Inspiring story:ಪುರುಷರಿಗೆ ಸವಾಲ್ ಹಾಕಿ ಬರಡು ಭೂಮಿಯಲ್ಲಿ ಚಿನ್ನ ಬೆಳೆದ ಮಹಿಳೆ: ಆಕೆಗೆ ಬರುತ್ತಿರುವ ಆದಾಯ ಕೇಳಿದ್ರೆ ಐಟಿ ಬಿಟಿ ಕಂಪನಿಯನ್ನು ಬಿಟ್ಟು ಇತ್ತ ವಾಲುತ್ತೀರಾ!

Inspiring story:ಏನನ್ನಾದರೂ ಸಾಧಿಸಬೇಕು ಅನ್ನುವ ಛಲ ನಮ್ಮಲ್ಲಿ ಇದ್ರೆ ಸಾಕು. ಅದೆಂಥ ಕಷ್ಟ ಇದ್ರೂ ಕೆಲವೊಮ್ಮೆ ಅದನ್ನು ಸಾಧಿಸಲು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಷ್ಟು ಜನರಿಗೆ ಕೃಷಿ ಭೂಮಿಯ ಮಹತ್ವವೇ ಗೊತ್ತಿಲ್ಲ ಅದರಿಂದ ಎಂತಹ ಆದಾಯವನ್ನು ಗಳಿಸಬಹುದು ಎಂಬುದರ ಕಲ್ಪನೆಯೂ ಇಲ್ಲ. ಕೇವಲ ಐಟಿ ಬಿಟಿ ಕಂಪನಿಯಲ್ಲಿ ಕೆಲಸ ಮಾಡಿದರೆ ಮಾತ್ರ ಹಣ ಗಳಿಸಬಹುದು ಎನ್ನುವ ಕಲ್ಪನೆ ಹಲವರಲ್ಲಿ ಇರುತ್ತೆ. ಆದರೆ ಭೂಮಿಯನ್ನು ಸರಿಯಾಗಿ ಬಳಸಿಕೊಂಡು ಕೃಷಿ ಮಾಡಿದರೆ ಆ ಭೂಮಿಯಲ್ಲಿ ಬೆಳೆ ಏನು ಬಂಗಾರವನ್ನೇ ಬೆಳೆಯಬಹುದು. ಹೀಗೆ ಅಸಾಧ್ಯವಾಗದನ್ನು ಸಾಧ್ಯವಾಗಿಸಿದ್ದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ನಿವಾಸಿ ಕವಿತಾ ಮಿಶ್ರ.

ಕವಿತಾ ಮಿಶ್ರಾ ಅವರು ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಎಂದು ಹಲವರಿಗೆ ಮಾದರಿಯಾಗಿದ್ದಾರೆ ಹಾಗಂತ ಅವರು ಅನ್ ಎಜುಕೇಟೆಡ್ ಲೇಡಿ ಏನು ಅಲ್ಲ, ಕಂಪ್ಯೂಟರ್ ಸೈನ್ಸ್ ಡಿಪ್ಲೋಮೋ ಜೊತೆಗೆ ಎಂಎ ಸೈಕಾಲಜಿ ಕೂಡ ಓದಿದ್ದಾರೆ ಏಳು ವರ್ಷಗಳಿಂದ ರೈತರಾಗಿ ಕೆಲಸ ಮಾಡುತ್ತಿರುವ ಕವಿತಾ ಅವರು ಎಂಟು ಎಕರೆ ಬರಡು ಭೂಮಿಯಲ್ಲಿ ಸಾವಯವಕ್ಕ ಕೃಷಿ ಮಾಡಿ ಬಂಗಾರದ ಬೆಳೆ ಬೆಳೆದಿದ್ದಾರೆ.

ಅಷ್ಟೇ ಅಲ್ಲದೆ ಕವಿತಾ ಅವರು ತಮ್ಮ ತೋಟದ ಮನೆಯಲ್ಲಿ ಹಸು, ಕುರಿ, ಕೋಳಿ ಮೊದಲಾದವುಗಳನ್ನು ಸಾಕಿದ್ದಾರೆ ವರ್ಷಕ್ಕೆ 25 ಲಕ್ಷಕ್ಕೂ ಅಧಿಕ ಲಾಭಗಳಿಸುತ್ತಾರೆ. ಕನ್ನಡ ಇಂಗ್ಲಿಷ್ ಹಿಂದಿ ಎಲ್ಲಾ ಭಾಷೆಗಳನ್ನು ಸರಾಗವಾಗಿ ಮಾತನಾಡಬಲ್ಲ ಕವಿತಾ ಅವರನ್ನು ಹಲವು ಜನ ಗುರುತಿಸಿದ್ದಾರೆ.

ಅವರು ಸಾಂದ್ರಿಕೃತ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ನಾವು ಸೀತಾಫಲ, ಮೂಸುಂಬಿ ನಿಂಬು, ಸಪೋಟ, ಮತ್ತಿ, ಶ್ರೀಗಂಧ, ರಕ್ತ ಚಂದನ ಹೀಗೆ ಹಲವಾರು ಬಗೆಯ ಗಿಡಗಳನ್ನು ಬೆಳೆಸಿದ್ದಾರೆ.

ಕೃಷಿ ಅಂದ್ರೆ ದೂರ ಸರಿಯುವ ಈಗಿನ ಕಾಲದಲ್ಲಿ ಇಂತಹ ಒಬ್ಬ ಮಹಿಳೆ ಮಾಡಿರುವ ಸಾಧನೆ ನಿಜಕ್ಕೂ ಹಲವರಿಗೆ ಮಾದರಿ. ದೊಡ್ಡ ಕಂಪನಿಗಳಲ್ಲಿ ಯಾರದು ಕೈ ಕೆಳಗೆ ಕೆಲಸ ಮಾಡುವ ಬದಲು ಕೃಷಿ ಮಾಡಿ ಕವಿತಾ ಅವರು ಹಲವರಿಗೆ ಕೆಲಸ ಕೊಟ್ಟಿದ್ದಾರೆ. ಕವಿತಾ ಅವರ ಸಾಧನೆ ಮೆಚ್ಚಲೇಬೇಕು.

Comments are closed.