Gold Rate Today:ಚಿನ್ನದ ಬೆಲೆ ಇನ್ನೂ ಜಾಸ್ತಿಯಾಗಲಿದೆ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿಯೇ, ಹಿಂದೆಂದೂ ಕಾಣದಷ್ಟು ಬಂಗಾರದ ಬೆಲೆಯಲ್ಲಿ ಕುಸಿತ ಕಂಡಿದೆ: ಈಗ ಎಷ್ಟಿದೆ ದರ ಗೊತ್ತಾ?

Gold Rate Today: ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕುಸಿತ ಕಂಡಿದೆ. ಈಗಾಗಲೇ ಚಿನ್ನ ಹಾಗೂ ಬೆಳ್ಳಿಯ ದರ ಏರಿಳಿತ ಕಾಣುತ್ತಿದೆ ಆದರೆ ನಿನ್ನೆ ಮಾರುಕಟ್ಟೆಯಲ್ಲಿ ತುಸು ಕಡಿಮೆ ಬೆಲೆ ದಾಖಲಾಗಿದ್ದು ಚಿನ್ನ ಖರೀದಿ ಮತ್ತು ಹೂಡಿಕೆ ಮಾಡಲು ಇದೇ ಸರಿಯಾದ ಸಮಯ ಎನ್ನುತ್ತಿದ್ದಾರೆ ತಜ್ಞರು.

ಎಷ್ಟಿದೆ ದರ!?

ನಿನ್ನೆ ಚಿನ್ನದ ಬೆಲೆ 10 ಗ್ರಾಂ ಗೆ 110 ಇಳಿಕೆಯಾಗಿ 58,740ರೂಪಾಯಿಗಳಿಗೆ ತಲುಪಿದೆ. ಚಿನ್ನದ ಬೆಲೆ ಕಳೆದ ವಾರ 58, 850 ರೂಪಾಯಿಗಳಿತ್ತು.  ಚಿನ್ನದ ಬೆಲೆ ಈ ವಾರದ ಆರಂಭದಿಂದಲೇ ಕುಸಿತ ಕಂಡಿದ್ದು ಮೂರು ದಿನಗಳಲ್ಲಿ 640ಗಳಷ್ಟು ಕಡಿಮೆ ಆಗಿದೆ. ಇನ್ನು ಬೆಳ್ಳಿ ದರದಲ್ಲಿ 350 ರೂಪಾಯಿಗಳಷ್ಟು ಏರಿಕೆ ಆಗಿದ್ದು ಒಂದು ಕೆಜಿ ಬೆಳ್ಳಿಯ ಬೆಲೆ 70,110 ರೂಪಾಯಿಗಳಾಗಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟಿದೆ!

ಪ್ರತಿ ಔನ್ಸ್ ಚಿನ್ನದ ಬೆಲೆ ರೂ.1962 ಡಾಲರ್ ಗೆ ಕುಸಿತ ಕಂಡಿದೆ. ಅದೇ ರೀತಿ ಬೆಳ್ಳಿಯ ಬೆಲೆ ಪ್ರತಿ ಔನ್ಸ್ ಗೆ 23.14 ಡಾಲರ್ ಏರಿಕೆಯಾಗಿದೆ. ಅಂದ್ರೆ ಚಿನ್ನದ ಬೆಲೆ 0.60% ಕುಸಿತ ಕಂಡಿದೆ.

ಚಿನ್ನ ಖರೀದಿಸುವ ಮೊದಲು ದರಗಳನ್ನು ಪರಿಶೀಲಿಸಿ:

ಚಿನ್ನ ಅಥವಾ ಬೆಳ್ಳಿ ಕೊಂಡುಕೊಳ್ಳುವಾಗ ಅದರ ದರವನ್ನು ಪರಿಶೀಲಿಸಬೇಕು ಮಾರುಕಟ್ಟೆಯಲ್ಲಿ ಇರುವ ಬೆಲೆಗೆ ಆ ದಿನದ ಚಿನ್ನ ಸಿಗುವ ಹಾಗೆ ಗಮನವಹಿಸಬೇಕು. ನೀವು ಈ ನಂಬr 8955664433 ಗೆ ಮಿಸ್ಡ್ ಕಾಲ್ ಕೊಡುವುದರ ಮೂಲಕ ಆಯಾ ದಿನದ ಬೆಲೆಯನ್ನು ತಿಳಿದುಕೊಳ್ಳಬಹುದು. ನಿಮ್ಮ ಮೊಬೈಲ್ ಗೆ ಆ ದಿನದ ಚಿನ್ನ ಹಾಗೂ ಬೆಳ್ಳಿ ದರವನ್ನು ಮೆಸೇಜ್ ಮಾಡಲಾಗುತ್ತದೆ.

ಎಚ್ಚರವಿರಲಿ:

ಚಿನ್ನ ಖರೀದಿಸುವ ಮೊದಲು ಹಾಲು ಮಾರ್ಕ್ ಇದೆ ಎಂಬುದನ್ನು ನೋಡಿ ಖರೀದಿಸಿ ಚಿನ್ನದ ಶುದ್ಧತೆ ಪರಿಶೀಲಿಸಲು ಸರ್ಕಾರಿ ಅಪ್ಲಿಕೇಶನ್ ಕೂಡ ನೀವು ಬಳಸಬಹುದು. ಬಿ ಐ ಎಸ್ ಕೇರ್ ಅಪ್ಲಿಕೇಶನ್ ಮೂಲಕ ಚಿನ್ನದ ಶುದ್ಧತೆ ಪರಿಶೀಲಿಸಬಹುದು. ಚಿನ್ನ ನಕಲಿ ಆಗಿದ್ದರೆ ಈ ಮೂಲಕ ದೂರು ಕೂಡ ದಾಖಲಿಸಬಹುದು.

Comments are closed.