brother and sister locked their in ambala:ಇಪ್ಪತ್ತು ವರ್ಷಗಳಿಂದ ಮನೆಯ ಹೊರಗೇ ಬಾರದೇ ಮನೆಯಲ್ಲಿಯೇ ಲಾಕ್ ಮಾಡಿಕೊಂಡಿದ್ದ ಅಣ್ಣ-ತಂಗಿ; ಬಾಗಿಲು ಒಡೆದು ನೋಡಿದರೆ ಕಾದಿದ್ದು ನಂಬಲಾಗದ ಅಚ್ಚರಿ; ನಿಜಕ್ಕೂ ಅವರಿಬ್ಬರೂ ಮಡುತ್ತಿದ್ದದ್ದು ಏನು ಗೊತ್ತೇ?

brother and sister locked their in ambala:ಈ ಘಟನೆ ನಿಮಗೆ ನಿಜಕ್ಕೂ ಶಾಕ್ ಆಗಬಹುದು, ಜನ ಹೀಗೂ ಇರಬಹುದಾ ಅಂತ ಆಶ್ಚರ್ಯವಾಗಬಹುದು. ಸಾಮಾನ್ಯವಾಗಿ ಯಾವುದಾದರೂ ವೈಜ್ಞಾನಿಕ ಅಥವಾ ವೈದ್ಯಕೀಯ ಪರೀಕ್ಷೆಯನ್ನು ಮಾಡುವಾಗ ಹೀಗೆ ಒಂದೇ ಸ್ಥಳದಲ್ಲಿ ಸಾಕಷ್ಟು ವರ್ಷ ಪ್ರಾಣಿ ಪಕ್ಷಿಗಳನ್ನು ಇಡಲಾಗಿತ್ತಂತೆ ಎನ್ನುವ ಮಾತುಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲಿ ಅಂತಹ ಒಂದು ಘಟನೆ ನಡೆದಿದೆ. ಆದರೆ ಇದು ಯಾವ ಪ್ರಯೋಗಕ್ಕೂ ಅಲ್ಲ, ಅವರಿಬ್ಬರೇ ಖುದ್ದಾಗಿ ಮನೆಗೆ ಲಾಕ್ ಮಾಡಿಕೊಂಡು ಕಳೆದ 20 ವರ್ಷಗಳಿಂದ ಮನೆಯೊಳಗೇ ಇದ್ದರು!

ಈ ಭಯಾನಕ ಘಟನೆ ನಡೆದಿರುವುದು ಹರಿಯಾಣದ ಅಂಬಾಲಾ ಕ್ಯಾಂಟ್ ನ ಬೋಹ್ ಗ್ರಾಮದಲ್ಲಿ. ಅಣ್ನ ತಂಗಿ ಇಬ್ಬರೂ ಕಳೆದ 20 ವರ್ಷಗಳಿಂದ ತಮ್ಮ ಮನೆಯೊಳಗೆ ಸ್ವ ಬಂಧನದಲ್ಲಿ ಇದ್ದರು. ಇದೀಗ ಅವರನ್ನು ಹೊರತಂದು ಚಿಕಿತ್ಸೆ ನೀಡಲಾಗಿದೆ. ಇವರು ಹೀಗೆ ಮನೆಯೊಳಗೆ ಲಾಕ್ ಮಾಡಿಕೊಳ್ಳುವುದಕ್ಕೂ ಒಂದು ಕಾರಣವಿದೆ.

ಈ ಅಣ್ಣ ತಂಗಿಯ ಹೆಸರು ಸಿಂಧು ಹಾಗೂ ಸುನೀಲ್. ಸುನೀಲ್ ಮಾಸ್ಟರ್ ಆಫ್ ಆರ್ಟ್ಸ್ ಡಿಗ್ರಿ ಪಡೆದಿದ್ದರೆ ಸಿಂಧು ಬಿಎಡ್ ಮಾಡಿದ್ದಾರೆ. ಇವರಿಬ್ಬರ ತಂದೆ ಸೂರ್ಯ ಪ್ರಕಾಶ್ ಶರ್ಮಾ. ಇವರು ಖ್ಯಾತ ಆಯುರ್ವೇದ ವೈದ್ಯರಾಗಿದ್ದರು. ಇಪ್ಪತ್ತು ವರ್ಷಗಳ ಹಿಂದೆ ಶರ್ಮಾ ದಂಪತಿಗಳು ತೀರಿಹೋಗುತ್ತಾರೆ. ಅತಿಯಾಗಿ ಪ್ರೀತಿಸುತ್ತಿದ್ದ ಅಪ್ಪ ಅಮ್ಮ ಹೀಗೆ ಅಚಾನಕ್ ಆಗಿ ತಮ್ಮನ್ನು ಬಿಟ್ಟು ಹೋಗಿದ್ದನ್ನು ಸಹಿಸದ ಸಿಂಧು ಹಾಗೂ ಸುನೀಲ್ ಇಬ್ಬರೂ ಖಿನ್ನತೆಗೆ ಒಳಗಾಗಿದ್ದಾರೆ.

ನೆರೆಹೊರೆಯ ಜನರು ಆಹಾರ ನೀಡುತ್ತಿದ್ದರಿಂದ ಇಬ್ಬರೂ ಬದುಕಿದ್ದರು. ಆದರೆ ಇಪ್ಪತ್ತು ವರ್ಷಗಳಿಂದ ಮನೆಯ ಹೊರಗೆ ಕಾಲನ್ನೂ ಇಟ್ಟಿಲ್ಲ. ಇಬ್ಬರಿಗೂ ಸರಿಯಾದ ಆಹಾರ ಚಿಕಿತ್ಸೆ ಇಲ್ಲದೇ ಸಣಕಲು ದೇಹ ಹೊಂದಿದ್ದಾರೆ. ಇವರಿಬ್ಬರ ಬಗ್ಗೆ ತಿಳಿಯುತ್ತಿದ್ದ ಹಾಗೆ, ಮನುಖ್ತ ದಿ ಸೇವಾ ಹಾಗೂ ವಂದೇ ಮಾತರಂ ದಳ ಎರಡು ಸಾಮಾಜಿಕ ಸೇವಾ ಸಂಸ್ಥೆಗಳು ಇಬ್ಬರನ್ನೂ ರಕ್ಷಿಸಿ, ಲುಯಾನಾಕ್ಕೆ ಕರೆದೊಯ್ದು ಅವರಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ ಎನ್ನಲಾಗಿದೆ.  

Comments are closed.