Marriage: ಸುಟ್ಟುಹೋಯ್ತು ವಧುವಿನ ಮುಖ; ಅದರೆ ಇದಕ್ಕೆ ಸಾಂತ್ವನ ಹೇಳುವ ಬದಲು ಜನ ಉಗಿದಿದ್ದೇ ಹೆಚ್ಚು, ಇದಕ್ಕೆ ಕಾರಣವೇ ವಧು ವರರ ಹುಚ್ಚು, ನಿಜವಾಗಿ ನಡೆದಿದ್ದೇನು ಗೊತ್ತೇ?

Marriage: ಮದುವೆ ಎನ್ನುವುದು ಹಲವರ ಕನಸು. ಮದುವೆಯ ದಿನ ಸಾಕಷ್ಟು ಮೆಮೊರೆಬಲ್ ಆಗಿರಬೇಕು ಎಂದೇ ವಧು ವರರು ಭಾವಿಸುತ್ತಾರೆ. ಮದುವೆಯ ಪ್ರತಿಯೊಂದು ಕ್ಷಣವನ್ನೂ ಕೂಡ ಎಂಜಾಯ್ ಮಾಡಲು ಬಯಸುತ್ತಾರೆ. ಆದರೆ ದುರದೃಷ್ಟವಶಾತ್ ಕೆಲವರ ಜೀವನದಲ್ಲಿ ಏನೆಲ್ಲಾ ನಡೆದುಹೋಗತ್ತೆ ನೋಡಿ.. ಸುಂದರವಾಗಿ ಮುಖಕ್ಕೆ ಮೇಕಪ್ ಮಾಡಿಕೊಂಡು ಮುಂಚಿತ್ತಿದ್ದ ವಧುವಿನ ಮುಖ ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ.

ವಧು ವರರು ಮದುವೆಯ ದಿನವನ್ನು ನೆನಪಿಟ್ಟುಕೊಳ್ಳುವಂತೆ ಮಾಡಲು ಏನೇನೋ ಸರ್ಕಸ್ ಮಾಡುತ್ತಾರೆ. ಇತ್ತೀಚಿನ ಮದುವೆ ಸಮಾರಂಭಗಳು ಸಂಪ್ರದಾಯಕ್ಕಿಂತ ಹೆಚ್ಚಾಗಿ ಆಡಂಬರವೇ ಆಗಿ ಹೋಗಿದೆ. ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸಿದಂತೆ ಫೋಟೋಶೂಟ್, ವಿಡಿಯೋ ಮಾಡಿಸಿಕೊಳ್ಳುತ್ತಾರೆ. ಹೀಗೆ ಫೊಟೋಗ್ರಾಫರ್ ಹೇಳಿದ ಅಂತ ಸ್ಪಾರ್ಕಿಂಗ್ ಗನ್ ಹಿಡಿದು ಕೇಕ್ ಮೇಲೆ ಇರುವ ಕ್ಯಾಂಡಲ್ ಹಚ್ಚೋದಕ್ಕೆ ಹೋದ ವಧುವಿಗೆ ಬ್ಯಾಕ್ ಫೈಯರ್ ಆಗಿ, ಆಕೆ ಮುಖ ಸುಟ್ಟುಹೋಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?

ವಧು-ವರರು ಸಿದ್ಧರಾಗಿ ರಿಸೆಪ್ಶನ್​ ವೇದಿಕೆಯಲ್ಲಿ ಸ್ಪಾರ್ಕಿಂಗ್ ಗನ್ ಹಿಡಿದು ನಿಂತಿದ್ದಾರೆ. ಮುಂದೆ ಕೇಕ್ ಕೂಡ ಇಡಲಾಗಿತ್ತು. ಸ್ಪಾರ್ಕಿಂಗ್ ಗನ್ ಮೂಲಕ ಕೇಕ್ ಮೇಲಿನ ಕ್ಯಾಂಡಲ್ ಹಚ್ಚಬೇಕಿತ್ತು. ಆದರೆ  ಸ್ಪಾರ್ಕ್ಲಿಂಗ್ ಬಂದೂಕನ್ನು ಕೈಯಲ್ಲಿ ಹಿಡಿದು ಡಾನ್ ಗಳಂತೆ ಫೋಸ್ ಕೊಟ್ಟಿದ್ದಾರೆ. ಫೋಟೋಗ್ರಾಫರ್ ಗೆ ಫೋಸ್ ಕೊಡುತ್ತಾ ಇಬ್ಬರೂ ಗನ್​ ಟ್ರಿಗರ್​ ಒತ್ತಿದ್ದಾರೆ. ಆದರೆ ಈ ವೇಳೆ ವಧು ಗನ್​ ಟ್ರಿಗರ್ ಒತ್ತುತ್ತಿದ್ದಂತೆ ಗನ್​ ಸ್ಫೋಟಗೊಂಡು, ಹುಡುಗಿಯ ಮುಖಕ್ಕೆ ಬೆಂಕಿ ತಗುಲಿದೆ. ಕೂಡಲೇ ಆಕೆ ಹಾರವನ್ನೇಲ್ಲಾ ತೆಗೆದು ಬಿಸಾಡಿ ನೋವಿನಿಂದ ಕಿರುಚಿದ್ದಾಳೆ. ಸುತ್ತಲೂ ಇರುವವರು ಕಂಗಾಲಾಗಿದ್ದಾರೆ. ಈ ವಿಡಿಯೋ ನೋಡಿದ ಜನರು ಇವೆಲ್ಲಾ ಬೇಕಿತ್ತಾ ಅಂತ ಚೆನ್ನಾಗಿ ಬೈದುಕೊಂಡಿದ್ದಾರೆ.  

Comments are closed.