PMKSNY: ರೈತರ ಕಣ್ಣೀರು ಒರೆಸಲು ಮೋದಿ ಸರ್ಕಾರದ ಮತ್ತೊಂದು ಹೆಜ್ಜೆ, ರೈತರಿಗೆ ಸಿಗಲಿದೆ 8,000 ರೂಪಾಯಿ, ಜಸ್ಟ್ ಒಂದು ಕ್ಲಿಕ್ ಮಾಡಿದರೆ ಸಾಕು, ಹಣ ಪಡೆಯುವುದು ಹೇಗೆ ಗೊತ್ತೇ?

PMKSNY: ಕೇಂದ್ರ ಸರ್ಕಾರ ಈಗಾಗಲೇ ರೈತರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಕೇಂದ್ರ ಸರ್ಕಾರ, ವಾರ್ಷಿಕ ಆದಾಯದ ಬೆಂಬಲವನ್ನು ರೈತರಿಗೆ ಸಮಾನವಾಗಿ ಮೂರು ಕಂತುಗಳಲ್ಲಿ ನೀಡುವಂತಹ ಒಂದು ಯೋಜನೆಯನ್ನು ಜಾರಿಗೆ ತಂದಿತು ಅದುವೇ ಬಿ ಎಂ ಕಿಸಾನ್ ಯೋಜನೆ.

ಪ್ರಧಾನ ಮಂತ್ರಿ ಸನ್ಮಾನ ನಿಧಿ;

ಪ್ರಧಾನ ಮಂತ್ರಿ ಸಮ್ಮಾನ್ ನಿಧಿ ಅಥವಾ ಪಿ ಎಂ ಕಿಸಾನ್ ಯೋಜನೆಯನ್ನು 2019ರಲ್ಲಿ ಆರಂಭಿಸಲಾಯಿತು, ದೇಶದಲ್ಲಿ ಸಣ್ಣ ಮತ್ತು ಕನಿಷ್ಠ ರೈತರಿಗೆ ಆದಾಯದ ಬೆಂಬಲವನ್ನ ಒದಗಿಸಲು ಈ ಯೋಜನೆ ರೂಪಿಸಲಾಗಿತ್ತು ರೈತರಿಗೆ ಪ್ರತಿ ವರ್ಷ 6,000ಗಳನ್ನ ನೀಡಲಾಗುತ್ತಿತ್ತು ಇದನ್ನ ತಲಾ ಎರಡು ಸಾವಿರದಂತೆ ಮೂರು ಕಂತುಗಳಲ್ಲಿ ನೀಡಲಾಗುತ್ತದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನೇರ ಲಾಭವನ್ನು ರೈತರಿಗೆ ನೀಡುವುದಕ್ಕಾಗಿ ರೈತರ ಖಾತೆಗೆ ಈ ಹಣ ವರ್ಗಾವಣೆ ಆಗುತ್ತದೆ.

ಹೆಚ್ಚಿದ ಪಿಎನ್ ಕಿಸಾನ್ ಸಮಾನ್ ನಿಧಿಯ ಮೊತ್ತ:

ಈ ವರ್ಷದ ಅಂದರೆ ಕೇಂದ್ರ ಬಜೆಟ್ 2023ರಲ್ಲಿ ಸರ್ಕಾರ ಈ ನಿಧಿಯ ಹಣಕಾಸಿನ ನೆರವಿನ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. ಅಂದರೆ ಆರು ಸಾವಿರದ ಬದಲಾಗಿ 8,000ರೂ.ಗಳನ್ನು ನೀಡಲಾಗುವುದು. ಇನ್ನು ಫಲಾನುಭವಿ ರೈತರು ವಾರ್ಷಿಕವಾಗಿ ರೂ. 4,000ಗಳನ್ನು ಬೋನಸ್ ಆಗಿ ಪಡೆಯಲಿದ್ದಾರೆ.

ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಗೆ ನೊಂದಾಯಿಸಲು ಹೀಗೆ ಮಾಡಿ:

  • ಅರ್ಹ ರೈತರು ಈ ಯೋಜನೆಯ ಲಾಭ ಪಡೆಯಬಹುದು ಅದಕ್ಕಾಗಿ ಮೊದಲು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು.
  • ಪ್ರತಿ ರಾಜ್ಯ ಸರ್ಕಾರದ ಪಿ ಎಂ ಕೆ ಎಸ್ ಎನ್ ವೈ (PMKSNY) ನೋಡಲ್ ಅಧಿಕಾರಿಗಳನ್ನು ನಾಮ ನಿರ್ದೇಶನ ಮಾಡಲಾಗಿರುತ್ತದೆ. ಈ ಯೋಜನೆ ನೋಂದಾಯಿಸಲು ನೀವು ಅವರನ್ನು ಸಂಪರ್ಕಿಸಬೇಕಾಗುತ್ತದೆ.
  • ರೈತರು ಹೆಸರನ್ನು ನೋಂದಾಯಿಸಿಕೊಳ್ಳಲು ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಸಹ ಸಂಪರ್ಕಿಸಬಹುದು.
  • ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಶುಲ್ಕವನ್ನು ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಿದೆ.

ಆನ್ಲೈನ್ ನೋಂದಣಿ:

ಇನ್ನು ಅರ್ಹ ರೈತರು ಮೀಸಲಾದ ಹೋಟೆಲ್ ಮೂಲಕ ಆನ್ಲೈನ್ ನಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇದಕ್ಕಾಗಿ PMKSNY ಅಧಿಕೃತ ವೆಬ್ ಸೈಟ್ ಗೆ ಹೋಗಿ. ಅಲ್ಲಿ ಫಾರ್ಮರ್ಸ್ ಕಾರ್ನರ್ ಎನ್ನುವ ವಿಭಾಗದಲ್ಲಿ “ಹೊಸ ರೈತರ ನೋಂದಣಿ’ಮೇಲೆ ಕ್ಲಿಕ್ ಮಾಡಿ. ಸ್ವಯಂ ನೋಂದಣಿ ಮಾಡಿಕೊಳ್ಳುವುದರ ಜೊತೆಗೆ ನೀವು ಇಲ್ಲಿಗೆ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ನೋಂದಾಯಿಸಿಕೊಂಡಿದ್ದರೆ ನಿಮ್ಮ ಯೋಜನೆಯ ಸ್ಥಿತಿಯನ್ನು ಕೂಡ ಇಲ್ಲಿ ಪರಿಶೀಲಿಸಬಹುದು. ಅದಕ್ಕಾಗಿ ಫಾರ್ಮರ್ಸ್ ಕಾರ್ನರ್ ಅಡಿಯಲ್ಲಿ ಸ್ವಯಂ ನೊಂದಾಯಿತ/CSC ರೈತರ ಸ್ಥಿತಿ ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

pmkisan.gov.in ಇಲ್ಲಿ ನೀವು ನಿಮ್ಮ ಯೋಜನೆಯ ಸ್ಥಿತಿಯನ್ನು ಪರಿಶೀಲಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಬಂದ ಕೂಡಲೇ ಅದನ್ನು ಮೌಲ್ಯೀಕರಣ ಮಾಡಬೇಕು. ನಂತರ ’ಗೆಟ್ ಡೇಟಾ’ ಮೇಲೆ ಕ್ಲಿಕ್ ಮಾಡಿ. ಈಗ ನಿಮಗೆ ಪಾವತಿಸಲಾದ ಹಣ ಮೊದಲದ ಯೋಜನೆಯ ವಿವರಗಳು ದೊರೆಯುತ್ತವೆ.

Comments are closed.