Real Story: ಅಮ್ಮ ಆ ಆಟೋ ಡ್ರೈವರ್ ಅನ್ನು ಕರೆಯಲೇ ಬೇಡ ಎಂದು ಹಠ ಹಿಡಿದ 12 ರ ಬಾಲಕಿ. ಅಂತದ್ದು ಆ ಆಟೋ ಡ್ರೈವರ್ ಏನು ಮಾಡಿದ್ದ ಗೊತ್ತೇ??

Real Story:ಪ್ರಪಂಚದಲ್ಲಿ ಯಾರನ್ನು ನಂಬುವುದು ಯಾರನ್ನು ನಂಬಬಾರದು ಎಂದು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಹಲವು ಕಡೆ ಆಟೋ ಡ್ರೈವರ್ ಗಳು ನಮ್ಮ ಸಹಾಯಕ್ಕೆ ಬಂದಿರುವುದನ್ನು ನೋಡಿದ್ದೇವೆ, ಆದರೆ ಕೆಲವು ಕಡೆ ಆಟೋ ಡ್ರೈವರ್ ಗಳಿಂದಲೇ ತೊಂದರೆ ಸಹ ಆಗಿದೆ.

ಇಂಥದ್ದೊಂದು ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಅಲ್ಲಿನ ಮಹಿಳೆಯೊಬ್ಬರು ಆಟೋದಲ್ಲಿ ಮನೆಗೆ ರೇಷನ್ ತಂದು, ಅವುಗಳನ್ನು ಮನೆಯೊಳಗೆ ಇಡಲು ಸಹಾಯ ಮಾಡುವಂತೆ ಆಟೋ ಡ್ರೈವರ್ ಗೆ ಕೇಳಿದರು. ಆತನು ಎಲ್ಲಾ ವಸ್ತುಗಳನ್ನು ಮನೆಯೊಳಗೆ ಇಟ್ಟ.

ಆದರೆ ಮನೆಯಲ್ಲಿದ್ದ 12 ವರ್ಷದ ಮಗುವನ್ನು ನೋಡಿ ಮಗುವಿನ ಮೇಲೆ ಕಣ್ಣಿಟ್ಟ. ಮತ್ತೊಮ್ಮೆ ಆ ಮಹಿಳೆ ಆಟೋ ಡ್ರೈವರ್ ಅನ್ನು ಕರೆದು, ರೇಷನ್ ತಂದು ಅದನ್ನು ಮನೆಯೊಳಗೆ ಇಡಲು ಹೇಳಿದಳು, ಆಕೆ ಹೊರಗೆ ಇದ್ದಿದ್ದನ್ನು ಗಮನಿಸಿದ ಡ್ರೈವರ್, 12 ವರ್ಷದ ಮಗುವಿನ ಹತ್ತಿರ ಹೋಗಿ, ಆಕೆಯ ಆ ಅಂಗಗಳನ್ನು ಮುಟ್ಟಿ ಅನುಚಿತವಾಗಿ ವರ್ತಿಸಿದ್ದಾನೆ.

ಹಾಗೆಯೇ, ಮತ್ತೆ ಏನಾದರೂ ಹೀಗೆ ಕೆಲಸ ಇದ್ದರೆ ಫೋನ್ ಮಾಡಿ ಎಂದು ಫೋನ್ ನಂಬರ್ ಅನ್ನು ಕೂಡ ಕೊಟ್ಟು ಬಂದಿದ್ದಾನೆ. ಆ ಮಹಿಳೆ ಮತ್ತೊಮ್ಮೆ ಕೆಲಸ ಇದ್ದಾಗ ಡ್ರೈವರ್ ಗೆ ಫೋನ್ ಮಾಡಬೇಕು ಎಂದುಕೊಂಡರು.

ಆದರೆ ಅವರ 12 ವರ್ಷದ ಮೊಮ್ಮಗು, ಅವನಿಗೆ ಫೋನ್ ಮಾಡೋದು ಅವನು ಕೆಟ್ಟವನು ಬೇರೆ ಯಾರಿಗಾದರೂ ಹೇಳಿ ಎಂದು ಹೇಳಿತು. ಈ ಮಾತು ಕೇಳಿ ಅವರಿಗೆ ಆಶ್ಚರ್ಯವಾಗಿ ಏನಾಯಿತು ಎಂದು ಕೇಳಿದಾಗ, ಆ ಮಗು ನಡೆದ ವಿಷಯವನ್ನೆಲ್ಲಾ ಹೇಳಿತು. ಅವರಿಗೆ ಈ ವಿಚಾರವನ್ನು ನಂಬಲು ಸಾಧ್ಯವಾಗಲಿಲ್ಲ,

ತಕ್ಷಣವೇ ಪೊಲೀಸರ ಬಳಿ ಹೋಗಿ ಆಟೋ ಡ್ರೈವರ್ ವಿರುದ್ಧ ಕಂಪ್ಲೇಂಟ್ ಕೊಟ್ಟರು. ಪೊಲೀಸರು ಆಟೋ ಡ್ರೈವರ್ ಅನ್ನು ತಕ್ಷಣವೇ ಬಂಧಿಸಿದರು. ಪೋಕ್ಸೋ ಕಾಯ್ದೆಯ ಅಡಿ ಅವನನ್ನು ಬಂಧಿಸಿ ಶಿಕ್ಷೆ ನೀಡಲಾಗಿದೆ. ಇಂಥ ವ್ಯಕ್ತಿಗಳು ಕೂಡ ಸಮಾಜದಲ್ಲಿ ಇರುತ್ತಾರೆ, ಈಗಿನ ಕಾಲದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದ ಹಾಗೆ ಆಗಿದೆ. ಇಂಥ ವ್ಯಕ್ತಿಗಳಿಗೆ ಎಂಥ ಶಿಕ್ಷೆ ಕೊಡಬೇಕು ಎಂದು ಕಮೆಂಟ್ಸ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ.

Comments are closed.