Indian Temple: ಈ ಮಹಾರಾಜರ ಮೊರೆ ಹೋದರೆ ಸಾಕು ಮಕ್ಕಳಾಗುತ್ತವೆ, ವಿಚಿತ್ರ ಎನ್ನಿಸಿದರೂ ಸತ್ಯ, ದಿನಕ್ಕೆ ಸಾವಿರಾರು ಜನ ಭೇಟಿ ನೀಡುವ  ಈ ಪವಾಡ ಕ್ಷೇತ್ರ ಯಾವುದು ಗೊತ್ತಾ?

Indian Temple: ಸಾಕಷ್ಟು ಜನ ತಮಗೆ ಇನ್ನು ಮದುವೆ ಆಗಿಲ್ಲ ಅಥವಾ ಮದುವೆಯಾಗಿ ಎಷ್ಟು ವರ್ಷ ಕಳೆದರೂ ಮಗು ಆಗಿಲ್ಲ ಎಂದು ದೇವರಿಗೆ ನಾನಾ ರೀತಿಯ ಹರಕೆ ಕಟ್ಟಿಕೊಳ್ಳುತ್ತಾರೆ. ಬೇರೆ ಬೇರೆ ಸ್ಥಳಗಳಿಗೆ ಹೋಗಿ ದೇವರನ್ನು ಪ್ರಾರ್ಥಿಸುತ್ತಾರೆ. ಆದರೆ ಇಲ್ಲೊಂದು ವಿಚಿತ್ರವಾದ ಪವಾಡ ನಡೆಯುತ್ತೆ. ಈ ರಾಜ್ಯದಲ್ಲಿ ಮಹಾರಾಜರ ಮೊರೆ ಹೋದರೆ ಸಾಕು ಮಕ್ಕಳಾಗುತ್ತವೆ.

ಮದುವೆಯಾಗುತ್ತಿಲ್ಲ ಎನ್ನುವವರು ಕೂಡ ಸಾಕಷ್ಟು ಜನ ಇಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಮದುವೆಗಾಗಿ ಹಾಗೂ ಸಂತಾನಕ್ಕಾಗಿ ನೀವು ರಾಜಸ್ಥಾನದಲ್ಲಿ ಇರುವ ಈ ಮಹಾರಾಜರ ವಿಗ್ರಹಕ್ಕೆ ಪೂಜೆ ಮಾಡಿ ಪ್ರದಕ್ಷಿಣೆ ಹಾಕಿದರೆ ಸಾಕು ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಜನಪದೀಯ ಮಾತಿನಲ್ಲಿ ಈ ಮಹಾರಾಜರ ಪ್ರತಿಮೆಯ ಹೆಸರು ಎಲೋಜಿ ಮಹಾರಾಜ್. ಇದನ್ನ ರಾಜಸ್ಥಾನದ ವಿಭಿನ್ನ ದೇವರು ಎಂದೇ ಕರೆಯಲಾಗುತ್ತದೆ. ಎಲೋಜಿ ಮಹಾರಾಜರ ಆರಾಧನೆಯ ಹಿಂದೆಯೂ ಒಂದು ಕಾರಣವಿದೆ.

ಖಿವ್ಸರ್ ಗ್ರಾಮಸ್ಥರು ಹೇಳುವಂತೆ ಎಲೋಜಿ ಮಹಾರಾಜನನ್ನು ಹೆಚ್ಚಾಗಿ ಪೂಜಿಸುವುದು ಅವಿವಾಹಿತ ಪುರುಷರು ಮತ್ತು ಮಹಿಳೆಯರು. ಎಲೋಜಿ ಮಹಾರಾಜರು ಶಿವನಿಂದ ವರವನ್ನು ಪಡೆದಿದ್ದರಂತೆ. ವಿವಾಹಿತರು ಇನ್ನು ಮಕ್ಕಳಾಗದೆ ಇದ್ರೆ ಎಲೋಜಿ ಮಹಾರಾಜರ ಸುತ್ತ ಒಂದು ಪ್ರದಕ್ಷಿಣೆ ಹಾಕಿದರೆ ಸಾಕು ಅವರ ಇಷ್ಟಾರ್ಥಗಳು ಈಡೇರುತ್ತದೆ ಎಂದು ಇಲ್ಲಿನ ಸ್ಥಳೀಯರ ನಂಬಿಕೆ.

ನಗೌರ್ ಖಿವ್ಸರ್ ಬೀಚ್ ಮಾರುಕಟ್ಟೆಯಲ್ಲಿ ಎಲೋಜಿ ಮಹಾರಾಜರ ಎರಡು ವಿಗ್ರಹಗಳು ಇವೆ. ಬಹಳ ದೂರದ ಸ್ಥಳದಿಂದಲೂ ಈ ಮಹಾರಾಜರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕಲು ಜನ ಬರುತ್ತಾರೆ. ಮದುವೆಗೆ ಒಂದು ದಿನ ಮೊದಲು ಎಲೋಜಿ ಮಹಾರಾಜರ ಪತ್ನಿ, ಹೋಲಿಕ ಸಾವನ್ನಪ್ಪಿದ್ದರು ಎಂದು ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ.

Comments are closed.