Akshaya Tritiya:ಚಿನ್ನದಂತ ಸಂಸಾರಕ್ಕೆ ಚಿನ್ನವೆ ಬೇಕಿಲ್ಲ, ಇದೇ ಬರುವ ಅಕ್ಷಯ ತೃತೀಯ ದಿನದಂದು ಇದೊಂದು ಕೆಲಸ ಮಾಡಿದರೆ ಸಾಕು ಗಂಡ ಹೆಂಡತಿ ಹೇಗೆ ಇರ್ತಾರೆ ಗೊತ್ತಾ?

Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯ ಎನ್ನುವುದನ್ನು ಹಬ್ಬವಾಗಿ ಆಚರಿಸುತ್ತಾರೆ. ಕಷ್ಟವೋ ಸುಖವೋ ಎಷ್ಟು ಜನ ಚಿನ್ನದ ಬೆಲೆ ಎಷ್ಟೇ ಜಾಸ್ತಿ ಇದ್ದರೂ ಒಂದು ಸಣ್ಣ ಚಿನ್ನವನ್ನಾದರೂ ಸರಿ ಅಕ್ಷಯ ತೃತೀಯದ ದಿನ ಖರೀದಿ ಮಾಡುತ್ತಾರೆ ಇದಕ್ಕೆ ಮುಖ್ಯವಾದ ಕಾರಣ ಅಂದರೆ ಅಕ್ಷಯ ತೃತೀಯ ದಿನ ಏನೇ ಖರೀದಿ ಮಾಡಿದರೂ ಅದು ದ್ವಿಗುಣವಾಗುತ್ತದೆ ಎನ್ನುವ ನಂಬಿಕೆ ಇದೆ. ಇನ್ನು ಅಕ್ಷಯ ತೃತೀಯ ಅಂದರೆ ನೀವು ಕೇವಲ ಚಿನ್ನ ಖರೀದಿಸುವುದು ಮಾತ್ರವಲ್ಲ ಈ ಶುಭ ದಿನದಲ್ಲಿ ಈ ಒಂದು ಕೆಲಸವನ್ನು ಮಾಡಿದ್ರೆ ವೈವಾಹಿಕ ಜೀವನವೂ ಕೂಡ ಸಂತೋಷದಿಂದ ಇರುತ್ತದೆ. ಇದನ್ನೂ ಓದಿ: Study room vaastu: ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಕಾಡಬಹುದು ಒತ್ತಡ, ಪರೀಕ್ಷೆ ಮುಗಿಯಿತು ಅಂತ ಆರಾಮಾಗಿ ಇರಬೇಡಿ ನಿಮ್ಮ ಮಕ್ಕಳಲ್ಲಿ ಕಾಡುವ ಒತ್ತಡ ಹೋಗಲಾಡಿಸಲು ಈ ವಾಸ್ತು ಟಿಪ್ಸ್ ಅನುಸರಿಸಿ!

ಅಕ್ಷಯ ತೃತೀಯ ಅಂದ್ರೆ ಮಂಗಳಕರ ದಿನ:

ಅಕ್ಷಯ ತೃತೀಯ ವನ್ನು ಶುಭದಿನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಈ ದಿನ ಯಾವುದೇ ಮುಹೂರ್ತ ಇಲ್ಲದಿದ್ದರೂ ಕೂಡ ಶುಭ ಕಾರ್ಯವನ್ನು ಮಾಡಬಹುದು ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯದ ದಿನ ಯಾವುದೇ ವ್ಯವಹಾರ ಅಥವಾ ಉದ್ಯಮ ಪ್ರಾರಂಭಿಸಿದರು ಅದರಿಂದ ಶುಭವೇ ಆಗುತ್ತದೆ. ಹೊಸ ಮನೆ ಖರೀದಿಸುವುದಕ್ಕೆ ಹೊಸ ಸಂಬಂಧ ಕೂಡಿಸುವುದಕ್ಕೆ ಇದೇ ಸೂಕ್ತವಾದ ಕಾಲ.

