Ugadi Horoscope: ತುಲಾ ರಾಶಿಯವರು ಈವರೆಗೆ ಕಷ್ಟಪಟ್ಟಿದ್ದೂ ಸುಳ್ಳಲ್ಲ, ಯುಗಾದಿಯ ನಂತರ ಯೋಗವೇ ಬದಲಾಗುವುದು ಸುಳ್ಳಲ್ಲ; ಬರಬೇಕಿದ್ದ ಬಾಕಿ ಹಣ ಕೈಸೇರುತ್ತದೆ! ಇಲ್ಲಿದೆ ನೋಡಿ ಹೊಸ ವರ್ಷದ ಭವಿಷ್ಯ!

Ugadi Horoscope: ಯುಗಾದಿ ಹಬ್ಬ ಮುಗಿದಿದೆ. ಹಿಂದೂಗಳ ಹೊಸವರ್ಷ ಆರಂಭವಾಗಿದೆ. ದ್ವಾದಶ ರಾಶಿಗಳ ಮೇಲೂ ಯುಗಾದಿ ಪುರುಷ ಪರಿಣಾಮ ಬೀರಲಿದ್ದು, ತುಲರಾಶಿಯವರ ಅದೃಷ್ಟ ಹೇಗಿದೆ ನೋಡೋಣ. ಇಲ್ಲಿಯವರೆಗೆ ತುಲಾ ರಾಶಿಯಲ್ಲಿ ಕೇತು ಮತ್ತು ಸಪ್ತಮದಲ್ಲಿ ರಾಹು ಹಾಗೂ ಚತುರ್ಥ ಭಾಗದಲ್ಲಿ ಶನಿ ಇನ್ನೂ ಗುರು ಆರನೇ ಮನೆಯಲ್ಲಿ ಇದ್ದ. ತುಲಾ ರಾಶಿಯವರಿಗೆ ಈಗ ಪಂಚಮ ಶನಿ. ಇದರಿಂದ ಸ್ವಲ್ಪ ಆತಂಕ ಉಂಟಾದರೂ ಕೂಡ ಗುರು ಬಲವು ಇರುವುದರಿಂದ ಹೆದರುವ ಅಗತ್ಯವಿಲ್ಲ. ಬದುಕಿನಲ್ಲಿ ಕಷ್ಟವನ ಕೊಟ್ಟು ಮತ್ತು ಒಳ್ಳೆಯದನ್ನು ಮಾಡುವ ಉದ್ದೇಶ ಪಂಚಮ ಶನಿಯದು. ಹಾಗಾಗಿ ತುಲಾ ರಾಶಿಯಲ್ಲಿ ಕಷ್ಟಗಳು ಬಂದರೂ ಯುಗಾದಿಯ ನಂತರ ಗುರು ತುಲಾ ರಾಶಿಯವರನ್ನು ಕಾಪಾಡುತ್ತಾನೆ ಎಲ್ಲಾ ಸಮಸ್ಯೆಗೂ ಪರಿಹಾರ ನೀಡುತ್ತಾನೆ.

ಆರ್ಥಿಕ ಜೀವನ:

ವರ್ಷದ ಆರಂಭದಿಂದಲೇ ತುಲಾ ರಾಶಿಯವರಿಗೆ ಆರ್ಥಿಕವಾಗಿ ಮಿಶ್ರಫಲ ಸಿಗಲಿದೆ ಕಷ್ಟಪಟ್ಟು ಹಣ ಕೈಗೆ ಸಿಗುತ್ತದೆ ಆದರೂ ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿ ಇರಬೇಕು ಗುರುವಿನ ಜೊತೆಗೆ ರಾಹು ಕೂಡ ಇರುವುದರಿಂದ ಯಾರಿಗೆ ದುಡ್ಡು ಕೊಟ್ಟರೂ ಆ ಹಣ ತಿರುಗಿ ನಿಮ್ಮ ಕೈ ಸೇರುವುದಿಲ್ಲ ಹಾಗಾಗಿ ಎಚ್ಚರಿಕೆಯಿಂದ ಇರಿ. ಯಾರಿಗೂ ಸಾಲ ಕೊಡುವುದು ಅಥವಾ ತೆಗೆದುಕೊಳ್ಳುವುದನ್ನು ತಪ್ಪಿಸಿ ಪಾಲುದಾರಿಕೆಯಲ್ಲಿಯೂ ಹೆಚ್ಚಿನ ನಂಬಿಕೆ ಬೇಡ ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ.

ವೃತ್ತಿ ಜೀವನ:

ಉದ್ಯೋಗದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು ಕೊಂಚ ಆಸಕ್ತಿ ಕಡಿಮೆಯೂ ಆಗಬಹುದು. ಲಾಭ ಬಂದಿರುವುದು ನಿಮ್ಮ ಕೈ ಸೇರುವುದಿಲ್ಲ ಹಣ ಸಿಗುವಲ್ಲಿ ಸ್ವಲ್ಪ ನಿಧಾನವಾಗಬಹುದು. ಆದರೆ ರಾಜಯೋಗ ಕೊಡುವ ಶನಿ ನಿಮಗೆ ಬರಬೇಕಾದ ಹಣವನ್ನು ನಿಮ್ಮ ಕೈಗೆ ತಲುಪಿಸುತ್ತಾನೆ ಸ್ವಲ್ಪ ತಡವಾದರೂ ಉತ್ತಮ ಫಲಿತಾಂಶ ಸಿಗುತ್ತದೆ ಆದಾಯ ಮತ್ತು ಖರ್ಚು ಸರಿಸಮಾನವಾಗಿರುತ್ತದೆ.

