Real Story: ಅತಿಯಾಸೆ ಗತಿ ಕೇಡು ಎಂಬ ಗಾದೆ ಮಾತನ್ನು ನೆನಪಿಸುವಂತೆ: ವಯಸ್ಸಾಗಿದ್ದರೂ ಮುದುಕ ಕನಸಿನಲ್ಲಿ ಏನನ್ನೋ ಮಾಡಲು ಹೋಗಿ ಅದನ್ನೇ ಕತ್ತರಿಸಿಕೊಂಡ. ಕೊನೆಗೆ ಏನಾಯ್ತು ಗೊತ್ತೇ?

Real Story: ಕೆಲವೊಮ್ಮೆ ಕನಸಿನಲ್ಲಿ ನಡೆಯುತ್ತಿರುವುದನ್ನು ಆ ವ್ಯಕ್ತಿ ಅನುಕರಿಸುವುದನ್ನು ನೋಡಿರುತ್ತೇವೆ, ಕನಸಿನ ಭರದಲ್ಲಿ ನಿದ್ದೆ ಮಾಡುವಾಗ ಮಾತನಾಡುವುದು, ನಿದ್ದೆಯಲ್ಲಿ ಎದ್ದು ಓಡಾಡುವುದು ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಕನಸಿನಲ್ಲಿ ಮಾಂಸ ಕತ್ತರಿಸುತ್ತಿದ್ದೇನೆ ಎಂದು, ನಿದ್ದೆಯಲ್ಲಿ ಚಾಕುವಿನಿಂದ ತನ್ನ ದೇಹದ ಆ ಅಂಗವನ್ನೇ ಕಟ್ ಮಾಡಿಕೊಂಡಿದ್ದಾನೆ. ಈ ದುರ್ಘಟನೆ ಘಾನಾ ದಲ್ಲಿ ನಡೆದಿದೆ. ಈ ವ್ಯಕ್ತಿಯ ಹೆಸರು ಕೋಫಿ ಅಟ್ಟಾ, ಈತನಿಗೆ 47 ವರ್ಷ ವಯಸ್ಸು. ಇವನ ಹೆಂಡತಿ ಊರಿಗೆ ಹೋಗಿದ್ದರು.

ನಿದ್ದೆಯಲ್ಲಿ ಮಲಗಿ ಕನಸು ಕಾಣುತ್ತಿದ್ದ ಈ ವ್ಯಕ್ತಿ, ಚಾಕುವಿನಿಂದ ತನ್ನ ಆ ಅಂಗವನ್ನೇ ಕಟ್ ಮಾಡಿಕೊಂಡಿದ್ದು, ಬೆಳಗ್ಗೆ ಊರಿನಿಂದ ಆತನ ಪತ್ನಿ ಬಂದು ನೋಡಿದಾಗ, ರಕ್ತಸ್ರಾವ ಆಗುವುದರ ಜೊತೆಗೆ, ಗಂಡ ಆ ಅಂಗವನ್ನು ಹಿಡಿದು ಕುಳಿತಿರುವುದನ್ನು ನೋಡಿ ಗಾಬರಿಯಾಗಿದ್ದಾರೆ. ಕೊನೆಗೆ ಶಸ್ತ್ರಚಿಕಿತ್ಸೆ ಕೊಟ್ಟು, ತಕ್ಷಣವೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಅಟ್ಟಾ ಮಾತನಾಡಿ, “ನನ್ನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ, ಶಸ್ತ್ರಚಿಕಿತ್ಸೆ ಮಾಡಬೇಕು ಎಂದಿದ್ದಾರೆ.. ಹೆಚ್ಚಿನ ಚಿಕಿತ್ಸೆಗಾಗಿ, Komfo Anokye Teaching Hospital ಕರೆದುಕೊಂಡು ಬಂದಿದ್ದಾರೆ.

ಆದರೆ ನನ್ನ ಹತ್ತಿರ ಹಣವೇ ಇಲ್ಲ. ನಿದ್ದೆಯಲ್ಲಿ ನಾನು ಚೇರ್ ಮೇಲೆ ಕೂತಿದ್ದೆ, ನನ್ನ ಎದುರಲ್ಲಿ ಮಾಂಸ ಇತ್ತು. ಮಾಂಸ ಕಟ್ ಮಾಡೋದಕ್ಕೆ ನಾನು ಚಾಕು ತೆಗೆದುಕೊಂಡಿದ್ದೆ, ನಿದ್ದೆಯಿಂದ ಹೊರಗೆ ಕೂಡ ನಾನು ಹೇಗೆ ಚಾಕು ತೆಗೆದುಕೊಂಡೆ ಎಂದು ನನಗೆ ಜ್ಞಾಪಕ ಇಲ್ಲ. ನಾನು ಗೊಂದಲದಲ್ಲಿದ್ದೇನೆ. ಮಾಂಸ ಎಂದುಕೊಂಡು ಹೀಗೆ ಮಾಡಿದ್ದೇನೆ..” ಎಂದು ಅಟ್ಟಾ ಹೇಳಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆಯ ಮೂಕಕ ಆ ಅಂಗವನ್ನು ಜೋಡಿಸಿದ್ದು, 6 ವಾರಗಳ ಚಿಕಿತ್ಸೆ ನಂತರ ಈಗ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ಪೂರ್ತಿಯಾಗಿ ಹುಷಾರಾಗಲು ಇನ್ನು ಸಮಯ ತೆಗೆದುಕೊಳ್ಳುತ್ತದೆ ಎಂದಿದ್ದಾರೆ ವೈದ್ಯರು.

Comments are closed.