ಅಕ್ಷಯ ತೃತೀಯ ದಿನ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ತಿಳಿದುಕೊಂಡು ಅದನ್ನು ಮಾಡಿದರೆ ವಿವಾಹದಲ್ಲಿ ಸಂಗಾತಿಯೊಂದಿಗೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳಬಹುದು. ಹಾಗಾದ್ರೆ ಅಕ್ಷಯ ತೃತೀಯ ದಿನ ನೀವು ಏನು ಮಾಡಬೇಕು ಗೊತ್ತಾ?

ವಿಶೇಷ ಬಣ್ಣದ ಬಟ್ಟೆ:

ಗಂಡ ಹೆಂಡತಿ ತಮ್ಮ ದಾಂಪತ್ಯ ಜೀವನದಲ್ಲಿ ಮಾಧುರ್ಯತೆಯನ್ನು ಉಳಿಸಿಕೊಳ್ಳಲು ಅಕ್ಷಯ ತೃತೀಯ ವಿಶೇಷವಾದ ಬಣ್ಣಗಳ ಬಟ್ಟೆಯನ್ನು ಧರಿಸಬೇಕು. ಅದರಲ್ಲೂ ಗುಲಾಬಿ ಮತ್ತು ಕಿತ್ತಳೆ ಬಟ್ಟೆಯನ್ನು ಧರಿಸಿದರೆ ಸಂಬಂಧದಲ್ಲಿ ಸಾಮರಸ್ಯ ಇರುತ್ತದೆ ಎಂದು ಹೇಳಲಾಗುತ್ತದೆ. ನೀವು ಗುಲಾಬಿ ಬಣ್ಣದ ಬಟ್ಟೆ ಏನಾದರೂ ಕೂಡ ಪೂಜೆ ಮಾಡಿದರೆ ಒಳ್ಳೆಯದು. ಇದನ್ನೂ ಓದಿ:Crime News: ಲಕ್ಷ ಲಕ್ಷ ಆಫರ್, ಮಾಯಾಂಗೀನಿ ಕೋಟಿ ಕೋಟಿ ಹಣ ಮಾಡಿದ್ದು ಹೇಗೆ ಗೊತ್ತೇ? ಐನಾತಿ ಮಹಿಳೆ ಬಗ್ಗೆ ತಿಳಿದರೆ, ಮೈಂಡ್ ಬ್ಲಾಕ್ ಆಗುತ್ತೆ.

ರುದ್ರಾಭಿಷೇಕ:

ಅಕ್ಷಯ ತೃತೀಯ ದಿನ ಶಿವನ ಪೂಜೆ ಮಾಡಬೇಕು ಅದರಲ್ಲಿಯೂ ರುದ್ರಾಭಿಷೇಕ ಮಾಡಿಸಿದರೆ ದಂಪತಿಗಳ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಶಿವ ದೇವಾಲಯಕ್ಕೆ ಹೋಗಿ ದಂಪತಿಗಳು ರುದ್ರಾಭಿಷೇಕ ಮಾಡಿಸಿದರೆ ಹೆಚ್ಚು ಫಲ ಸಿಗುತ್ತದೆ.

ಗೌರಿಶಂಕರರ ಪೂಜೆ:

