Real Story: ಬೆಣ್ಣೆಯಂತಹ ಹೆಂಡತಿಯನ್ನು ರಾಣಿ ತರಾ ನೋಡ್ಕೋಬೇಕು ಎಂದು ಹೆಚ್ಚು ಕೂಲಿ ಮಾಡಿದ ಗಂಡ: ಆದರೆ ರಾತ್ರಿ ಬರುವ ಹೊತ್ತಿಗೆ ಹೆಂಡತಿ ರೂಮ್ ನಲ್ಲಿ ಕಂಡಿದ್ದು ಹೇಗೆ ಗೊತ್ತೆ?

Real Story: ಜೀವನದಲ್ಲಿ ಎಲ್ಲರಿಗೂ ಎಲ್ಲವೂ ಸಿಗುವುದಿಲ್ಲ. ಕೆಲವೊಮ್ಮೆ ಕೆಲವರು ಮದುವೆಯಾದರೆ ಗಂಡ, ಅತ್ತೆ ಮಾವ ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತಾರೆ. ಆದರೆ ಅಂಥವರಿಗೆ ಒಳ್ಳೆಯ ಅತ್ತೆ ಮಾವ ಸಿಗುವುದಿಲ್ಲ. ಹಣ, ವರದಕ್ಷಿಣೆ ಇಂಥಹ ವಿಚಾರಗಳಿಂದ ಮಹಿಳೆಯರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಕೂಲಿ ಕೆಲಸ ಮಾಡುತ್ತಿದ್ದ ಗಂಡನೊಬ್ಬ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಆಸೆಯಲ್ಲಿ, ಭಾನುವಾರ ಕೆಲಸ ಮುಗಿಸಿ ಮನೆಗೆ ಹೋದರೆ, ಅವನ ಹೆಂಡತಿ ಯಾವ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ ಗೊತ್ತಾ?

ಈ ಘಟನೆ ನಡೆದಿರುವುದು ಅನ್ನಮಯ್ಯ ಜಿಲ್ಲೆಯಲ್ಲಿ. 9 ತಿಂಗಳ ಹಿಂದೆ ಪ್ರವೀಣ್ ನಾಯಕ್ ಎನ್ನುವ ಹುಡುಗನಿಗೆ ನಂದಿನಿ ಎನ್ನುವ ಹುಡುಗಿಯ ಜೊತೆಗೆ ಮದುವೆಯಾಗಿತ್ತು. ಇಬ್ಬರು ಚೆನ್ನಾಗಿಯೇ ಇದ್ದರು. ನಂದಿನಿ ಆಗಾಗ ತನ್ನ ತವರು ಮನೆಗೆ ಹೋಗಿ, ಅಲ್ಲಿ ತನ್ನ ಫ್ಯಾಮಿಲಿ ಜೊತೆಗೆ ಸಮಯ ಕಳೆದು ನಂತರ ಗಂಡನ ಮನೆಗೆ ಬರುತ್ತಿದ್ದಳು. ಇಲ್ಲಿ ಗಂಡ ಮತ್ತು ಅವನ ತಂದೆ ತಾಯಿಯನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು.

ಇವರ ಸಂಸಾರ ಚೆನ್ನಾಗಿಯೇ ಸಾಗುತ್ತಿತ್ತು, ಆದರೆ ಕಳೆದ ಭಾನುವಾರ ಕೆಲಸ ಮುಗಿಸಿ ಆಕೆಯ ಗಂಡ ಮನೆಗೆ ಬಂದಾಗ, ಆಕೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ರೂಮ್ ನಲ್ಲಿ ಪತ್ತೆಯಾಗಿದ್ದಾಳೆ. ಹೆಂಡತಿಯನ್ನು ಆ ಸ್ಥಿತಿಯಲ್ಲಿ ನೋಡಿ ಗಂಡ ಶಾಕ್ ಆಗಿದ್ದ, ತಕ್ಷಣವೇ ಬಂದ ಅಕ್ಕಪಕ್ಕದ ಮನೆಯವರು, ಪೊಲೀಸರಿಗೆ ವಿಚಾರ ತಿಳಿಸಿದ್ದು, ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಗೊತ್ತಾಗಿದೆ.

ನಂದಿನಿಗೆ ಮನೆಯಲ್ಲಿದ್ದ ಅತ್ತೆ ಮಾವ ವರದಕ್ಷಿಣೆ ತರಬೇಕು ಎಂದು ಪೀಡಿಸುತ್ತಿದ್ದರು. ಮದುವೆ ಸಮಯದಲ್ಲಿ ವರದಕ್ಷಿಣೆ ಕೊಟ್ಟಿದ್ದರು ಸಹ, ಅದು ಸಾಲದೆ ಇನ್ನು ಹೆಚ್ಚು ಹಣ ಬೇಕು ಎಂದು ಪೀಡಿಸುತ್ತಿದ್ದರು, ಇದೇ ಕಾರಣಕ್ಕೆ ನಂದಿನಿ ಆಗಾಗ ತಂದೆ ಮನೆಗೆ ಹೋಗಿಬರುತ್ತಿದ್ದಳು. ಕೊನೆಗೆ ಅತ್ತೆ ಮಾವನ ಕಾಟ ತಾಳಲಾರದೆ ಈ ರೀತಿ ಮಾಡಿಕೊಂಡಿದ್ದಾಳೆ.

Comments are closed.