Real Story: ಯಾರಿಗೂ ತಿಳಿಯದ ಹಾಗೆ ಗುಟ್ಟಾಗಿ ಮಗುವನ್ನು ಹೊತ್ತು, ಹೆತ್ತು ಕೊನೆಗೆ  ಕುಂತಿಯಂತೇ ನೀರಿನಲ್ಲಿಯೇ ಮುಳುಗಿಸಿ ಬಿಟ್ಟಳು; ಆದರೆ ಇದಕ್ಕೆ ಕಾರಣವಾದ ಹುಡುಗ ಮಾಡಿದ್ದೇನು ಗೊತ್ತೇ?

Real Story: ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳು, ಅಥವಾ 18-19, 20 ವರ್ಷದ ಇನ್ನೂ ಮದುವೆಯಗದ ಯುವತಿಯರು ಮಗುವನ್ನು ಹೆತ್ತು ನಂತರ ಆ ನವಜಾತ ಶಿಶುವನ್ನು ಎಲ್ಲಾದರೂ ಎಸೆದು ಬಂದಿರುವ ಘಟನೆಗಳನ್ನು ಓದುತ್ತೇವೆ. ಕೇಳುತ್ತೇವೆ. ಇಂತಹ ಒಂದು ಘಟನೆ ಪೊಂಕುನ್ನಂ ಶಾಸಕ ರಸ್ತೆ ಕಾಲುವೆಯಲ್ಲಿ ನಡೆದಿದ್ದು, ಅದರ ಹಿನ್ನೆಲೆ ಗೊತ್ತಾದ್ರೆ ಮಾತ್ರ ನೀವು ಕಣ್ಣೀರಿಡೋದು ಪಕ್ಕಾ.

 ನವಜಾತ ಶಿಶುವಿನ ಶ-ವ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿದ ರೀತಿಯಲ್ಲಿ ಪೊಂಕುನ್ನಂ ಶಾಸಕ ರಸ್ತೆ ಕಾಲುವೆಯ ಬಳಿ ಪತ್ತೆಯಾಗಿದೆ. ಇದಕ್ಕೆ ಸಂಬಂಧಪಟ್ಟ ಹಾಗೆ ತನೆಖೆ ನಡೆಸಿದ ಪೋಲಿಸರಿಗೆ ಅರಿವಾಗಿದ್ದು ಮಾತ್ರ ಘೋರ ಸತ್ಯ. ಆ ಶಿಶುವಿನ ಶವವನ್ನು ತ್ರಿಶೂರ್ ನಗರ ಪೊಲೀಸರು ವೈದ್ಯಕೀಯ ಕಾಲೇಜು ಶ-ವಗಾರಕ್ಕೆ ರವಾನಿಸಿದ್ದಾರೆ. ಅಪರಾಧ ನಡೆದ ಕೆಲವೇ ಗಂಟೆಗಳಲ್ಲಿ ಈ ಅಮಾನುಷ ಕೄತ್ಯ ಎಸಗಿದವರನ್ನು ಪೋಲಿಸರು ಬಂಧಿಸಿದ್ದಾರೆ.

ತ್ರಿಶೂರ್ ವರಂಡಿಯಂ ಮಂಬಟ್ಟು ಹೌಸ್ ನ ನಿವಾಸಿ ಮೇಘಾ (22 ವರ್ಷ), ಚಿತ್ತಾಟುಕರ ಹೌಸ್ ನ ನಿವಾಸಿ  ಮ್ಯಾನುಯೆಲ್ (25 ವರ್ಷ) ಹಾಗೂ ಆತನ ಸ್ನೇಹಿತ ಪಾಪ ನಗರ ಕಾಲೋನಿಯ ಕುಂದುಕುಲಂ ಹೌಸ್ ನ ಅಮಲ್ (24 ವರ್ಷ) ಈ ಮೂವರನ್ನೂ ಪೋಲಿಸರು ಬಂಧಿಸಿದ್ದಾರೆ.  ಪೊಂಕುನ್ನಂ ಶಾಸಕ ರಸ್ತೆ ಬಳಿ ನವಜಾತ ಶಿಶುವಿನ ಶ- ವ ಚೀಲದಲ್ಲಿ ಸುತ್ತಿದ ರೀತಿಯಲ್ಲಿ ಪತ್ತೆಯಾಗಿತ್ತು. ಸುತ್ತಲಿನ ಸಿಸಿ ಟಿವಿ ಚೆಕ್ ಮಾಡಿದಾಗ ಈ ಇದನ್ನು ಮಾಡಿದ್ದು ಯಾರು ಎಂಬುದು ಪೋಲಿಸರು ಪತ್ತೆ ಹಚ್ಚಿದ್ದಾರೆ. ತ್ರಿಶೂರ್ ಮೂಲದ ಮ್ಯಾನುವಲ್ ಮತ್ತು ಆತನ ಸ್ನೇಹಿತ ಅಮಲ್ ನನ್ನು ಪೊಲೀಸರು ಸೆರೆಹಿಡಿದು ವಿಚಾರಣೆ ನಡೆಸಿದಾಗ ಅಸಲಿಯತ್ತು ಗೊತ್ತಾಗಿದೆ.

