ ಘಟನೆ. ಹೆಸರು ಶ್ವೇತ ಅದು ಆಕೆಯ ಪತಿ ಶಂಕರ. ಇಬ್ಬರೂ ಮದುವೆಯಾಗಿ ಕೆಲವು ಸಮಯ ಕಳೆದರೂ ಮಕ್ಕಳು ಆಗಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ವೈ ಮನಸು ಕೂಡ ಬೆಳೆಯಿತು. ಹೇಗಾದರೂ ಸಂಸಾರ ನಡೆಸಬೇಕಲ್ಲ ಅಂತ ಶ್ವೇತಾ ಹೊರಗೆ ದುಡಿಯಲು ಹೋದರೆ ಶಂಕರ ಮಾತ್ರ ಇಡೀ ದಿನವು ತನ್ನ ಕರ್ತವ್ಯ ಮರೆತು ಮನೆಯಲ್ಲಿಯೇ ಬಿದ್ದಿರುತ್ತಿದ್ದ. ಇದೇ ಕಾರಣಕ್ಕೆ ಮನೆಯಲ್ಲಿ ಸ್ವಚ್ಛ ಮಾಡುವುದಿರಲಿ, ಸರಿಯಾಗಿ ಅಡುಗೆ ಮಾಡುವುದಿರಲಿ, ಮನೆಯ ಕಿಟಕಿ ತೆರೆಯುವುದಿರಲಿ, ಯಾವುದನ್ನು ಮಾಡದೆ ಮನೆ ಜನರೇ ಇಲ್ಲದ ಭೂತ ಬಂಗಲೆಯಂತೆ ಇತ್ತು. ಇದರಿಂದ  ಶ್ವೇತಾಳಿಗೂ ಬಹಳ ಬೇಸರ ಆಗುತ್ತಿತ್ತು. ಕೊನೆಗೆ ಆ ಊರಿಗೆ ಒಬ್ಬ ಸಾಧು ಬಂದಿದ್ದಾರೆ ಎನ್ನುವ ಸುದ್ದಿ ಶ್ವೇತಾ ಹಾಗೂ ಶಂಕರ ದಂಪತಿಗಳ ಕಿವಿಗೆ ಬೀಳುತ್ತೆ.

ತಮಗೆ ಮಕ್ಕಳಾಗದೆ ಇರುವ ಸಮಸ್ಯೆಗೂ ಪರಿಹಾರ ಸಿಗಬಹುದು ಅಂತ ಶ್ವೇತ ಹಾಗೂ ಶಂಕರ ಸಾಧುವನ್ನು ಭೇಟಿ ಆಗುತ್ತಾರೆ. ಇವರ ಸಮಸ್ಯೆಯನ್ನು ಕೇಳಿದ ಆ ಸ್ವಾಮೀಜಿ ಒಂದು ಮಣ್ಣಿನ ಪಾಟ್ ಕೊಟ್ಟು ಇದನ್ನು ಜೋಪಾನವಾಗಿ ನೋಡಿಕೊಳ್ಳಿ ನಾನು ಮುಂದಿನ ಬಾರಿ ಇಲ್ಲಿಗೆ ಬರುವಾಗ ಇದನ್ನ ಹಿಂತಿರುಗಿಸಿ ನನಗೆ ಕೊಡಬೇಕು ಎಂದು ಹೇಳುತ್ತಾರೆ.

