Rajkumar-Leelavathi: ’ವಿನೋದ್ ರಾಜ್ ನಿಮ್ಮ ಮಗ ಅಂತ ಲೀಲಾವತಿ ಹೇಳುತ್ತಿದ್ದಾರೆ ಹೌದೇ?’ ಎಂಬ ಪ್ರಶ್ನೆಗೆ ರಾಜಕುಮಾರ್ ಕೊಟ್ಟ ಉತ್ತರ ’ವಯಸ್ಸು ಎಂಥವರ ಕೈಲಾದ್ರೂ ತಪ್ಪುಮಾಡಿಸುತ್ತೆ’, ಅಣ್ಣಾವ್ರು ಇದನ್ನ ಸತ್ಯ ಎಂದು ಒಪ್ಪಿಕೊಂಡಿದ್ರಾ? ಏನಾಗಿತ್ತು ಅಂದು?

Rajkumar-Leelavathi:ಡಾಕ್ಟರ್ ರಾಜಕುಮಾರ್ ಸ್ಯಾಂಡಲ್ ವುಡ್ ಕಂಡ ಒಬ್ಬ ಅಪ್ರತಿಮ ಕಲಾವಿದ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ಒಂದೇ ಒಂದು ಬ್ಲಾಕ್ ಮಾರ್ಕ್ ಕೂಡ ತಂದುಕೊಂಡವರಲ್ಲ. ಆದರೆ ಲೀಲಾವತಿ ಅವರ ವಿಚಾರದಲ್ಲಿ ಮಾತ್ರ ಲೀಲಾವತಿ ಹಾಗೂ ರಾಜಕುಮಾರ್ ಅವರ ನಡುವಿನ ಸಂಬಂಧ ಇಂದಿಗೂ ಚರ್ಚೆಯಾಗಿಯೇ ಉಳಿದಿದೆ. ಈ ಸಂಬಂಧ ಹಾಗೂ ವಿನೋದ್ ರಾಜ್ ಯಾರ ಮಗ ಎನ್ನುವ ಬಗ್ಗೆ ಈವರೆಗೂ ಯಾರಿಗೂ ಸ್ಪಷ್ಟತೆ ಇಲ್ಲ.

ರವಿ ಬೆಳಗೆರೆ ಅವರು ಬದುಕಿದ್ದಾಗ ’ರಾಜ ಲೀಲಾ ವಿನೋದ’ ಎನ್ನುವಂತಹ ಒಂದು ಪುಸ್ತಕವನ್ನು ಕೂಡ ಬರೆದಿದ್ದರು. ಇದರಲ್ಲಿಯೂ ರಾಜಕುಮಾರ ಹಾಗೂ ಲೀಲಾವತಿ ಅವರ ಸಂಬಂಧದ ಕುರಿತಂತೆ ಸಾಕಷ್ಟು ವಿಚಾರಗಳು ಹೇಳಲಾಗಿತ್ತು. ಈ ಸುದ್ದಿ ಹಬ್ಬುತ್ತಿದ್ದ ಹಾಗೆ ಅಣ್ಣಾವ್ರ ಕಿವಿಗೂ ಅದು ತಲುಪಿತ್ತು. ರಾಜ್ ಕುಮಾರ್ ಅವರ ಆಪ್ತರಾದ ಪ್ರಕಾಶ್ ಮೇಹು ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಈ ವಿಚಾರದ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನೀಡಿದ್ದಾರೆ.

ಡಾಕ್ಟರ್ ರಾಜಕುಮಾರ್ ಅವರಿಗೆ ಲೀಲಾವತಿ ಅವರ ವಿಚಾರದಲ್ಲಿ ಯಾವ ಗೊಂದಲವು ಇರಲಿಲ್ಲ ಎನ್ನುವುದಕ್ಕೆ ಅವರ ಈ ಒಂದು ಉತ್ತರ ಸಾಕ್ಷಿ. ತಮಿಳು ಸಿನಿಮಾ ಒಂದನ್ನು ನೋಡುತ್ತಿರುವಾಗ ಅಲ್ಲಿ ಹೀರೋ ತಂದೆ ದೊಡ್ಡ ಸ್ಟಾರ್ ಆಗಿದ್ದರು ಅದು ಅಧಿಕೃತ ಅಪ್ಪ ಮಗನ ಸಂಬಂಧ ಆಗಿರಲಿಲ್ಲ ಪ್ರಕಾಶ್ ಸಾಹು ಆ ಸಿನಿಮಾ ನೋಡುತ್ತಿದ್ದ ರಾಜಕುಮಾರ ಅವರ ಬಳಿಯಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾರೆ.