ಕೌಟುಂಬಿಕ ಜೀವನ:

ಮನೆಯಲ್ಲಿ ಕೆಲವು ಮನಸ್ತಾಪ, ಭಿನ್ನಾಭಿಪ್ರಾಯ ತಪ್ಪು ತಿಳುವಳಿಕೆ ಮೊದಲಾದವು ಇದ್ದರೂ ಅದನ್ನು  ಗುರು ದೂರ ಮಾಡುತ್ತಾನೆ ನಿಮಗೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಆದರೆ ಸಂಬಂಧಿಕರ ಸ್ನೇಹಿತರ ಸಹಾಯ ನಿಮ್ಮೊಂದಿಗೆ ಇರುತ್ತದೆ. ಹಾಗಾಗಿ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಎಲ್ಲ ವಿಷಯದಲ್ಲೂ ತುಂಬಾ ತಾಳ್ಮೆ ಸಂಯಮ ಬೇಕು ಸುಖಾ ಸುಮ್ಮನೆ ಯಾರೊಂದಿಗೂ ವಾದ ಮಾಡಬೇಡಿ ಇದರಿಂದ ಸಮಸ್ಯೆ ಜಾಸ್ತಿ ಆಗುತ್ತದೆಯೇ ಹೊರತು ಕಡಿಮೆ ಆಗುವುದಿಲ್ಲ. ಇನ್ನು ಮದುವೆ ಆಗದವರಿಗೆ ಮದುವೆ ಯೋಗ ಕೂಡಿ ಬರಲಿದೆ ನೀವು ಅಂದುಕೊಂಡಂಥ ಸಂಗಾತಿಯೇ ಸಿಗುತ್ತಾ. ಇದರಿಂದ ಜೀವನದಲ್ಲಿ ಹೊಸಚಿಗುರು ಮೂಡಲಿದೆ. ಮಗುವಿನ ನಿರೀಕ್ಷೆಯಲ್ಲಿ ಇರುವವರೆಗೂ ಯುಗಾದಿಯ ನಂತರ ಉತ್ತಮ ಫಲ ಸಿಗುತ್ತದೆ.

ಆಸ್ತಿ ಖರೀದಿ:

ಗುರು ದೃಷ್ಟಿ ನಿಮ್ಮ ಮೇಲಿರುವದರಿಂದ ಎಲ್ಲಾ ಕಷ್ಟಗಳು ಮಂಜಿನಂತೆ ಕರಗುತ್ತವೆ ನವೆಂಬರ್ ತಿಂಗಳ ನಂತರ ತುಲಾ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗುತ್ತದೆ ಕೆಲಸದ ವಿಚಾರದಲ್ಲಿ ದಿಢೀರ್ ಯಶಸ್ಸು ಕೂಡ ಸಿಗಲಿದೆ.

ಆರೋಗ್ಯ:

ಇನ್ನು ಆರೋಗ್ಯದ ವಿಚಾರಕ್ಕೆ ಬಂದರೆ ನಿಮ್ಮ ಆಹಾರ ಪದ್ಧತಿಯಿಂದಾಗಿ ನೀವು ಆರೋಗ್ಯವಾಗಿಯೇ ಇರುತ್ತೀರಿ ಹೆಚ್ಚು ಗಟ್ಟಿ ಪದಾರ್ಥಗಳನ್ನು ಸೇವಿಸುವ ಬದಲು ದ್ರವರೂಪದ ಪದಾರ್ಥಗಳನ್ನ ಹೆಚ್ಚಾಗಿ ಸೇರಿಸಿ ಹೆಚ್ಚು ನೀರನ್ನು ಕುಡಿಯಿರಿ. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ರಾಹು ಹಾಗು ಶನಿಗೆ ಪರಿಹಾರ ಮಾಡಿಕೊಂಡರೆ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತವೆ.

ಪರಿಹಾರ:

ಪ್ರತಿ ಶನಿವಾರ ಉದ್ದಿನ ಬೇಳೆ, ಹುರುಳಿಕಾಳು, ಕಪ್ಪು ಎಳ್ಳು ಮೊದಲಾದವುಗಳನ್ನು ದೇವಸ್ಥಾನಕ್ಕೆ ದಾನ ಮಾಡಿ. ಗಣೇಶ ಮತ್ತು ದುರ್ಗಾ ಸ್ತೋತ್ರವನ್ನು ಪಠಿಸಿ ಹನುಮಾನ್ ಚಾಲೀಸ್ ವನ್ನು ಉಚ್ಚಾರಿಸಿ ಅಥವಾ ಕೇಳಿ. ಸಾಧ್ಯವಾದರೆ ವೃದ್ಧಾಶ್ರಮಕ್ಕೆ ಕೈಲಾದಷ್ಟು ದಾನ ಮಾಡಿ. ಸಂಕಷ್ಟ ಚತುರ್ಥಿಯ ವಿರುದ್ಧ ಆರಂಭಿಸಿ.

Comments are closed.