ಅಕ್ಷಯ ತೃತೀಯದ ದಿನ ಗೌರಿಶಂಕರನನ್ನು ಪೂಜೆ ಮಾಡಿದರೆ ಗಂಡ ಹೆಂಡತಿ ಗೌರಿ ಶಂಕರರಂತೆ ಪ್ರೀತಿಯಿಂದ ಇರುತ್ತಾರೆ ಎಂದು ಹೇಳಲಾಗುತ್ತದೆ. ಈ ದಿನ ಶಿವ ಪಾರ್ವತಿಯರ ಪೂಜೆ ಮಾಡಿದರೆ ಏಳೇಳು ಜನ್ಮಕ್ಕೂ ಗಂಡ ಹೆಂಡತಿ ಜೊತೆಯಾಗಿ ಇರುತ್ತಾರೆ ಎಂದು ನಂಬಿಕೆ ಇದೆ. ಮದುವೆ ಆಗದೆ ಇರುವ ಮಹಿಳೆಯರು ತಾಯಿಗೆ ಕೆಂಪು ಶಾಲನ್ನು ಅರ್ಪಿಸಬೇಕು ಅದೇ ರೀತಿ ವಿವಾಹವಾಗಿರುವ ಮಹಿಳೆಯರು ಗೌರಿ ಮಾತಿಗೆ ಕೆಂಪು ಕುಂಕುಮವನ್ನು ಅರ್ಪಿಸಬೇಕು. ಇದನ್ನೂ ಓದಿ: Relationship: ಪಿರಿಯಡ್ಸ್ ಆಗಿರುವ ಮಹಿಳೆಯ ಜೊತೆ ಹೀಗಿರುವುದೇ ಪುರುಷತ್ವ; 13 ವರ್ಷಕ್ಕೆ ಋತುಚಕ್ರದ ಬಗ್ಗೆ ತಿಳಿದಿದ್ದ ಆ ಹುಡುಗ ಅಮ್ಮನ ಪಿರಿಯಡ್ಸ್ ಸಮಯದಲ್ಲಿ ಮಾಡಿದ್ದೇನು ಗೊತ್ತೇ?

ಮಂತ್ರ ಪಠಣೆ:

ಅಕ್ಷಯ ತೃತೀಯದ ಶುಭ ದಿನದಂದು ಓಂ ಗೌರಿ ಶಂಕರಾಯ ನಮಃ ಎನ್ನುವ ಮಂತ್ರವನ್ನು ಪಠಿಸಿ. ಶಿವಲಿಂಗಕ್ಕೆ ನೀರನ್ನು ಅರ್ಪಿಸುವಾಗ ಓಂ ನಮಃ ಶಿವಾಯ ಮಂತ್ರವನ್ನು 108 ಬಾರಿ ಪಠಿಸಬೇಕು ಈ ರೀತಿ ಮಾಡುವುದರಿಂದ ಗಂಡ ಹೆಂಡತಿಯ ದಾಂಪತ್ಯ ಜೀವನ ಇನ್ನಷ್ಟು ಗಟ್ಟಿಯಾಗಿರುತ್ತದೆ.

ಅಕ್ಷಯ ತೃತೀಯ ಅಂದರೆ ಕೇವಲ ಚಿನ್ನ ಖರೀದಿ ಮಾಡುವುದು ಮಾತ್ರವಲ್ಲ. ಚಿನ್ನದಂತ ಸಂಸಾರ ನಡೆಸುವುದಕ್ಕೆ ಚಿನ್ನವನ್ನೇ ಪತ್ನಿಗೆ ಉಡುಗೊರೆಯಾಗಿ ಕೊಡಬೇಕು ಎಂದೇನು ಇಲ್ಲ. ಈ ದಿನ ಭಕ್ತಿಯಿಂದ ಶಿವ ಪಾರ್ವತಿ ಪೂಜೆ ಮಾಡಿ ಗಂಡ ಹೆಂಡತಿ ಜೊತೆಯಾಗಿ ಇದ್ದರೆ ಜೀವನಪರ್ಯಂತ ಹಾಗೆಯೇ ಸಂತೋಷದಿಂದ ಇರುತ್ತಾರೆ ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: IRCTC Recruitment: ಬಿಗ್ ನ್ಯೂಸ್: ಯಾವುದೇ ಪರೀಕ್ಷೆ ಇಲ್ಲದೆ ಕಡಿಮೆ ಓದಿದ್ದರೂ, ನೇರವಾಗಿ ಉದ್ಯೋಗಿಗಳನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ: ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.