Real Story: ಮಗಳು ಓದಲಿ ಎಂದು ಕಳುಹಿಸಿದರೆ, ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯಾದ ಮಗಳು: ಇದಕ್ಕೆ ಕಾರಣ ಯಾರು ಅಂತೇ ಗೊತ್ತೆ? ಶಾಕ್ ಆಗಿ ಶೇಕ್ ಆದ ಪೋಷಕರು.

Real story: ಮಕ್ಕಳನ್ನು ಶಾಲೆಗೆ ಕಳಿಸುವುದು ಓದುಗ ಸಲುವಾಗಿ, ಆದರೆ ಮಕ್ಕಳು ಕೆಲವೊಮ್ಮೆ ತಂದೆ ತಾಯಿಗೆ ಗೊತ್ತಾಗದ ಹಾಗೆ ಮಾಡುವ ಕೆಲಸಗಳು ತೆಗೆದುಕೊಳ್ಳುವ ನಿರ್ಧಾರಗಳು ಅವರ ಜೀವನಕ್ಕೆ ತೊಂದರೆ ಕೊಡುವುದು ಮಾತ್ರವಲ್ಲ ತಂದೆ ತಾಯಿಯರ ಜೀವನವನ್ನು ಕಷ್ಟಕ್ಕೆ ಸಿಲುಕಿಸುತ್ತದೆ. ಇಂಥದ್ದೊಂದು ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದ್ದು, ಓದುವುದಕ್ಕೆ ಮಗಳನ್ನು ಶಾಲೆಗೆ ಕಳಿಸಿದರೆ ಆಕೆ ಎಂಥಹ ಕೆಲಸ ಮಾಡಿಕೊಂಡು ಬಂದಿದ್ದಾಳೆ ಗೊತ್ತಾ?

ಸೂರತ್ ನಲ್ಲಿದ್ದ ಒಂದು ಕುಟುಂಬದಲ್ಲಿ ತಂದೆ ಪ್ರೈವೇಟ್ ಸ್ಕೂಲ್ ನಲ್ಲಿ ಕೆಲಸ ಮಾಡುತ್ತಿದ್ದರು, ತಾಯಿ ಕೂಡ ಕೆಲಸಕ್ಕೆ ಹೋಗುತ್ತಿದ್ದರು, ಮಗಳನ್ನು ಮನೆಯ ಹತ್ತಿರವಿದ್ದ ಶಾಲೆಗೆ ಸೇರಿಸಿದ್ದರು. ಇವರ ಮಗಳು ಶಾಲೆಗೆ ಹೋಗಿ ಬರುತ್ತಿದ್ದಳು, ಇದ್ದಕ್ಕಿದ್ದ ಹಾಗೆ ಒಂದು ದಿನ ವಿಪರೀತ ಹೊಟ್ಟೆನೋವು ಎಂದು ಆಕೆ ಹೇಳಿದ್ದು, ಏನಾಗಿದೆ ತೋರಿಸೋಣ ಎಂದು ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿದ್ದಾರೆ. ಆಕೆಯನ್ನು ಪರೀಕ್ಷಿಸಿದ ಡಾಕ್ಟರ್, ನಿಮ್ಮ ಮಗಳು 5 ತಿಂಗಳ ಗರ್ಭಿಣಿ ಎಂದು ಹೇಳಿದ್ದು, ಈ ಮಾತನ್ನು ಕೇಳಿ ಆಕೆಯ ತಂದೆ ತಾಯಿ ಶಾಕ್ ಆಗಿದ್ದಾರೆ.

ಕೊನೆಗೆ ಮಗಳನ್ನು ಸಮಾಧಾನವಾಗಿ ಕೂರಿಸಿಕೊಂಡು ಕೇಳಿದಾಗ, ಆಕೆ ಶಾಲೆಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ್ದು, ಅವನಿಂದಲೇ ಹೀಗಾಗಿದೆ ಎಂದಿದ್ದಾಳೆ. ನಂತರ ತಂದೆ ತಾಯಿ ತಮ್ಮ ಮಗಳನ್ನು ತಕ್ಷಣವೇ ಕರೆದುಕೊಂಡು ಪೊಲೀಸ್ ಠಾಣೆಗೆ ಹೋಗಿ ಆತನ ವಿರುದ್ಧ ದೂರು ನೀಡಿದ್ದು, ತಕ್ಷಣವೇ ಅವನನ್ನು ಬಂಧಿಸಲಾಗಿದೆ. ಅಪ್ರಾಪ್ತೆಯ ಮೇಲೆ ಈ ರೀತಿ ಮಾಡಿರುವುದಕ್ಕೆ ಪೋಕ್ಸೋ ಕಾಯ್ದೆಯ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಓದುವ ವಯಸ್ಸಿನಲ್ಲಿ ಕೇವಲ ಓದಿನ ಕಡೆಗೆ ಗಮನ ಕೊಡಬೇಕು, ಹೀಗೆಲ್ಲಾ ಮಾಡಿಕೊಂಡರೆ, ಮಕ್ಳಳ ಜೀವನ ಹಾಳಾಗುವುದರ ಜೊತೆಗೆ ತಂದೆ ತಾಯಿ ಕೂಡ ಇಡೀ ಜೀವನ ನೋವು ಅನುಭವಿಸಬೇಕಾಗುತ್ತದೆ.

Comments are closed.