Relationship: ಇಷ್ಟು ವರ್ಷ ಆದ್ರೂ ಮದುವೆಯಾಗಿಲ್ಲ, ದೇಶವೇ ಇವರ ಹಿಂದೆ ಬಿದ್ದಿರುವಾಗ, ಈಕೆ ಮದುವೆ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ??

Relationship: ಈಗ ಸೌತ್ ಇಂಡಿಯನ್ ಸಿನಿಮಾದಲ್ಲಿ ಹೆಚ್ಚಾಗಿ ಕೇಳಿರುವರುಗ ಹೆಸರು ರೋಸ್. ಅದರಲ್ಲೂ ತೆಲುಗು ಚಿತ್ರಗಳಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಹನಿರೋಸ್ ಅವರು ಮೂಲತಃ ಕೇರಳದವರು. ಹಲವು ಸೂಪರ್ ಹಿಟ್ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ತಮಿಳಿನಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಹನಿರೋಸ್ ಅವರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಿದ್ದು, ಟಾಲಿವುಡ್ ನ ವೀರಸಿಂಹ ರೆಡ್ಡಿ ಸಿನಿಮಾ, ಇದರಲ್ಲಿ ಇವರು ಬಾಲಯ್ಯ ಅವರೊಡನೆ ಅದ್ಭುತವಾಗಿ ನಟಿಸಿದ್ದಾರೆ..

ಈ ಸಿನಿಮಾ ಸೂಪರ್ ಹಿಟ್ ಆದ ನಂತರ, ತೆಲುಗು ಜನರೆಲ್ಲರೂ ಹನಿರೋಸ್ ಅವರ ಹೆಸರನ್ನೇ ಗುನುಗುತ್ತಿದ್ದಾರೆ. ಇವರು ಇನ್ನು ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಲಿ ಎಂದು ಬಯಸುತ್ತಿದ್ದಾರೆ. ಹಾಗೆಯೇ ಹನಿರೋಸ್ ಅವರಿಗು ಸಹ ತೆಲುಗು ಜನರ ಮೇಲೆ ಪ್ರೀತಿ ಇದೆ. ವೀರಸಿಂಹ ರೆಡ್ಡಿ ಹನಿರೋಸ್ ಅವರು ನಟಿಸಿರುವ ಮೊದಲ ತೆಲುಗು ಸಿನಿಮಾ ಅಲ್ಲ, ಈ ಮೊದಲೇ ಆಲಯಂ ಹಾಗೂ ಈ ವರ್ಷ ಸಾಕ್ಷಿಗ ಸಿನಿಮಾದಲ್ಲಿ ನಟಿಸಿದ್ದರು, ಆದರೆ ಆ ಸಿನಿಮಾಗಳು ಅಂದುಕೊಂಡ ಹಾಗೆ ಯಶಸ್ಸು ಕೊಡಲಿಲ್ಲ.

ಆದರೆ ವೀರಸಿಂಹ ರೆಡ್ಡಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು, ಇದರಿಂದ ಹೈದರಾಬಾದ್ ನಲ್ಲಿ ಏನೇ ಕಾರ್ಯಕ್ರಮ ನಡೆದರು, ಮಾಲ್ ಓಪನಿಂಗ್, ಆಭರಣದ ಅಂಗಡಿ ಓಪನಿಂಗ್ ಇದೆಲ್ಲದಕ್ಕೂ ಹನಿರೋಸ್ ಅವರನ್ನೇ ಕರೆಯುತ್ತಿದ್ದಾರೆ. ಹೀಗೆ ಒಂದು ಕಾರ್ಯಕ್ರಮಕ್ಕೆ ಬಂದಿದ್ದಾಗ ಹನಿರೋಸ್ ಅವರು ತಮ್ಮ ಮದುವೆ ಬಗ್ಗೆ ಮಾತನಾಡಿರುವ ಹನಿ ರೋಸ್ ಅವರು, ಮದುವೆ ಎನ್ನುವುದು ಒಂದು ಜವಾಬ್ದಾರಿ ಅದನ್ನು ಹೊರಲು ನಾನು ಸಿದ್ಧವಾಗಿದ್ದೇನೆ ಎಂದಿದ್ದಾರೆ.

ದಾಂಪತ್ಯ ಜೀವನ ಚೆನ್ನಾಗಿರಲು, ನಾನು ಏನನ್ನು ಬೇಕಾದರೂ ಮಾಡಲು ಸಿದ್ಧವಾಗಿದ್ದೇನೆ..” ಎಂದಿದ್ದಾರೆ. ಇದೆಲ್ಲವನ್ನು ಹೇಳಿದ ಹನಿರೋಸ್ ಅವರು ತಾವು ಮದುವೆ ಆಗುವ ಹುಡುಗ ಯಾರು ಎಂದು ಹೇಳಿಲ್ಲ. ಇದೀಗ ನೆಟ್ಟಿಗರಲ್ಲಿ ಆ ಹುಡುಗ ಯಾರಿರಬಹುದು ಎನ್ನುವ ಕುತೂಹಲ ಶುರುವಾಗಿದೆ.

Comments are closed.