TTD: ಏಪ್ರಿಲ್ ನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇವರಿಗೆ ಮಾತ್ರ ಸಿಗಲಿದೆ ಉಚಿತ ಟಿಕೆಟ್ ಜೊತೆಗೆ ವಿಐಪಿ ದರ್ಶನ, ಯಾರಿಗೆ ಉಚಿತ ದರ್ಶನ  ಗೊತ್ತೇ?

TTD: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಹಾಗಾಗಿ ಟಿಟಿಡಿ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಬದಲಾವಣೆಗಳನ್ನು ಟಿಕೆಟ್ ಬುಕಿಂಗ್ ನಲ್ಲಿಯೂ ಕೂಡ ತಂದಿದೆ. ಇದೀಗ ತಿರುಪತಿ ತಿರುಮಲ ಭಕ್ತರಿಗೆ ಟಿಟಿಡಿ ಸಂತಸದ ಸುದ್ದಿಯನ್ನು ನೀಡಿದ್ದು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅಂಗಪ್ರದಕ್ಷಣಂ ಹಾಗೂ ಉರುಳು ಸೇವೆ ಟಿಕೆಟ್ ಬಿಡುಗಡೆ ಆಗಿತ್ತು. ಇದೀಗ ಟಿಟಿಡಿ ಜೂನ್ ತಿಂಗಳ ಟಿಕೆಟ್ ಕೂಡ ಬಿಡುಗಡೆ ಮಾಡಿದೆ. ಟಿಟಿಡಿ ಅಧಿಕೃತ ವೆಬ್ಸೈಟ್ ಅಥವಾ ಆಪ್ ಮೂಲಕ ನೀವು ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಅಂಗಪ್ರದಕ್ಷಣೆ ಟಿಕೆಟ್ ದಿನಕ್ಕೆ 700 ಜನರಿಗೆ ಮಾತ್ರ ಸಿಗುತ್ತದೆ ಹಾಗೂ ಇವು ಸಂಪೂರ್ಣ ಉಚಿತ.

ತಿರುಪತಿ ದೇವಸ್ಥಾನದಲ್ಲಿ ದೇವಸ್ಥಾನದ ಸುತ್ತ ಅಂಗ ಪ್ರದಕ್ಷಿಣೆ ಮಾಡುವ ಹರಕೆ ಕಟ್ಟುವವರು ಸಾಕಷ್ಟು ಜನ ಇದ್ದಾರೆ ಎಂಬುದು ಹಲವರ ನಂಬಿಕೆ. ಹಾಗಾಗಿ ಈ ಟಿಕೆಟ್ ಗಾಗಿಯೂ ಕೂಡ ಭಕ್ತಾದಿಗಳು ಕಾಯುತ್ತಾರೆ. ಒಂದು ಪ್ರದಕ್ಷಿಣೆ ಮಾಡಲು ಭಕ್ತರು ಮೊದಲು ಸ್ವಾಮಿಯ ಪುಷ್ಕರಣಿಯಲ್ಲಿ ಸ್ನಾನ ಮಾಡಬೇಕು ಒದ್ದೆ ಬಟ್ಟೆಯಲ್ಲಿ ತಿಮ್ಮಪ್ಪನ ಹುಂಡಿಯವರೆಗೆ ಅಂಗಪ್ರದಕ್ಷಣೆ ಮಾಡಬೇಕು. ಮೊದಲಿಗೆ ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ ನಂತರ ಪುರುಷರು ಅಂಗ ಪ್ರದಕ್ಷಿಣ ಮಾಡಬಹುದು.

ಇನ್ನು ಟಿಟಿಡಿ ಏಪ್ರಿಲ್ ತಿಂಗಳಿನಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ಉಚಿತ ಹಾಗೂ ವಿಶೇಷ ದರ್ಶನ ಟೋಕನ್ ಕೂಡ ಬಿಡುಗಡೆ ಮಾಡಿದೆ. ಇದನ್ನು ನೀವು ಆನ್ಲೈನ್ ಮೂಲಕವೇ ಪಡೆದುಕೊಳ್ಳಬಹುದು. ಇನ್ನು ಜೂನ್ ತಿಂಗಳಲ್ಲಿ ನಡೆಯುವ ಕಲ್ಯಾಣ, ಊಂಜಾಲ್  ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ ಇವುಗಳ ಟಿಕೆಟ್ ಕೂಡ ಬಿಡುಗಡೆ ಮಾಡಲಾಗಿದೆ.

ಮಾರ್ಚ್ 23ರ ವರೆಗೆ 58,955 ಭಕ್ತರು ತಿರುಮಲ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.; ಕಾಣಿಕೆ ರೂಪದಲ್ಲಿ ಒಂದು ತಿಂಗಳಿನಲ್ಲಿ ದೇವರ ಹುಂಡಿಗೆ 2.50 ಕೋಟಿ ರೂಪಾಯಿಗಳ ಆದಾಯ ಬಂದಿದೆ ಎಂದು ಟಿಟಿಡಿ ತಿಳಿಸಿದೆ. ಇನ್ನು ತಿರುಪತಿಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಜನಕ್ಕೂ ಸಾಕಷ್ಟು ಇತರ ಸೇವೆಗಳ ಪ್ರತ್ಯೇಕ ಟಿಕೆಟ್ ಗಳನ್ನು ಕೂಡ ಬಿಡುಗಡೆಯಾಗಿದ್ದು ಆನ್ಲೈನ್ ಮೂಲಕ ನೀವು ನಿಮಗೆ ಬೇಕಾಗಿರುವ ಸೇವೆಯ ಟಿಕೆಟ್ ಅನ್ನು ಖರೀದಿ ಮಾಡಬಹುದು.

Comments are closed.