Cricket News: ಬೌಲರ್ ಹೊರ ಹೋಗಿ ಆಯಿತು, ಇದರ ಬೆನ್ನಲ್ಲೇ ಮತ್ತೊಬ್ಬ ಖಡಕ್ ಬ್ಯಾಟ್ಸಮನ್ ಟೂರ್ನಿಯಿಂದ ಔಟ್: ಆರ್ಸಿಬಿ ತಂಡಕ್ಕೆ ಸಂಕಷ್ಟ: ಹೊರಹೋಗಿದ್ದು ಯಾರು ಗೊತ್ತೆ?

Cricket News: 2023ರ ಐಪಿಎಲ್ ಶುರುವಾಗಿ ಇನ್ನು ಕೆಲ ಸಮಯ ಕೂಡ ಆಗಿಲ್ಲ. ಅಷ್ಟರಲಾಗಲೇ ನಮ್ಮ ಆರ್ಸಿಬಿ ತಂಡಕ್ಕೆ ಒಂದರ ನಂತರ ಒಂದು ಆಘಾತಗಳು ಎದುರಾಗುತ್ತಲೇ ಇದೆ. ತಂಡದ ಕೆಲವು ಆಟಗಾರರು ಈಗಾಗಲೇ ಇಂಜುರಿಗೆ ಒಳಗಾಗಿ ತಂಡದಿಂದ ಹಾಗೂ ಈ ವರ್ಷ ಟೂರ್ನಿಯಿಂದ ದೂರ ಉಳಿದಿದ್ದಾರೆ. ಆರ್ಸಿಬಿ ತಂಡದ ವೇಗಿ ಜೋಶ್ ಹೇಜಲ್ ವುಡ್ ಅವರು ಇಂಜುರಿ ಇಂದ ತಂಡದಿಂದ ಹೊರಗೆ ಉಳಿದಿದ್ದಾರೆ.

ಮೊನ್ನೆ ನಡೆದ ಮೊದಲ ಪಂದ್ಯದಲ್ಲಿ ಇಂಜುರಿಗೆ ಒಳಗಾದ ರೀಸ್ ಟೋಪ್ಲೆ ಅವರು ನಾಳೆ ನಡೆಯುವ ಕೆಕೆಆರ್ ತಂಡದ ವಿರುದ್ಧದ ಪಂದ್ಯವನ್ನು ಆಡುವುದಿಲ್ಲ. ಅದರ ಬೆನ್ನಲ್ಲೇ ಈಗ ರಜತ್ ಪಾಟಿದಾರ್ ಅವರು ಕೂಡ ಹಿಮ್ಮಡಿ ಇಂಜುರಿ ಕಾರಣದಿಂದ ಇಡೀ ಟೂರ್ನಿ ಇಂದಲೇ ಹೊರಗುಳಿದಿದ್ದಾರೆ. ರಜತ್ ಅವರಿಗೆ ಆಕ್ಸಿಲ್ ಹೀಲ್ ಗಾಯ ಆಗಿರುವುದರಿಂದ ಅವರಿಗೆ ಇನ್ನಷ್ಟು ಸಮಯ ವಿಶ್ರಾಂತಿಯ ಅವಶ್ಯಕತೆ ಇದೆ. ಹಾಗಾಗಿ ಈ ವರ್ಷದ ಐಪಿಎಲ್ ಟೂರ್ನಿ ಇಂದಲೇ ಅವರನ್ನು ದೂರ ಇಡಲಾಗಿದೆ.

ರಜತ್ ಪಾಟಿದಾರ್ ಅವರಿಗೆ ಇಂಜುರಿ ಆಗಿರುವ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಾಗಿತ್ತು. ಇಂಜುರಿ ಇಂದ ಆರಂಭದ ಕೆಲವು ಪಂದ್ಯಗಳನ್ನು ಆಡಲು ಸಾಧ್ಯವಾಗದೆ ಇರಬಹುದು ನಂತರ ಬರುತ್ತಾರೆ ಎಂದು ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ರಜತ್ ಅವರಿಗೆ ಗಾಯ ಇನ್ನು ಪೂರ್ತಿಯಾಗಿ ವಾಸಿಯಾಗದ ಕಾರಣ ಅವರು ಐಪಿಎಲ್ ಇಂದ ಹೊರ ಹೋಗಿದ್ದು ಈ ವಿಚಾರವನ್ನು ಖುದ್ದು ಆರ್ಸಿಬಿ ತಂಡ ಶೇರ್ ಮಾಡಿಕೊಂಡಿದ್ದು, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ, ಬೇಗ ತಂಡಕ್ಕೆ ಬನ್ನಿ ಎಂದು ಭಾವನಾತ್ಮಕ ಸಾಲು ಬರೆದಿದ್ದಾರೆ..

ಇನ್ನು ಐಪಿಎಲ್ ಶುರುವಾದ ನಂತರ ಆರ್ಸಿಬಿ ತಂಡ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅದ್ಭುತವಾದ ಫಾರ್ಮ್ ನಲ್ಲಿದೆ ಎಂದೇ ಹೇಳಬಹುದು. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಅದ್ಭುತವಾದ ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶನ ನೀಡಿ ಆರ್ಸಿಬಿ ತಂಡ ಗೆದ್ದಿದ್ದು. ಕೆಕೆಆರ್ ವಿರುದ್ಧ ಮುಂದಿನ ಪಂದ್ಯ ನಾಳೆ ನಡೆಯಲಿದ್ದು, ಈ ಪಂದ್ಯವನ್ನು ಆರ್ಸಿಬಿ ಗೆಲ್ಲುತ್ತಾ ಎಂದು ಕಾದು ನೋಡಬೇಕಿದೆ.

Comments are closed.