Gold Mining: ಗಣಿಗಾರಿಕೆ ನಡೆಯುವಾಗ ದಿಡೀರ್ ಎಂದು ಕುಸಿದ ಮಣ್ಣು: ಚಿನ್ನವನ್ನು ಮರೆತು ಅಲ್ಲಿದ್ದ ಕಾರ್ಮಿಕ ಮಾಡಿದ್ದೇನು ಗೊತ್ತೇ?? 9 ಜನ ಜೀವ ಉಳಿಸಿದ ವಿಡಿಯೋ ನೋಡಿ, ಮೈ ನಡುಗುತ್ತೆ!

Gold Mining: ಗಣಿಗಾರಿಕೆ ಹಾಗೂ ಅದರಲ್ಲಿ ಕೆಲಸ ಮಾಡುವುದು ಸುಲಭದ ಕೆಲಸವಲ್ಲ, ಅದನ್ನು ಮಾಡುವವರ ಜೀವಕ್ಕೆ ಯಾವುದೇ ಗ್ಯಾರೆಂಟಿ ಇಲ್ಲ. ಅಲ್ಲಿ ಯಾವುದೇ ಸಮಯದಲ್ಲಿ ಯಾವುದೇ ಅಪಘಾತ ಬೇಕಾದರೂ ಆಗಬಹುದು. ಒಂದು ವೇಳೆ ಗಣಿಗಾರಿಕೆ ವೇಳೆ ಏನಾದರೂ ಅಪಘಾತ ನಡೆದರೆ, ಅಲ್ಲಿರುವವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಾರೆ, ಹೇಗಾದರೂ ಪ್ರಾಣಾಪಾಯದಿಂದ ಪಾರಾಗಬೇಕು ಎಂದು ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬ ಹೀರೋ, ಗಣಿಗಾರಿಕೆ ನಡೆಯುವ ಜಾಗದಲ್ಲಿ ಎಲ್ಲವೂ ಕುಸಿಯುತ್ತಿರುವಾಗ, ತನ್ನ ಪ್ರಾಣವನ್ನು ಲೆಕ್ಕಿಸದೆ 9 ಜನರ ಪ್ರಾಣವನ್ನು ಉಳಿಸಿ ಉಳಿಸಿ ಸೂಪರ್ ಹೀರೋ ಎನ್ನಿಸಿಕೊಂಡಿದ್ದಾನೆ.

ಈ ಘಟನೆ ನಡೆದಿರುವುದು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ, ಚಿನ್ನ ಗಣಿಗಳಲ್ಲಿ ಕಾರ್ಮಿಕರ ಕೆಲಸ ಮಾಡುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಕುಸಿತವಾಗಲು ಶುರುವಾಗಿದೆ. ಹೊರಗಡೆ ಹೋಗುವ ದಾರಿಗಳು ಮುಚ್ಚಿ ಹೋಗುತ್ತಿದ್ದವು, ಆಗ ಕೆಲಸ ಮಾಡುತ್ತಿದ್ದವರೆಲ್ಲ ಹೇಗಾದರೂ ಮಾಡಿ ಹೊರಬರುವ ಪ್ರಯತ್ನದಲ್ಲಿದ್ದರು, ಆದರೆ 9 ಜನ ಚಿಕ್ಕ ಹುಡುಗರು ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು.

ಅವರಿಗೆ ಹೊರಬರಲು ಸಾಧ್ಯವಾಗದೆ ಇದ್ದಾಗ, ಒಬ್ಬ ವ್ಯಕ್ತಿ ಆ ಜಾಗಕ್ಕೆ ಬಂದು, ಅಲ್ಲಿನ ಗೇಟ್ ಬಳಿ ಇದ್ದ ಮಣ್ಣನ್ನು ಹೇಗಾದರೂ ಮಾಡಿ ತೆಗೆಯಬೇಕು ಎಂದು ಪ್ರಯತ್ನ ಮಾಡಿದ್ದಾನೆ, ಆತನಿಗೆ ಇನ್ನೊಬ್ಬ ವ್ಯಕ್ತಿಯ ಸಹಾಯ ಕೂಡ ಸಿಕ್ಕಿದೆ.

ಹೀಗೆ, ಛಲ ಬಿಡದೆ ಅವರನ್ನು ಉಳಿಸಬೇಕು ಎಂದು ಪ್ರಯತ್ನದಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಅಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಹುಡುಗರು ಸುರಕ್ಷಿತವಾಗಿ ಹೊರಗಡೆ ಬಂದಿದ್ದು, ಹೊರಗಡೆ ನಿಂತಿದ್ದವರು ಆ ಹುಡುಗರನ್ನು ನೋಡಿ ಭಾವುಕರಾಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕು, ಅಬರು ಅಲ್ಲಿಹೆ ಬಂದಿದ್ದಾರೆ, ಒಬ್ಬ ವ್ಯಕ್ತಿ ಸತತವಾಗಿ ಪ್ರಯತ್ನ ಮಾಡಿ, ಆ 9 ಹುಡುಗರನ್ನು ರಕ್ಷಿಸಿದ್ದಾನೆ.

ಈ ವ್ಯಕ್ತಿಯ ಸಾಹಸ ಪ್ರದರ್ಶನದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಈತನನ್ನು ಸೂಪರ್ ಹೀರೋ ಎಂದು ಕರೆಯುತ್ತಿದ್ದಾರೆ. ತಂದೆ ತಾಯಿ ತಮ್ಮ ಪುಟ್ಟ ಮಕ್ಕಳನ್ನು ಹೀಗೆ ಕೆಲಸಕ್ಕೆ ಹೋಗುವುದರಿಂದ ಇಂಥಹ ಘಟನೆಗಳು ಸಂಭವಿಸುತ್ತವೆ ಎಂದು ಹೇಳಬಹುದು. ನೀವು ಕೂಡ ಈ ವಿಡಿಯೋ ನೋಡಿ..

Comments are closed.