Kannada Film: ಒಂದು ಕಡೆ ಅಪ್ಪು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಬಿಲ್ಡ್ ಅಪ್ ಕೊಡುವ ನಟರ ನಡುವೆ ಲಾರೆನ್ಸ್ ಮಾಡಿದ್ದೇನು ಗೊತ್ತೇ??

Kannada Film: ಸಮಾಜದಲ್ಲಿ ಹಲವರು ಶ್ರೀಮಂತ ವ್ಯಕ್ತಿಗಳಿದ್ದಾರೆ, ರಾಜಕಾರಣ, ಸಿನಿಮಾ ಕ್ಷೇತ್ರ, ಉದ್ಯಮ ಹೀಗೆ ಬಹಳಷ್ಟು ಕ್ಷೇತ್ರಗಳಲ್ಲಿ ಕೆಲಸ ಮಾಡಿ, ಇಂದು ಹಣದ ವಿಚಾರದಲ್ಲಿ ಶ್ರೀಮಂತರಾಗಿ ಬೆಳೆದಿದ್ದಾರೆ. ಅವರಲ್ಲಿ ಕೆಲವರು ಮಾತ್ರ ತಾವು ಶ್ರೀಮಂತರಾಗಿ ಈ ಸ್ಥಾನಕ್ಕೆ ಏರಿರುವುದು ಜನರಿಂದ, ಜನರು ತಮಗೆ ಮಾಡಿರುವ ಸಪೋರ್ಟ್ ಇಂದ ಎಂದು ಅರ್ಥಮಾಡಿಕೊಂಡು, ಒಂದಷ್ಟು ಜನರಿಗೆ ಸಹಾಯ ಮಾಡುತ್ತಾರೆ. ಇದನ್ನೂ ಓದಿ:Agriculture: ಅಡಿಕೆ ತೋಟದಲ್ಲಿ ಕಳೆನಾಶಕಗಳನ್ನು ಬಳಸಿದ್ರೆ ಕಳೆ ಮಾತ್ರವಲ್ಲ, ಜೀವ, ತೋಟ ಎರಡನ್ನೂ ಕಳೆದುಕೊಳ್ಳಬೇಕಾಗುತ್ತೇ ಎಚ್ಚರ, ಸಂಶೋಧಕರಿಂದ ಹೊರಬಿತ್ತು ಭಯಾನಕ ಸುದ್ದಿ!

ಆ ರೀತಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುತ್ತಿರುವವರಲ್ಲಿ ರಾಘವ ಲಾರೆನ್ಸ್ ಅವರು ಕೂಡ ಒಬ್ಬರು. ನಮ್ಮ ಕನ್ನಡದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಸಹ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ, ಈಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪುನೀತ್ ಅವರು ನೋಡಿಕೊಳ್ಳುತ್ತಿದ್ದ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಕೆಲವು ನಟರು ಮಾತು ಕೊಟ್ಟಿದ್ದರು..

ಆದರೆ ಇತ್ತ ನಟ ಲಾರೆನ್ಸ್ ಅವರು ಬಹಳಷ್ಟು ಮಕ್ಕಳ ಸೇವೆ ಮಾಡುತ್ತಿದ್ದಾರೆ. ಈಗಾಗಲೇ ಲಾರೆನ್ಸ್ ಅವರು ತಮ್ಮ ಟ್ರಸ್ಟ್ ಇಂದ ಈಗಾಗಲೇ ಹಲವು ಮಕ್ಕಳ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು, ಡ್ಯಾನ್ಸ್ ಮಾಸ್ಟರ್ ಆಗು ಕೆರಿಯರ್ ಶುರು ಮಾಡಿ, ಕೊರಿಯೋಗ್ರಾಫರ್ ಆಗಿ, ನಂತರ ನಟನಾಗಿ, ನಿರ್ದೇಶಕನಾಗಿಯೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಹಾಗೆಯೇ ತಮ್ಮ ಟ್ರಸ್ಟ್ ನ ಮೂಲಕ ಬಹಳಷ್ಟು ಮಕ್ಕಳಿಗೆ ಸಹಾಯ ಮಾಡಿದ್ದಾರೆ.

ಇದೀಗ 141 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ರುದ್ರನ್ ಸಿನಿಮಾದ ಆಡಿಯೋ ಲಾಂಚ್ ನಡೆಯಬೇಕಾದ ಶುಭ ಸಂದರ್ಭದಲ್ಲಿ ಮಕ್ಕಳ ಜೊತೆಗಿನ ಫೋಟೊ ಶೇರ್ ಮಾಡಿ, ಈ ಸಂತೋಷದ ವಿಷಯವನ್ನು ತಿಳಿಸಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಇವರು ಮಾಡುತ್ತಿರುವ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣ ಕೊಡಿಸಲಿದ್ದಾರೆ. ಹಾಗೆಯೇ ಯಾವುದೇ ಮಗು ಹಣಕಾಸಿನ ಸಮಸ್ಯೆ ಇಂದ ಓದಲು ಸಾಧ್ಯವಾಗದೆ ಇದ್ದರೆ, ತಮ್ಮ ಟ್ರಸ್ಟ್ ಅನ್ನು ಕಾಂಟ್ಯಾಕ್ಟ್ ಮಾಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: TCS Job: ಟಿಸಿಎಸ್ ಗೆ 40 ಸಾವಿರಕ್ಕೂ ಅಧಿಕ ಉದ್ಯೋಗಿಗಳು ಬೇಕಂತೆ; ಉತ್ತಮ ಸಂಬಳ, ಫ್ರೆಶರ್ಸ್ ಗೆ ಆದ್ಯತೆ; ಕೂಡಲೇ ಅರ್ಜಿ ಸಲ್ಲಿಸಿದ್ರೆ ಇಲ್ಲಿ ಕೆಲಸ ಪಕ್ಕಾ ಫಿಕ್ಸ್!

Comments are closed.