Karnataka Temple: ಆ ದೇವಿಗೆ ಗುಡಿ, ಪೂಜೆ,ಅರ್ಚಕರು ಏನೂ ಬೇಡವಂತೆ ಆದರೆ ಬೇಡಿದ್ದನ್ನು ಮಾತ್ರ ಭಕ್ತರಿಗೆ ಕೊಟ್ಟೆ ಕೊಡುತ್ತಾಳೆ, ದೇವಿಯ ಎದುರು ಇರುವ ಕಲ್ಲು ತಿರುಗಿದರೆ ಹರಕೆ ಇಡೇರೋದು ಪಕ್ಕಾ, ಎಲ್ಲಿದ್ದಾಳೆ ಈ ವಿಚಿತ್ರ ದೇವಿ?

Karnataka Temple: ಸಂಕಟ ಬಂದಾಗ ವೆಂಕಟರಮಣ ಅಂತ ದೇವರ ಮೊರೆ ಹೋಗುವುದು ಸಹಜ. ಲಕ್ಷಾಂತರ ಭಕ್ತಾದಿಗಳು ತಮಗೆ ಇಷ್ಟವಾದ ಬೇರೆ ಬೇರೆ ದೇವಾಲಯಕ್ಕೆ ಹೋಗಿ ತಮಗೆ ಬೇಕಾದ ಬೇಡಿಕೆಯನ್ನು ದೇವರ ಮುಂದೆ ಇಡುತ್ತಾರೆ. ದೇವರು ಯಾವುದೇ ಆಗಿರಲಿ ಭಕ್ತಿಯಿಂದ ಭಕ್ತರು ಬೇಡಿದ ಬೇಡಿಕೆಗಳನ್ನು ಈಡೇರಿಸದೆ ಇರುವುದಿಲ್ಲ. ಹೀಗೆ ಭಕ್ತರ ಎಲ್ಲಾ ಕಷ್ಟಕಾರ್ಪಣ್ಯಗಳನ್ನು ದೂರ ಮಾಡುವ ತಾಯಿ ಉಡುಸಲಮ್ಮ.

ಈ ದೇವಾಲಯದ ಮಹಿಮೆ ಅಪಾರ. ಇಲ್ಲಿ ಆಶ್ಚರ್ಯಕರವಾದ ಸಂಗತಿ ಎಂದರೆ ಈ ದೇವಿಗೆ ಗುಡಿಯೇ ಇಲ್ಲ. ಆಕೆ ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಕುಳಿತಿದ್ದಾಳೆ. ಭಕ್ತಾದಿಗಳ ಎಲ್ಲಾ ಬೇಡಿಕೆಯನ್ನು ಈಡೇರಿಸುವ ಈ ಉಡಿಸಲಮ್ಮನಿಗೆ ಗುಡಿಯನ್ನು ಯಾಕೆ ಕಟ್ಟಲಿಲ್ಲ ಎಂಬುದು ಹಲವರ ಪ್ರಶ್ನೆ. ಆದರೆ ಹೀಗೆ ಹಲವಾರು ಬಾರಿ ಆಕೆಗೆ ಗುಡಿ ಕಟ್ಟಲು ಪ್ರಯತ್ನಿಸಲಾಗಿದೆ. ಒಂದು ದಿನ ರಾತ್ರಿ ಕಟ್ಟಿದ ಗುಡಿ ಬೆಳಿಗ್ಗೆ ಆಗುವಷ್ಟುರಲ್ಲಿ ಬಿದ್ದುಹೋಗಿತ್ತು. ಆ ತಾಯಿ ನನಗೆ ಗುಡಿ ಕಟ್ಟಬೇಡಿ ಎಂದು ಮಾರ್ಮಿಕವಾಗಿ ಹೇಳುತ್ತಿದ್ದಾಳೆ ಎಂದು ಭಾವಿಸಿದ ಜನ ಈಗಲೂ ಗುಡಿ ಕಟ್ಟುವ ಪ್ರಯತ್ನ ಮಾಡುತ್ತಿಲ್ಲ.

