Appu express: ಅಪ್ಪು ಹೆಸರಿನಲ್ಲಿ ಯಶ್ ಮತ್ತು ಪ್ರಕಾಶ್ ರಾಜ್ ಇದೊಂದು ಕೆಲಸ ಮಾಡೇಬಿಟ್ರಾ? ಏನನ್ನುತ್ತಿದ್ದಾರೆ ಗೊತ್ತಾ ಅಪ್ಪು ಫ್ಯಾನ್ಸ್!

Appu express: ರಾಕಿಂಗ್ ಸ್ಟಾರ್ ಯಶ್ ಹಾಗೂ ನಟ ಪ್ರಕಾಶ್ ರಾಜ್ ನುಡಿದಂತೆ ನಡೆದಿದ್ದಾರೆ ಎಂದು ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಇಷ್ಟಕ್ಕೂ ಆ ಇಬ್ಬರು ನಟರು ಸೇರಿ ಮಾಡಿದ್ದೇನೋ ಗೊತ್ತಾ? ಪುನೀತ್ ರಾಜಕುಮಾರ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವರು ನಮ್ಮ ಜೊತೆ ಇಲ್ಲದೆ ಇದ್ದರೂ ಅವರು ಮಾಡಿರುವ ಸಾಕಷ್ಟು ಸಮಾಜ ಕಾರ್ಯಗಳ ಮೂಲಕ ಸಿನಿಮಾದ ಅತ್ಯದ್ಭುತ ಅಭಿನಯದ ಮೂಲಕ ಎಲ್ಲರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಾದಿಯಲ್ಲಿ ಅವರ ಅಭಿಮಾನಿಗಳು ಕೂಡ ಸಾಗುತ್ತಿದ್ದಾರೆ ಅಂದರೆ ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಅದೇ ರೀತಿಯಾಗಿ ಇದೀಗ ಪುನೀತ್ ರಾಜಕುಮಾರ್ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಬಹುಭಾಷಾ ನಟ ಪ್ರಕಾಶ್ ರೈ ಕೂಡ ಸೇವಾ ಕಾರ್ಯ ಮಾಡುತ್ತಿದ್ದಾರೆ ಅದಕ್ಕಾಗಿ ಅಪ್ಪು ಎಕ್ಸ್ಪ್ರೆಸ್ ಹೆಸರಿನಲ್ಲಿ ಆಂಬುಲೆನ್ಸ್ ಗಳನ್ನು ಉಚಿತವಾಗಿ ಆಸ್ಪತ್ರೆಗಳಿಗೆ ನೀಡಿದ್ದಾರೆ. ಇದಕ್ಕೆ ತಮಿಳಿನ ನಟರಾದ ಸ್ಟಾರ್ ಸೂರ್ಯ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರು ಕೂಡ ಕೈಜೋಡಿಸಿದ್ದಾರೆ.

ಪುನೀತ್ ಅವರು ತೀರಿಕೊಂಡ ನಂತರ ಪುನೀತ್ ಪರ್ವ ಕಾರ್ಯಕ್ರಮವನ್ನು ಕರುನಾಡಿನಲ್ಲಿ ಬಹಳ ಅದ್ದೂರಿಯಾಗಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಕಾಶ್ ರಾಜ್ ಅವರ ಜೊತೆಗೆ ಯಶ್ ಕೂಡ ಪ್ರತಿ ಜಿಲ್ಲೆಗೂ ಒಂದೊಂದು ಆಂಬುಲೆನ್ಸ್ ಅನ್ನು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಕೊಡುವುದಾಗಿ ಹೇಳಿದ್ದರು. ಇದೀಗ ಪ್ರಕಾಶ್ ರಾಜ್ ಅವರು ನುಡಿದಂತೆಯೇ ನಡೆದಿದ್ದಾರೆ.

ಹೌದು 5 ಜಿಲ್ಲೆಗಳಿಗೆ ಅಪ್ಪು ಆಂಬುಲೆನ್ಸ್ ಪ್ರಕಾಶ್ ರೈ ಅವರ ಕೈಯಿಂದ ನೀಡಲಾಗಿದೆ. ಈ ಬಗ್ಗೆ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಈ ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್ ಅನ್ನು ಆಸ್ಪತ್ರೆಗಳಿಗೆ ನೀಡುವುದಕ್ಕೆ ನಟ ಯಶ್ ಸೂರ್ಯ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಸಹಾಯವನ್ನು ನೆನಪಿಸಿಕೊಂಡಿದ್ದಾರೆ. “ಅಪ್ಪು ನಮ್ಮೆಲ್ಲರ ಜೊತೆಗೆ ಶಾಶ್ವತವಾಗಿ ಉಳಿಯಬೇಕು ಅಂದ್ರೆ ಅವರು ಮಾಡಿದ ಸಮಾಜ ಸೇವೆಗಳನ್ನ ನಾವು ಮುಂದುವರಿಸಿಕೊಂಡು ಹೋಗಬೇಕು. ಹಾಗಾಗಿ ನಾನು ಪ್ರಕಾಶ್ ರಾಜ್ ಫೌಂಡೇಶನ್ ಮೂಲಕ ಅಪ್ಪು ಎಕ್ಸ್ಪ್ರೆಸ್ ಕನಸು ಕಂಡಿದ್ದೆ. ಪ್ರತಿ ಜಿಲ್ಲೆಗೂ ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್ ಸೇವೆ ನೀಡುವ ಕಾರ್ಯವನ್ನು ಈಗ ನೆರವೇರಿಸಲಾಗಿದೆ ಇದನ್ನು ಮೈಸೂರಿನಿಂದ ಆರಂಭಿಸಿದ್ದೇವೆ. ಎರಡನೇ ಹಂತದಲ್ಲಿ ಬೀದರ್, ಕಲ್ಬುರ್ಗಿ, ಕೊಳ್ಳೇಗಾಲ, ಕೊಪ್ಪಳ, ಉಡುಪಿ ಜಿಲ್ಲೆಗಳಿಗೂ ಕೂಡ ಆಂಬುಲೆನ್ಸ್ ವಿತರಿಸುತ್ತೇವೆ ಎಂದು ಪ್ರಕಾಶ್ ರಾಜ್ ತಿಳಿಸಿದ್ದಾರೆ.

ಪ್ರಕಾಶ್ ರೈ ಅವರ ಈ ಸಾಮಾಜಿಕ ಕಾರ್ಯದಲ್ಲಿ ನಟ ಚಿರಂಜೀವಿ, ಸೂರ್ಯ, ಯಶ್ ಹಾಗೂ ಕೆ ವಿ ಎನ್ ನಿರ್ಮಾಣ ಸಂಸ್ಥೆಯ ವೆಂಕಟ ಕೂಡ ಸೇರಿದ್ದಾರೆ. ಅಂಬುಲೆನ್ಸ್ ಇದುವರೆಗೂ ಬಂದಿಲ್ಲ ಎಂದು ಹಲವರು ಕಾಲುಎಳೆದಿದ್ದರೂ ಆದರೆ ಇದೀಗ ತಮ್ಮ ಮಾತನ್ನು ಚಿತ್ರತಂಡದ ಗಣ್ಯರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Comments are closed.