Good time symbol: ನಮಗೆ ಶುಭಕಾಲ ಆರಂಭವಾಗುತ್ತಿದೆ ಅಂತಾನು ಸೂಚನೆ ಕೊಡುತ್ತಾನ ಭಗವಂತ! ಇತ್ತೀಚಿಗೆ ಹೀಗೇನಾದ್ರೂ ನಿಮ್ಮ ಅನುಭವಕ್ಕೂ ಬಂದಿದ್ರೆ ಅದೃಷ್ಟ ನಿಮ್ಮನ್ನ ಹುಡುಕಿಕೊಂಡು ಬರುತ್ತಿದೆ ಎಂದರ್ಥ, ಯಾವ ಸೂಚನೆಗಳು ನೋಡಿ!

Good time symbol: ಜೀವನದಲ್ಲಿ ಏರಿಳಿತಗಳು ಶುಭ ಅಶುಭ ಫಲಗಳನ್ನು ಪಡೆಯುವುದು ಸಾಮಾನ್ಯ. ಅದೃಷ್ಟ ಒಂದಿದ್ರೆ ಎಂತವರಿಗಾದರೂ ಒಳಿತಾಗಬಹುದು. ಎಂಥವರು ಬೇಕಾದರೂ ಶ್ರೀಮಂತರಾಗಬಹುದು. ಅದೇ ದುರಾದೃಷ್ಟ ಆರಂಭವಾದರೆ ಎಂಥ ಶ್ರೀಮಂತ ಬಡವನ ಸ್ಥಾನದಲ್ಲಿ ಕೂರಬಹುದು ಹಾಗಾಗಿ ಕಾಲಘಟ್ಟದಲ್ಲಿ ನಾವು ನಮ್ಮ ಭವಿಷ್ಯವನ್ನು ಹೀಗೆ ಎಂದು ಊಹಿಸಲು ಸಾಧ್ಯವಿಲ್ಲ ಈ ಸಮಯಕ್ಕೆ ತಕ್ಕ ಹಾಗೆ ಬದುಕಬೇಕು ಎಂದು.

ಇನ್ನು ಕೆಲವೊಮ್ಮೆ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು ನಮಗೆ ಮುಂದೆ ಒಳಿತಾಗಲಿದೆ ಎಂಬುದನ್ನು ಸೂಚಿಸುವ ಸೂಚಕಗಳಾಗಿರುತ್ತವೆ ಆದರೆ ಸಾಕಷ್ಟು ಬಾರಿ ನಾವು ಇದನ್ನ ಗಮನಿಸುವುದೇ ಇಲ್ಲ ಇದರಿಂದ ಕೈಗೆ ಬಂದಿರುವ ಅದೃಷ್ಟ ತಪ್ಪಿ ಹೋಗುವ ಸಂದರ್ಭವು ಇರುತ್ತದೆ. ಹಾಗಾದ್ರೆ ನಮಗೆ ಒಳ್ಳೆಯ ದಿನಗಳು ಶುರುವಾಗಲಿದೆ ಎಂದು ಸೂಚನೆಯನ್ನು ಕೊಡುವಂತಹ ಚಿಹ್ನೆಗಳು ಯಾವವು ನೋಡೋಣ ಬನ್ನಿ.

ದಾರಿಯಲ್ಲಿ ಹಣ ಸಿಕ್ಕರೆ:

ಎಷ್ಟು ಬಾರಿ ದಾರಿಯಲ್ಲಿ ನಡೆದು ಹೋಗುವಾಗ ಹಣ ಸಿಗಬಹುದು ಇದು ದಿಡೀರ್ ಹಣ ಸಿಗುವ ಲಕ್ಷ್ಮಿಯ ಕೃಪೆಯ ಸಂಕೇತವಾಗಿದೆ. ನಿಮ್ಮ ಆರ್ಥಿಕ ಸ್ಥಿತಿ ಇನ್ನು ಮುಂದೆ ಬಲವಾಗಲಿದೆ ಎನ್ನುವುದರ ಸೂಚಕವಾಗಿದೆ.

ಗುಬ್ಬಚ್ಚಿಯ ಚಿಲ್ಲಿ ಪಿಲಿ ಹಾಡು:

ಇತ್ತೀಚಿಗೆ ಗುಬ್ಬಚ್ಚಿಯನ್ನು ಕಾಣುವುದೇ ಬಹಳ ವಿರಳ ಆದರೆ ನಿಮ್ಮ ಮನೆಯ ಅಂಗಳದಲ್ಲಿ ಶಬ್ದ ನಿಮ್ಮ ಕಿವಿಗೆ ಬಿದ್ದರೆ ನಿಮ್ಮ ಒಳ್ಳೆಯ ಸಮಯ ಸ್ಟಾರ್ಟ್ ಎಂದು ಅರ್ಥ. ಹೀಗೆ ಗುಬ್ಬಚ್ಚಿಗಳು ಮನೆಯ ಮುಂದೆ ಕಂಡರೆ ಅವುಗಳಿಗೆ ಧಾನ್ಯ ನೀರನ್ನು ಕೊಡುವುದನ್ನು ಮರೆಯಬೇಡಿ

