Fraud case: ಒಂದೇ ಒಂದು ಮಿಲಿಟರಿ ಬಟ್ಟೆ ಧರಿಸಿದ್ದಕ್ಕೆ ಆಕೆಯ ಖಾತೆಗೆ ಸೇರಿದ್ದು ಕೋಟಿ ಕೋಟಿ ಹಣ: ಇಷ್ಟಕ್ಕೂ ಆಕೆ ಮಾಡಿದ್ದೇನು ಗೊತ್ತೇ?

Fraud case:ಈ ಘಟನೆಯನ್ನು ಕೇಳಿದರೆ ವಂಚನೆಯನ್ನು ಹೀಗೂ ಮಾಡಬಹುದಾ ಎಂದು ಅನಿಸಬಹುದು. ಯಾಕೆಂದರೆ ಕಳ್ಳರು, ದರೋಡೆಕೋರರು, ಕೊಲೆ ಪಾತಕರು ನಮ್ಮ ಸುತ್ತ ಸಾಕಷ್ಟು ಜನರನ್ನ ನಾವು ನೋಡಿದ್ದೇವೆ. ಆ ಬಗ್ಗೆ ಕೇಳಿರುತ್ತೇವೆ. ಆದರೆ ಮಿಲಿಟರಿ ಡ್ರೆಸ್ ಧರಿಸಿ ತಾನು ಒಬ್ಬ ಅಧಿಕಾರಿಯೆಂದು ಹೇಳಿಕೊಂಡು ಬಂದು ಒಬ್ಬ ಮಹಿಳೆ ಹೇಗೆ ವಂಚನೆ ಮಾಡಿದ್ದಾಳೆ ಗೊತ್ತಾ?

ಅಸ್ಸಾಂ ಮೂಲದ ದರ್ಶನ ಭಾರದ್ವಾಜ್ ಎಂಬ ಯುವತಿ ಡಿಆರ್‌ಡಿಓ ಕಮಾಂಡರ್ ಎಂದು ಹೇಳಿಕೊಂಡು ಹಲವು ಜನರಿಗೆ ವಂಚನೆ ಮಾಡಿದ್ದಾಳೆ. 5 ಕೋಟಿಗೂ ಹೆಚ್ಚಿನ ಹಣವನ್ನು ಲಪಟಾಯಿಸಿದ್ದಾಳೆ.

ದರ್ಶನಾ ಭಾರದ್ವಾಜ್ ಳನ್ನು ಪೊಲೀಸರು ಈಗಾಗಲೇ ಅರೆಸ್ಟ್ ಮಾಡಿ ತೀವ್ರವಾದ ತನಿಖೆ ನಡೆಸುತ್ತಿದ್ದಾರೆ ಈಗ ಒಂದೊಂದೇ ವಿಷಯವು ಬಹಿರಂಗವಾಗುತ್ತಿದೆ. ಬೈಯಪ್ಪನಹಳ್ಳಿ ಪೊಲೀಸರು ಆಕೆಯನ್ನು ಭಂದಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಕೆಗೆ ಬಿಲ್ಡರ್ಸ್ ಗಳೇ ಟಾರ್ಗೇಟ್. ಸೇನೆಯ ಕಟ್ಟಡ ನಿರ್ಮಾಣ ಹಾಗೂ ಮೇಂಟೆನೆನ್ಸ್ ಟೆಂಡರ್ ಕೊಡಿಸುವುದಾಗಿ ಹೇಳಿ ಎಲ್ಲರ ಬಳಿಯೂ ಬಣ್ಣದ ಮಾತುಗಳನ್ನ ಆಡಿ ಮೋಸ ಮಾಡುತ್ತಿದ್ದಳು. ಅದರಲ್ಲೂ ಆಕೆಯ ಚಾಣಾಕ್ಷ ಬುದ್ಧಿಯನ್ನು ಮೆಚ್ಚಬೇಕು, ಯಾರೀಗೂ ಒಂದು ಸಣ್ಣ ಅನುಮಾನದ ಸುಳಿವೂ ಬಾರದ ಹಾಗೆ ವಂಚನೆ ಮಾಡಿದ್ದಾಳೆ.

DRDO ವೆಬ್ ಸೈಟ್ನಲ್ಲಿರುವ ಟೆಂಡರ್ ಗಳನ್ನು ಬಿಲ್ಡರ್ ಗಳಿಗೆ ತೋರಿಸಿ 10, 20, 40 ಕೋಟಿ ಹೀಗೆ ಯಾವ ಮೊತ್ತಕ್ಕೆ ಟೆಂಡರ್ ಬೇಕಾದರೂ ಕೊಡಿಸುತ್ತೇನೆ ಎಂದು ಹೇಳಿ ಬಿಲ್ಡರ್ ಗಳಿಂದ ಕಣ ಪೀಕಿಸಿದ್ದಾಳೆ. ಸುಮಾರು 66 ಕೋಟಿ ಪ್ರಾಜೆಕ್ಟ್ ಕೊಡಿಸುವುದಾಗಿ ಮೂವರು ಬಿಲ್ಡರ್ ಗಳಿಗೆ ವಂಚನೆ ಮಾಡಿದ್ದು, ಅಂದಾಜಿ 5 ಕೋಟಿಗೂ ಹೆಚ್ಚಿನ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾಳೆ. ಮೋಸ, ವಂಚನೆ ಅನ್ನೋದು ಯಾವ ಯಾವ ರುಪದಲ್ಲಿ ಬರುತ್ತೋ ಹೇಳುವುದಕ್ಕೇ ಅಸಾಧ್ಯ ನೋಡಿ.

Comments are closed.