Women married Bus Driver: ಓಡಾಟ ಮಾಡುವುದಕ್ಕೆ ಬಸ್ ಬಳಸಿಕೊಳ್ಳಮ್ಮ ಎಂದರೆ, ಇಲ್ಲೊಬ್ಬಳು ಯುವತಿ ಬಸ್ ನಲ್ಲಿ ಏನು ಮಾಡಿದ್ದಾಳೆ ಗೊತ್ತೇ? ಡ್ರೈವರ್ ಕೂಡ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ??

Women married Bus Driver: ಓಡಾಟ ಮಾಡುವುದಕ್ಕೆ ಬಸ್ ಬಳಸಿಕೊಳ್ಳಮ್ಮ ಎಂದರೆ, ಇಲ್ಲೊಬ್ಬಳು ಯುವತಿ ಬಸ್ ನಲ್ಲಿ ಏನು ಮಾಡಿದ್ದಾಳೆ ಗೊತ್ತೇ? ಡ್ರೈವರ್ ಕೂಡ ಶಾಕ್ ಆಗಿ ಶೇಕ್ ಆಗಿದ್ದು ಯಾಕೆ ಗೊತ್ತೇ??ಪ್ರತಿಯೊಬ್ಬರು ಒಬ್ಬ ವ್ಯಕ್ತಿಯನ್ನು ಪ್ರೀತಿ ಮಾಡುತ್ತಾರೆ, ಈ ಪ್ರೀತಿ ಜಾತಿ ಬೇಧ ಹಣ ಅಂತಸ್ತು, ಓದು ಇದ್ಯಾವುದನ್ನು ನೋಡಿ ಬರುವುದಿಲ್ಲ. ಒಬ್ಬ. ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯ ಮೇಲೆ ಪ್ರೀತಿ ಆಗುವುದಾದರು ಯಾಕೆ ಎನ್ನುವ ಪ್ರಶ್ನೆ ಹಲವು ಸಾರಿ ಮೂಡುತ್ತದೆ.

ಅದಕ್ಕೆ ಉತ್ತರ ಹುಡುಕುವುದು ಕೂಡ ಕಷ್ಟವೇ. ಇಲ್ಲಿ ಒಂದು ಹುಡುಗಿ ತಾನು ಪ್ರತಿದಿನ ಪ್ರಯಾಣ ಮಾಡುತ್ತಿದ್ದ ಬಸ್ ಡ್ರೈವರ್ ಅನ್ನೇ ಪ್ರೀತಿಸಿ ಮದುವೆಯಾಗಿದ್ದಾಳೆ. ಅದು ಆತನಿಗೆ ತಂದೆಯ ವಯಸ್ಸು ಎನ್ನುವುದು ಶಾಕ್ ಆಗುವ ವಿಚಾರ ಆಗಿದೆ.

ಈ ಹುಡುಗಿಯ ಹೆಸರು ಶೆಹಜಾದಿ ಈಕೆ ಪಾಕಿಸ್ತಾನದ ಪಂಜಾಬ್ ನ ಚುನು ಇಂದ ಲಾಹೋರ್ ಪ್ರಯಾಣ ಮಾಡಬೇಕಿತ್ತು, ಈಕೆ ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದಳು. ಆಕೆ ದಿನಾ ಹೋಗುತ್ತಿದ್ದ ಬಸ್ ಡ್ರೈವರ್ ನ ಹೆಸರು ಸಾದಿಕ್. ಈ ವ್ಯಕ್ತಿ ಶೆಹಜಾದಿ ಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರು, ಪ್ರತಿದಿನ ಆತ ಬಸ್ ಓಡಿಸುತ್ತಿದ್ದ ಶೈಲಿ ಆಕೆಗೆ ತುಂಬಾ ಇಷ್ಟವಾಯಿತಂತೆ, ಬಹಳ ಸೇಫ್ ಆಗಿ ಡ್ರೈವ್ ಮಾಡುತ್ತಿದ್ದರಂತೆ ಸಾದಿಕ್, ಹಾಗೆಯೇ ಪ್ರತಿದಿನ ಬಸ್ ನಲ್ಲಿ ಹಳೆಯ ಹಿಂದಿ ಹಾಡುಗಳನ್ನು ಪ್ಲೇ ಮಾಡುತ್ತಿದ್ದರಂತೆ.

ಅವರು ಹಾಕುತ್ತಿದ್ದ ಹಳೆಯ ಹಿಂದಿ ಹಾಡುಗಳು ಈಕೆಗೆ ತುಂಬಾ ಇಷ್ಟವಾಗಿದೆ. ಬಸ್ ನಲ್ಲಿ ಪ್ರಯಾಣ ಮಾಡುವಾಗ ಈಕೆ ಇಳಿದುಕೊಳ್ಳಬೇಕಾದ ಸ್ಟಾಪ್ ಲಾಸ್ಟ್ ಸ್ಟಾಪ್ ಆಗಿರುತ್ತಿತ್ತು. ಹಾಗಾಗಿ ಇವರಿಬ್ಬರು ಹೆಚ್ಚು ಮಾತನಾಡುವುದು, ಜೊತೆಯಾಗಿರುವುದು ಜಾಸ್ತಿಯಾಗಿ ಇಬ್ಬರ ನಡುವೆ ನಿಧಾನವಾಗಿ ಲವ್ ಶುರುವಾಗಿದೆ.

ಇಬ್ಬರು ಕೂಡ ವಯಸ್ಸಿನ ಅಂತರವನ್ನು ಪರಿಗಣಿಸದೆ, ಮದುವೆಯಾಗಿ ಸಂತೋಷವಾಗಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಈಗ ಭಾರಿ ವೈರಲ್ ಆಗುತ್ತಿದ್ದು, ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ತಮ್ಮ ಲವ್ ಸ್ಟೋರಿಯನ್ನು ಶೇರ್ ಮಾಡಿಕೊಂಡಿದ್ದಾರೆ..

Comments are closed.