ತುಂಬಿದ ತಂಬಿಗೆ:

ನೀವು ಯಾವುದೇ ಕೆಲಸಕ್ಕೆ ಹೊರಟಾಗ ಯಾರಾದರೂ ತುಂಬಿರುವ ಕೊಡ ಅಥವಾ ಬಿಂದಿಗೆ ನಿಮ್ಮ ಎದುರು ತೆಗೆದುಕೊಂಡು ಬಂದರೆ ಅದು ಶುಭ ಸೂಚಕ. ನೀವು ಹೋಗುವ ಕೆಲಸದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು ಅರ್ಥ.

ಎಕ್ಕದ ಗಿಡ:

ಎಕ್ಕದ ಗಿಡದ ಬಗ್ಗೆ ಯಾರು ಗಮನವಹಿಸುವುದಿಲ್ಲ ಕೆಲವೊಮ್ಮೆ ಅದು ನಮಗೆ ಗೊತ್ತಿಲ್ಲದೆ ಇರುವ ಹಾಗೆ ಮನೆಯ ಮುಂದೆ ತಾನಾಗಿಯೇ ಬೆಳೆದು ಬಿಡುತ್ತದೆ ಹೀಗೆ ಎಕ್ಕದ ಗಿಡ ಹುಟ್ಟಿಕೊಂಡರೆ ಅದು ಕುಟುಂಬದ ಶುಭಕಾಲವನ್ನು ತಂದಿದೆ ಎಂದು ಅರ್ಥ ಇದು ಮಂಗಳಕರವಾದ ಸಂಕೇತವಾಗಿದೆ.

ಬಣ್ಣದ ಚಿಟ್ಟೆಗಳು:

ನಿಮ್ಮ ಜೀವನ ಮುಂದೆ ವರ್ಣಂಯವಾಗಿರುತ್ತದೆ ಎಂಬುದನ್ನು ಸೂಚಕವಾಗಿ ವರ್ಣ ರಂಜಿತ ಚಿಟ್ಟೆಗಳನ್ನು ಕೂಡ ನೋಡಿರಬಹುದು. ಹೀಗೆ ಇಂತಹ ಚಿಟ್ಟೆಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಜೀವನದಲ್ಲಿ ರಂಗು ಬರಲಿದೆ ಎಂದು ಅರ್ಥ. ಇನ್ನು ಮನೆಯಿಂದ ಹೊರಗೆ ಹೋಗುವಾಗ ಹಸಿರು ತರಕಾರಿ, ಹಸಿರು ಹುಲ್ಲು, ಬಿಳಿ ಪಾರಿವಾಳ ಇವುಗಳು ಕಣ್ಣಿಗೆ ಬಿದ್ದರೂ ಅದು ಅದೃಷ್ಟದ ಸೂಚಕ.

ಬಿಳಿಯ ಬಣ್ಣದ ಹಸು:

ನಿಮ್ಮ ಮನೆಯ ಮುಂದೆ ಅಚಾನಕ್ಕಾಗಿ ಒಂದು ಬಿಳಿಯ ಹಸು ಬಂದು ಕೂಗಿದರೆ ಆ ಹಸು ಅಲ್ಲಿಯೇ ನಿಮಗೆ ಅದೃಷ್ಟವನ್ನು ನೀಡಿ ಹೋಗುತ್ತಿದೆ ಎಂದು ಅರ್ಥೈಸಿಕೊಳ್ಳಿ. ಇದು ಮಂಗಳಕರ ಸೂಚಕವಾಗಿದೆ. ಹೀಗೆ ಮನೆ ಮುಂದೆ ಹಸು ಕಂಡರೆ ಅದಕ್ಕೆ ಆಹಾರ ಕೊಡುವುದನ್ನು ಮರೆಯಬೇಡಿ.

ತೆಂಗಿನಕಾಯಿ:

ಒಂದು ವೇಳೆ ನೀವು ಮನೆಯಿಂದ ಹೊರಗೆ ಹೋಗುವಾಗ ಮನೆಯಲ್ಲಿ ತೆಂಗಿನಕಾಯಿ ನಿಮ್ಮ ಕಣ್ಣಿಗೆ ಬಿದ್ದರೆ ಅದು ಶುಭ ಸೂಚಕ ಹೊರಟಿರುವ ಕೆಲಸ ಸಕ್ಸಸ್ ಆಗುತ್ತೆ ಎಂದೇ ಅರ್ಥ.

Comments are closed.