ಉಡುಸಲಮ್ಮ ದೇವಿಯನ್ನು ನೋಡಲು ಹಲವಾರು ಭಕ್ತರು ಬರುತ್ತಾರೆ. ಮಂಗಳವಾರ ಹಾಗೂ ಶುಕ್ರವಾರ ಈ ದೇವಾಲಯದಲ್ಲಿ ಭಕ್ತಾಧಿಗಳ ದಂಡೆ ಬಂದಿರುತ್ತದೆ. ಉಡುಸಲಮ್ಮ ದೇವಿ ಬೇಡಿದ್ದೇಲ್ಲವನ್ನೂ ನೀಡುವ ಮಹಾತಾಯಿ ಇಲ್ಲಿ ಬಂದು ಹರಕೆ ಕಟ್ಟಿದರೆ ಅದೆಂತಹ ಬಯಕೆ ಇದ್ದರೂ ಆಕೆ ತೀರಿಸುತ್ತಾಳೆ.

ತಿರುಗುವ ಕಲ್ಲು;

ಉಡಿಸಲಮ್ಮ ದೇವಿಯ ಎದುರು ಒಂದು ವಿಶೇಷವಾದ ತಿರುಗುವ ಕಲ್ಲು ಇದೆ. ಭಕ್ತಾದಿಗಳು ಈ ಕಲ್ಲಿನ ಮೇಲೆ ಕುಳಿತು ತಮ್ಮ ಮನೋಭಿಲಾಷೆಯನ್ನು ದೇವಿಯ ಮುಂದೆ ಹೇಳಿಕೊಳ್ಳಬೇಕು ಆ ಹರಕೆ ಈಡೇರುವ ಹಾಗಿದ್ದರೆ ಕಲ್ಲು ತಿರುಗುತ್ತದೆ ಇಲ್ಲವಾದರೆ ಕಲ್ಲು ಸ್ಥಿರವಾಗಿ ನಿಂತಿರುತ್ತದೆ ಎಂಬುದು ಭಕ್ತರ ನಂಬಿಕೆ. ್

ದೇವಾಲಯಕ್ಕೆ ಇಲ್ಲ ಅರ್ಚಕರು:

ಉಡುಸಲಮ್ಮ ದೇವಾಲಯದ ಇನ್ನೊಂದು ವಿಶೇಷತೆ ಅಂದ್ರೆ ಇಲ್ಲಿ ಅರ್ಚಕರಾಗಲಿ ಕಾಣಿಕೆ ಹುಂಡಿಯಾಗಲಿ ಇಲ್ಲವೇ ಇಲ್ಲ ಈ ದೇವಿಗೆ ಹರಕೆ ಕಟ್ಟಿಕೊಂಡ ಭಕ್ತಾದಿಗಳೇ ಕುರಿ ಕೋಳಿ ಮೊಸರನ್ನ ಮೊದಲಾದವನ್ನು ದೇವಿಗೆ ಹರಕೆಯಾಗಿ ಸಲ್ಲಿಸುತ್ತಾರೆ.

ಎಲ್ಲಿದ್ದಾಳೆ ವಿಚಿತ್ರ ದೇವಿ:

ಉಡುಸಲಮ್ಮ ದೇವಿ ನೆಲೆಸಿರುವುದು ಚಿತ್ರದುರ್ಗ ಹೈವೇ ಶೀರಾದಿಂದ 10 ಕಿಲೋ ಮೀಟರ್ ದೂರದಲ್ಲಿರುವ ದ್ವಾರಾಳು ಎನ್ನುವ ಗ್ರಾಮದಲ್ಲಿ. ಇಲ್ಲಿಗೆ ಸಾರ್ವಜನಿಕ ಅಥವಾ ವೈಯಕ್ತಿಕ ವಾಹನಗಳನ್ನು ತೆಗೆದುಕೊಂಡು ಹೋಗಬಹುದು. ಇಲ್ಲಿ ಭಕ್ತಾದಿಗಳೇ ಬಂದು ಪೂಜೆ ಪುನಸ್ಕಾರ ಮಾಡುವುದರಿಂದ ಹಗಲಿನಲ್ಲಿ ಯಾವ ಸಮಯದಲ್ಲಾದರೂ ಭೇಟಿ ನೀಡಬಹುದು.

Comments are closed.