ಲೀಲಾವತಿ ಅಮ್ಮನವರ ಮಗ ವಿನೋದ್ ರಾಜ್ ನಿಮ್ಮ ಮಗನಂತೆ ಹೌದಾ? ಈ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ ಇದಕ್ಕೆ ಉತ್ತರ ಏನು ಎಂದು ಪ್ರಕಾಶ ಮೇಹು ಧೈರ್ಯ ಮಾಡಿ ಅಣ್ಣಾವ್ರನ್ನ ಕೇಳಿಯೇ ಬಿಡುತ್ತಾರೆ. ಒಂದು ಕ್ಷಣ ಮೌನವಹಿಸಿದ ರಾಜಕುಮಾರ ಅವರು ’ವಯಸ್ಸು ಎಂತವರ ಕೈಯಲ್ಲಾದರೂ ತಪ್ಪು ಮಾಡಿಸುತ್ತ” ಎಂದು ಉತ್ತರ ಕೊಡುತ್ತಾರೆ. ಈ ಉತ್ತರವನ್ನು ಕೇಳಿದೆ ತಡ ಪ್ರಕಾಶ್ ಮೇಹು ಒಮ್ಮೆ ಕಂಗಾಲಾಗಿ ಬಿಡುತ್ತಾರೆ. ಕೊನೆಗೂ ಅಣ್ಣಾವ್ರು ಒಪ್ಪಿಕೊಂಡು ಬಿಟ್ಟರು ಎಂದು ಅವರ ಮನಸ್ಸಿನಲ್ಲಿ ಅವರ ಬಗ್ಗೆ ಕ್ಷಣಮಾತ್ರದಲ್ಲಿ ತಪ್ಪು ಕಲ್ಪನೆ ಮೂಡಿಬಿಡುತ್ತದೆ.

ಆದರೆ ಕೆಲವು ಸೆಕೆಂಡ್ ಮೌನವಾಗಿದ್ದ ರಾಜಕುಮಾರ್ ಅವರು ಮತ್ತೆ ಮಾತನ್ನು ಮುಂದುವರಿಸುತ್ತಾರೆ. ನನ್ನ ಲೀಲಾವತಿಯ ಸಂಬಂಧ ಮುಗಿದು ಮೂರು ವರ್ಷ ಕಳೆದ ನಂತರ ಆ ಮಗು ಹುಟ್ಟಿದ್ದು. ಯಾಕೆ ಲೀಲಾವತಿ ವಿನೋದ್ ನನ್ನ ಮಗ ಎಂದು ಹೇಳಿಕೊಂಡು ಓಡಾಡುತ್ತಿದ್ದಾಳೋ ಗೊತ್ತಿಲ್ಲ ಆದರೆ ಆ ತಾಯಿ ಮಗನಿಗೆ ಒಳ್ಳೆಯದಾಗುತ್ತೆ ಅಂದ್ರೆ ನನ್ನ ಹೆಸರನ್ನ ಹೇಳಿಕೊಳ್ಳಲಿ ಬಿಡಿ ಎಂದು ಅಣ್ಣ ಅವರು ಬಳಿ ಹೇಳುತ್ತಾರೆ.

ಇನ್ನು ಲೀಲಾವತಿ ಅವರಿಗೆ ರಂಗಭೂಮಿ ಕಲಾವಿದ ಮಹಾಲಿಂಗ ಭಾಗವತರ್ ಅವರ ಜೊತೆಗೆ ವಿವಾಹವಾಗಿತ್ತು. ಅವರಿಬ್ಬರ ಸಂಬಂಧ ಯಾಕೆ ಮುರಿದುಬಿತ್ತು ಗೊತ್ತಿಲ್ಲ ಬಹುಶಃ ಆ ಮಗು ಅವರದೇ ಇರಬಹುದು ಎನ್ನುವುದು ರಾಜಕುಮಾರ್ ಆಗಲೇ ಹೇಳಿದ್ದರಂತೆ.

ಒಟ್ಟಿನಲ್ಲಿ ಈ ಕಗ್ಗಂಟು ಮಾತ್ರ ಇದುವರೆಗೆ ಯಾರಿಂದಲೂ ಬಿಡಿಸಲು ಸಾಧ್ಯವಾಗಲಿಲ್ಲ. ಲೀಲಾವತಿ ಅಮ್ಮ ಕೂಡ ಇದರ ಬಗ್ಗೆ ಎಲ್ಲಿಯೂ ಹೆಚ್ಚಾಗಿ ಮಾತನಾಡುವುದಿಲ್ಲ ಅದೇನೆ ಇರಲಿ ಈಗ ರಾಜ್ ಕುಮಾರ್ ನಮ್ಮೊಂದಿಗಿಲ್ಲ. ಲೀಲಾವತಿ ಅವರಿಗೂ ವಯಸ್ಸು ಆಗ್ತಾ ಬಂತು. ಕೆಲವು ವಿಚಾರದ ಬಗ್ಗೆ ಅದೆಷ್ಟೇ ಚರ್ಚೆ ಮಾಡಿದರು ಕೆಲವು ಗುಟ್ಟುಗಳು ಯಾವಾಗಲೂ ಗುಟ್ಟಾಗಿಯೇ ಉಳಿದು ಹೋಗಿಬಿಡುತ್ತವೆ. ಮನುಷ್ಯನ ಜೊತೆಗೆ ಮಣ್ಣಾಗಿಬಿಡುತ್ತವೆ.

Comments are closed.