ಸ್ವಾಮೀಜಿ ಮಾತನ್ನು ಮೀರಲಾಗದೆ ಶ್ವೇತ ಹಾಗೂ ಶಂಕರ  ಆ ಮಣ್ಣಿನ ಪಾಟ್ ಅನ್ನು ಮನೆಗೆ ತೆಗೆದುಕೊಂಡು ಬರುತ್ತಾರೆ ಅದು ಸರಿಯಾಗಿದ್ದ ಸ್ಥಳದಲ್ಲಿ ಇಡಬೇಕು ಎಂದು ಕಿಟಕಿಯ ಬಳಿ ಸ್ವಚ್ಚಗೊಳಿಸಿ ಅಲ್ಲಿ ಇಡುತ್ತಾರೆ ಅದೇ ರೀತಿ ಅದರಲ್ಲಿ ಒಂದು ಗಿಡವನ್ನು ನೆಟ್ಟು ಮಣ್ಣನ್ನು ಕೂಡ ಹಾಕುತ್ತಾನೆ ಶಂಕರ. ಆದರೆ ಈ ಗಿಡ ಬೆಳೆಯೋದಕ್ಕೆ ಸೂರ್ಯನ ಕಿರಣ ಬೇಕಲ್ಲ ಅದಕ್ಕಾಗಿ ಕಿಟಕಿ ಬಾಗಿಲನು ತೆರೆಯುತ್ತಾರೆ ಆಗ ಮನೆಯೊಳಗೆ ಸೂರ್ಯನ ಸ್ಪರ್ಶವಾಗುತ್ತದೆ. ಕಿಟಕಿಯ ಬಳಿ ಇದ್ದ ಜೇಡರ ಬಲೆ ಹುಳ, ಹಪ್ಪಡೆ ಎಲ್ಲವೂ ಗಿಡವನ್ನು ಹಾಳು ಮಾಡಬಹುದು ಎಂದು ಭಾವಿಸಿದ ಶ್ವೇತ ಅದನ್ನ ಸ್ವಚ್ಛಗೊಳಿಸುತ್ತಾಳೆ.

ಈಗ ಇನ್ನೂ ಚೆನ್ನಾಗಿ ಬೆಳೆಯಲಿ ಎಂದು ಶಂಕರ ಮನೆಯ ಬಾಲ್ಕನಿಯಲ್ಲಿ ಗಿಡ ತೆಗೆದುಕೊಂಡು ಹೋಗಿ ಇಡುತ್ತಾನೆ. ಶ್ವೇತಾ ಈ ಗಿಡವನ್ನು ಲಕ್ಷ್ಮಿ ದೇವಿಯಂತೆ ಪೂಜಿಸಲು ಆರಂಭಿಸುತ್ತಾಳೆ. ಅದಕ್ಕೆ ಸರಿಯಾಗಿ ನೀರು ಹಾಕಿ ಆರೈಕೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಇನ್ನೊಂದಿಷ್ಟು ಗಿಡ ತರಲು ಶಂಕರ್ ಹಾಗೂ ಶ್ವೇತಾ ದಂಪತಿ ನಿರ್ಧರಿಸುತ್ತಾರೆ ಅದೇ ರೀತಿ ಆ ಗುಲಾಬಿ ಹೂವಿನ ಸುತ್ತ ಇನ್ನಷ್ಟು ಗಿಡ ಬೆಳೆಸುತ್ತಾರೆ.

ಅವರು ತಂದ ಗಿಡಗಳಲ್ಲಿ ಹೂವು ಬಿಡುತ್ತದೆ. ಅದೇ ರೀತಿ ಅವರ ಸಂಸಾರದಲ್ಲಿ ಶ್ವೇತ ಗರ್ಭಿಣಿ ಆಗುತ್ತಾಳೆ. ಹೂವಿನ ಗಿಡದ ಆರೈಕೆ ಮಾಡುತ್ತಾ ಮಾಡುತ್ತಾ ಇಬ್ಬರಲ್ಲಿ ಮತ್ತೆ ಹಳೆಯ ಅನನ್ಯತೆ ಬೆಳೆದಿತ್ತು ಈಗ ಶಂಕರನಿಗೆ ಜವಾಬ್ದಾರಿ ಕೂಡ ಹೆಚ್ಚಿದೆ ಹಾಗಾಗಿ ಆತ ಕೆಲಸಕ್ಕೆ ಹೋಗಲು ಆರಂಭಿಸಿದ್ದಾನೆ ಶ್ವೇತ ಹಾಗೂ ಶಂಕರ ಸಾಧು ಕೊಟ್ಟ ಒಂದು ಪಾಟ್ ನಿಂದ ಸುಂದರವಾದ ಸಂಸಾರ ನಡೆಸಲು ಆರಂಭಿಸಿದ್ದಾರೆ. ಇದೆಲ್ಲಾ ಮಣ್ಣಿನ ಮಡಕೆಯ ಚಮತ್ಕಾರ!

Comments are closed.