ಎಂ ಕಾಂ ಮುಗಿಸಿ ಖಾಸಗಿ ಕಂಪನಿಯ ಉದ್ಯಮಿ ಆಗಿದ್ದ ಮೇಘಾ ತನ್ನ ಪಕ್ಕದ ಮನೆಯ ಪೇಂಟರ್ ಆಗಿದ್ದ ಮಾನ್ಯುಯಲ್ ನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಹಾಗೆಯೇ ಇಬ್ಬರ ಚಟಕ್ಕೆ ಸಾಕ್ಶ್ಃಇಯಾಗಿ ಆಕೆ ಗರ್ಭಿಣಿಯೂ ಆಗಿದ್ಡಾಳೆ. ಸದಾ ಮನೆಯ ಮಹಡಿ ಕೋಣೆಯಲ್ಲಿಯೇ ಇರುತ್ತಿದ್ದ ಮೇಘಾ ಗರ್ಭಿಣಿ ಎನ್ನುವ ವಿಷಯ ಯಾರಿಗೂ ಗೊತ್ತಿರಲಿಲ್ಲ.  ಕಳೆದ ಶನಿವಾರ ರಾತ್ರಿ ಮಲಗುವ ಕೋಣೆಯಲ್ಲಿ ಮೇಘಾಳ ಹೆರಿಗೆ ಆಗಿದೆ. ಕೂಡಲ್ ಆಕೆ ಸದ್ದಿಲ್ಲದೇ ಶಿಶುವನ್ನು ನೀರು ತುಂಬಿದ ಬಕೆಟ್ ಗೆ ಹಾಕಿ ಸ್ವಲ್ಪ ಗೊಳಿಸಿ, ಪ್ಲಾಸ್ಟಿಕ್ ರವರ್ ನಲ್ಲಿ ಸುತ್ತಿದ್ದಾಳೆ. ಹೆರಿಗೆ ತ್ಯಾಜ್ಯವನ್ನೆಲ್ಲ ಶೌಚಾಲಯದಲ್ಲಿ ಬಿಸಾಡಿದ್ದಾಳೆ. ನಂತರ ತನ್ನ ಪ್ರಿಯತಮ ಮಾನ್ಯುಯಲ್ ಗೆ ಕರೆ ಮಾಡಿದ್ದಾಳೆ. ಮರುದಿನ ಬೆಳಿಗ್ಗೆ 11 ಗಂಟೆ ಸಮಯಕ್ಕೆ ತನ್ನ ಸ್ನೇಹಿತ ಅಮಲ್ ಜೊತೆ ಬಂದ ಮಾನ್ಯುಯಲ್ ಮೃ-ತ ಶಿಶುವಿನ ದೇಹವನ್ನು ಸಂಸ್ಕಾರ ಮಾಡಲು ತೆಹೆದುಕೊಂಡು ಹೋಗಿದ್ದಾರೆ.

ಮಂಡೂರಿನ ಪೆಟ್ರೋಲ್ ಬಂಕ್ ಬಳಿ 150 ರೂಪಾಯಿ ಡೀಸೆಲ್ ಖರೀದಿಸಿ ಅಲ್ಲಿಯೇ ಹತಿರದಲ್ಲಿ ಸಂಸ್ಕಾರ ಮಾಡುವ ಪ್ಲಾನ್ ಅವರದ್ದಾಗಿತ್ತು. ಆದರೆ ಅಲ್ಲಿ ಆಗಲಿಲ್ಲ. ಬಳಿಕ ಬೈಕ್ ಪೆರುಮಂಗಲ ಕಡೆ ತಿರುಗಿದೆ. ಅಲ್ಲಿಯೂ ಆಗದೇ ಇದ್ದಾಗ ಪೊಂಕುನಂ ಶಾಸಕ ರಸ್ತೆಯ ಕಾಲುವೆ ಬಳಿ ಕವರ್ ಇಟ್ಟು ಹೊರಟು ಹೋಗಿದ್ದಾರೆ. ಅರೆಸ್ಟ್ ಅದ ಮೂವರು ಈ ವಿಷಯವನ್ನು ಬಾಯಿಬಿಟ್ಟಿದ್ದಾರೆ.  

Comments are closed.