Hasta Rekha: ನಿಮ್ಮ ಅಂಗೈ ಅಡಿಯಲ್ಲಿ ಇರುವ ಈ ಒಂದೇ ರೇಖೆ ನಿಮ್ಮ ಸಂಗಾತಿ ನಿಮಗೆ ಧೋಖಾ ನೀಡುತ್ತಿದ್ದಾರೋ ಇಲ್ಲವೋ ಎಂಬುದನ್ನು ತಿಳಿಸುತ್ತದೆ ಯಾವ ರೇಖೆ ಗೊತ್ತೇ?

Hasta Rekha: ನಮ್ಮ ಕೈಯಲ್ಲಿ ಇರುವ ರೇಖೆಗಳು ನಮ್ಮ ಜೀವನಕ್ಕೆ ಸಂಬಂಧಿಸಿದ ಹಲವಾರು ಘಟನೆಗಳನ್ನ ಹಲವಾರು ವಿಚಾರಗಳನ್ನ ಸೂಚಿಸುತ್ತದೆ. ಹಸ್ತ ರೇಖೆ ಮೂಲಕ ಜೀವನದಲ್ಲಿ ಮುಂದೆ ಆಗುವ ವಿಷಯಗಳನ್ನು ಕೂಡ ತಿಳಿದುಕೊಳ್ಳಬಹುದು. ಹಾಗಾದರೆ ನಿಮ್ಮ ಕೈಯಲ್ಲಿರುವ ರೇಖೆಯು ಯಾವ ವಿಚಾರವನ್ನು ಸೂಚಿಸುತ್ತದೆ ತಿಳಿಯೋಣ.

ಕೈಯಲ್ಲಿ ಕಿರು ಬೆರಳಿನ ಕೆಳಗೆ ಸಣ್ಣ ಅಡ್ಡ ರೇಖೆಗಳು ಕಾಣಿಸುತ್ತವೆ. ಈ ರೇಖೆಗಳು ಅಂಗೈ ಹೊರಗಿನಿಂದ ಒಳಕ್ಕೆ ಬರುವಂತೆ ಇರುತ್ತವೆ ಇದನ್ನು ಮದುವೆ ರೇಖೆ ಎಂದು ಹೇಳಲಾಗುತ್ತದೆ. ಈ ರೀತಿ ಕೈಯಲ್ಲಿ ರೇಖೆ ಇದ್ದರೆ ಮದುವೆ ವಿಷಯದಲ್ಲಿ ಅವರು ಅದೃಷ್ಟವಂತರು ಎಂದೇ ಹೇಳಬಹುದು. ಜೊತೆಗೆ ಶ್ರೀಮಂತ ಸಂಗಾತಿಯನ್ನು ಕೂಡ ಪಡೆಯುತ್ತಾರೆ.

ಅದೇ ರೀತಿಯಾಗಿ ಚಂದ್ರ ಪರ್ವತದಿಂದ ಮದುವೆಯ ರೇಖೆಯೊಂದಿಗೆ ಇನ್ನೊಂದು ರೇಖೆ ಮುಂದಕ್ಕೆ ಚಲಿಸಿದರೆ ಆ ವ್ಯಕ್ತಿ ತನ್ನ ಜೀವನದ ಸಂಗಾತಿಯಿಂದ ಬಹಳಷ್ಟು ಪ್ರೀತಿ ವಿಶ್ವಾಸವನ್ನು ಪಡೆಯುತ್ತಾನೆ ಎಂದು ಅರ್ಥ ಅಂದರೆ ವೈವಾಹಿಕ ಜೀವನದಲ್ಲಿ ಸಂಗಾತಿಯೇ ಜೊತೆ ಯಾವಾಗಲೂ ಪ್ರೀತಿ ಇದ್ದೇ ಇರುತ್ತದೆ.

ಮದುವೆ ರೇಖೆ ತೆಳ್ಳಗಿದ್ದರೆ ಜನರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಂಭೀರವಾಗಿಲ್ಲ ಎಂದು ಅರ್ಥ ಜೊತೆಗೆ ಅಂತವರು ಅಕ್ರಮ ಸಂಬಂಧ ಹೊಂದಿರಬಹುದು. ಮದುವೆಯ ನಂತರವೂ ಅಕ್ರಮ ಸಂಬಂಧ ಮುಂದುವರೆಯಬಹುದು.

ಇನ್ನು ಕೈಯಲ್ಲಿ ಎರಡು ಒಂದೇ ರೀತಿಯ ಮದುವೆ ರೇಖೆ ಇದ್ದರೆ ಅಂತವರು ಎರಡು ಮದುವೆಗಳನ್ನು ಆಗುವ ಸಾಧ್ಯತೆ ಇರುತ್ತದೆ. ಆದರೆ ಇದರಲ್ಲಿ ಒಂದು ರೇಖೆಯು ತೆಳುವಾಗಿ ಮತ್ತು ಕಡಿಮೆ ಆಳವಾಗಿದ್ದರೆ ಅಂತಹವರು ಒಂದೇ ಮದುವೆಯನ್ನು ಆಗುತ್ತಾರೆ.

 ಮದುವೆಯ ರೇಖೆ ಅಸ್ಪಷ್ಟವಾಗಿದ್ದರೆ ಸಂಗಾತಿಯ ಆರೋಗ್ಯ ಅಷ್ಟು ಉತ್ತಮವಾಗಿರುವುದಿಲ್ಲ ಎಂದು ಅರ್ಥ. ಅಂಗೈಯಲ್ಲಿ ಇರುವ ಮದುವೆಯ ರೇಖೆ ಸ್ಪಷ್ಟವಾಗಿದ್ದರೆ ಮದುವೆ ಹಾಗೂ ಸಂಗಾತಿ ಎರಡು ಗಟ್ಟಿಯಾಗಿರುತ್ತದೆ ಎಂದು ಸೂಚಿಸುತ್ತದೆ.

ಮನುಷ್ಯನ ಕೈಯಲ್ಲಿ ಇರುವ ರೇಖೆಗಳ ಪೈಕಿ ಮದುವೆಯ ರೇಖೆಯ ಮೂಲಕ ಆ ವ್ಯಕ್ತಿಯ ಆರ್ಥಿಕ ಸ್ಥಿತಿ ಜೀವನದ ಸಂಗಾತಿಯ ಪ್ರೀತಿ ವಿಶ್ವಾಸ ಮೊದಲಾದವುಗಳ ಬಗ್ಗೆ ತಿಳಿದುಕೊಳ್ಳಬಹುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎನ್ನುವ ಮಾತಿದೆ. ಅಂತೆಯೇ ಜನರ ಕೈ ರೇಖೆಗಳು ಅವರ ಜೀವನದ ಹಲವು ವಿಷಯಗಳನ್ನು ಹೇಳುತ್ತವೆ.

Comments are closed.