Real Story: ಸುಂದರಿ ಹೆಂಡತಿ ಬೇಕೆಂದು ಮದುವೆಯಾದನು: ಆದರೆ ಆಕೆಯ ಅಂದ ನೋಡಿ, ಈತನಿಗೆ ತಲೆ ತಿರುಗು, ಇಲ್ಲಸಲ್ಲದು ಯೋಚನೆ ಮಾಡಿ ಏನು ಮಾಡಿದ್ದಾನೆ ಗೊತ್ತೇ??

Real Story:ಮದುವೆ ಎನ್ನುವುದು ಎರಡು ಹೃದಯಗಳ ಮಿಲನ, ಮದುವೆಗಳನ್ನು ಕೆಲವು ಸಾರಿ ದೊಡ್ಡವರು ನೋಡಿ ಮಾಡಿದರೆ, ಇನ್ನು ಕೆಲವು ಸಾರಿ ಹುಡುಗ ಹುಡುಗಿ ಇಷ್ಟಪಟ್ಟು ಮದುವೆಯಾಗುತ್ತಾರೆ. ಈಗ ಮದುವೆ ನಡೆದರೆ, ಗಂಡಂದಿರಿಗೆ ಹೆಂಡತಿ ಸುಂದರವಾಗಿದ್ದರು ಕಷ್ಟ, ಇಲ್ಲದಿದ್ದರು ಕಷ್ಟ ಎನ್ನುವ ಹಾಗೆ ಆಗಿದೆ. ಒಂದು ವೇಳೆ ಹೆಂಡತಿ ಸುಂದರವಾಗಿದ್ದರೆ ಎಲ್ಲರ ಕಣ್ಣು ಆಕೆಯ ಮೇಲೆಯೇ ಇರುತ್ತದೆ, ಹೆಂಡತಿಯನ್ನು ಅಂತಹ ದೃಷ್ಟಿಯಿಂದ ಕಾಪಾಡಿಕೊಳ್ಳಬೇಕಾಗುತ್ತದೆ, ಒಂದು ವೇಳೆ ಸುಂದರವಾಗಿ ಇಲ್ಲದೆ ಹೋದರೆ, ಜನರು ನಿನ್ನ ಹೆಂಡತಿ ಚೆನ್ನಾಗಿಲ್ಲ ಎಂದು ಹೇಳೋದಕ್ಕೆ ಶುರು ಮಾಡುತ್ತಾರೆ. ಹೀಗೆ ಸುಂದರವಾಗಿರುವ ಹೆಣ್ಣನ್ನು ಮದುವೆಯಾದ ಯುವಕನೊಬ್ಬ, ಆಕೆ ಸುಂದರವಾಗಿರೋದಕ್ಕೆ ಅನುಮಾನ ಪಡೋದಕ್ಕೆ ಶುರು ಮಾಡಿದ.

ಆಕೆಗೆ ಬೇರೆ ಯಾರ ಜೊತೆಗಾದರು ಸಂಬಂಧ ಇರಬಹುದು ಎಂದುಕೊಂಡು, ದಿನಾ ಆಕೆಗೆ ತೊಂದರೆ ಕೊಡುವುದಕ್ಕೆ ಶುರು ಮಾಡಿದ. ಹೀಗೆ ಮಾಡಿದ ವ್ಯಕ್ತಿಯ ಹೆಸರು ಹುಸೇನ್, ಈತ ಇರುವುದು ಬೆಂಗಳೂರಿನಲ್ಲಿ, ನಾಜ್ ಎನ್ನುವ 22 ವರ್ಷದ ಹುಡುಗಿಯ ಜೊತೆಗೆ ಇವನ ಮದುವೆ ನಡೆಯಿತು, ಆಕೆ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಬಹಳ ಸುಂದರವಾಗಿದ್ದ ನಾಜ್ ಮೇಲೆ ಇವನಿಗೆ ಅನುಮಾನ ಶುರುವಾಗಿತ್ತು, ಆಫೀಸ್ ನಲ್ಲಿ ಕೆಲಸ ಮಾಡುವ ಯಾರೊಂದಿಗಾದರು ಆಕೆಗೆ ಸಂಬಂಧ ಇರಬಹುದು ಎಂದು ತಪ್ಪರ್ಥ ಮಾಡಿಕೊಂಡು ನಾಜ್ ಗೆ ತೊಂದರೆ ಮಾಡುವುದಕ್ಕೆ ಶುರು ಮಾಡಿದ.

ಕೊನೆಗೆ ಕೋಪದ ಭರದಲ್ಲಿ ಆಕೆಯನ್ನು ಮುಗಿಸಿಯೇ ಬಿಟ್ಟ. ನಂತರ ನಾಜ್ ಅಣ್ಣನಿಗೆ ವಾಟ್ಸಾಪ್ ನಲ್ಲಿ ಮೆಸೇಜ್ ಮಾಡಿ, ನಾನು ನಾಜ್ ಳನ್ನು ಮುಗಿಸಿಬಿಟ್ಟಿದ್ದೇನೆ, ಬಂದು ಅವಳ ದೇಹವನ್ನು ತೆಗೆದುಕೊಂಡು ಹೋಗಿ ಎಂದು ಮೆಸೇಜ್ ಮಾಡಿ, ಅವರು ಬಂದರೆ ತನ್ನ ಕಥೆ ಮುಗಿಯಿತು ಎಂದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮೆಸೇಜ್ ನೋಡಿ ಗಾಬರಿಯಾದ ನಾಜ್ ಮನೆಯವರು ತಕ್ಷಣವೇ ಆಕೆಯ ಮನೆಗೆ ಬಂದು, ಆಕೆಯ ಸ್ಥಿತಿ ನೋಡಿ ದಿಗ್ಭ್ರಾಂತರಾಗಿದ್ದು, ಹುಸೇನ್ ಮೇಲೆ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದೀಗ ಪೊಲೀಸರು ಓಡಿ ಹೋಗುವ ಹುಸೇನ್ ಅನ್ನು ಹುಡುಕುತ್ತಿದ್ದಾರೆ

Comments are closed.