Bhagya rekha:ವಿದ್ಯಾರ್ಥಿಗಳ ಕೈಯಲ್ಲಿ ಇದೊಂದು ರೇಖೆ ಇದ್ರೆ ಸಾಕು, ಕೆಲಸ ಸಿಗದೇ ಇರೋ ಮಾತೇ ಇಲ್ಲ; ನಿಮ್ಮ ಕೈನಲ್ಲೂ ಈ ರೇಖೆ ಇದ್ಯಾ ನೋಡ್ಕೊಳ್ಳಿ!

Bhagya rekha: ಚಂದ್ರ ಪರ್ವದಿಂದ ಹೊರಟ ಭಾಗ್ಯ ರೇಖೆ ಸೂಕ್ಷ್ಮ ಆಗಿದ್ದು, ನಸುಗೆಂಪು ವರ್ಣದಿಂದ ಕೂಡಿದ್ದು, ಗುರು ಪರ್ವಕ್ಕೆ ತಲುಪಿದರೆ ಒಳ್ಳೆಯ ನೌಕರಿ ಸಿಗುವ ಬಗ್ಗೆ ಸಂಶಯವೇ ಇಲ್ಲ. ಹುಟ್ಟಿದ ಊರಿನಿಂದ ಕನಿಷ್ಟ 200 km ದೂರದಲ್ಲಿ ಇವರಿಗೆ ನೌಕರಿ ಸಿಗುತ್ತದೆ. ಎರಡರಿಂದ ನಾಲ್ಕು ವರ್ಷದೊಳಗೆ ಇವರ ಉಳಿತಾಯದ ಪ್ರಮಾಣ 60 ರಿಂದ 65% ಆಗಿರುತ್ತದೆ. ಸ್ಪಲ್ಪ ಅಂಜಿಕೆ ಸ್ವಭಾವದ ಇವರು ತಾಳ್ಮೆ ಉಳ್ಳವಾರಾಗಿರುತ್ತಾರೆ. ಇದನ್ನೂ ಓದಿ: Dhana Rekha: ಕೈಯಲ್ಲಿ ಸೊಗಸಾದ ಧನ ರೇಖೆ ಒಂದು ಇದ್ದು ಬಿಟ್ಟರೆ ಯೋಚನೆ ಇಲ್ಲದೆ ಆರಾಮವಾಗಿ ಇದ್ದು ಬಿಡಿ. ಹಾಗಾದರೆ ಏನಿದು ಧನರೇಖೆ ?

ವರ್ಷಗಳು ಕಳೆದಂತೆ ಇವರಿಗೆ ದೊಡ್ಡ ದೊಡ್ಡ ಹುದ್ದೆ, ಅಧಿಕಾರ ಸಿಗುತ್ತದೆ. ಕಂಪನಿಯ ಆಡಳಿತ ಮಂಡಳಿ ಇವರನ್ನು ತುಂಬಾ ನೆಚ್ಚಿಕೊಂಡಿರುವುದು ಕಂಡು ಬರುತ್ತದೆ. ಕಂಪನಿಯ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುವ ಜಾಣ್ಮೆ ಇವರಿಗೆ ಇರುತ್ತದೆ. ಇವರ ಜಾಣ್ಮೆಗೆ ಪ್ರತಿಸ್ಪರ್ಧಿಯೇ ಇರುವುದಿಲ್ಲ. ಯಾವುದಾದರೊಂದು ಹೊಸ ವಿಷಯವನ್ನು ಕೈಗೆತ್ತಿಕೊಂಡಾಗ ಒಂದು ದೈವ ಸಹಾಯ ಇವರ ಅನುಭವಕ್ಕೆ ಬರುತ್ತದೆ. ಈ ದೈವ ಸಹಾಯದಿಂದ ಕೆಲವು ಅನೂಹ್ಯ ಯೋಚನೆಗಳು ಮಾರ್ಗದರ್ಶನ ಮಾಡುತ್ತವೆ. ನಿನ್ನೆ ಅಷ್ಟೆಲ್ಲ ಯೋಚಿಸಿದಾಗ ಮೂಡದ ಪರಿಹಾರ ಈವತ್ತು ಎಲ್ಲಿಂದ ಬಂತು ಎಂದು ಸ್ವತಃ ಅವರಿಗೇ ಆಶ್ಚರ್ಯವಾಗುತ್ತದೆ.

ಇವರಿಗೆ ತೋರ್ಪಡಿಕೆಯ ದೈವ ಭಕ್ತಿ ಇರುವುದಿಲ್ಲ. ದೇವಸ್ಥಾನಗಳಿಗೆ ಅವರಾಗಿ ಹೋಗುವುದಿಲ್ಲ. ಯಾರಾದ್ರೂ ಕರೆದರೆ ಇಲ್ಲಾ ಎನ್ನದೇ ಹೋಗುತ್ತಾರೆ. ತನ್ನ ಕ್ಷೇತ್ರದಲ್ಲಿ ತುಂಬಾ ದೊಡ್ಡ ಹುದ್ದೆಯಲ್ಲಿ ಇದ್ದರೂ ಯಾರಿಗೂ ತೋರ್ಪಡಿಸುವುದಿಲ್ಲ. ಕಂಪನಿಯ ಯಾವ ಗೊಂದಲಗಳೇ ಇದ್ದರೂ ಮನೆಯವರಿಗೆ ಗೊತ್ತಾಗಲು ಆಸ್ಪದ ಕೊಡುವುದಿಲ್ಲ. ಇವರೊಂದಿಗೆ ಜೀವನ ಮಜವಾಗಿರುತ್ತದೆ. ಇವರು ಅತಿರೇಕದ ಯಾವ ಭಾವನೆಗಳನ್ನೂ ವ್ಯಕ್ತಪಡಿಸುವುದಿಲ್ಲ. ಕೆಲವು ಸಲ ಇವರಿಗೆ ಭಾವನೆಗಳೇ ಇಲ್ಲವೇನೋ ಎನ್ನುವಷ್ಟು ನಿರ್ಲಿಪ್ತರಾಗಿ ಇರುತ್ತಾರೆ.
ಇಷ್ಟೆಲ್ಲಾ ಜಾಣ್ಮೆ ಇದ್ದರೂ ಈ ರೇಖೆ ಉಳ್ಳವರು ಸ್ವಉದ್ಯೋಗದ ಕಡೆ ಗಮನ ನೀಡುವುದು ತುಂಬಾ ಕಡಿಮೆ.

ಒಂದೊಮ್ಮೆ ಪ್ರಯತ್ನ ಮಾಡಿದರೂ ಯಶಸ್ವಿ ಆಗುವ ಸಾಧ್ಯತೆ ಬಹಳ ಕಡಿಮೆ. ಒಂದು ವೇಳೆ ಸ್ವಂತ ಉದ್ದಿಮೆ ಪ್ರಾರಂಭಿಸಿದರೂ ’ನೀನಿಷ್ಟೆಲ್ಲಾ ವಿದ್ಯಾಭ್ಯಾಸ ಮಾಡಿಯೂ ಇಂತಹ ವ್ಯಾಪಾರ ಮಾಡುತ್ತೀಯ” ಎಂದು ಜನರು ಆಡಿಕೊಳ್ಳುವಂತಹ ಉದ್ದಿಮೆ ಅದಾಗಿರುತ್ತದೆ. ಅಂದರೆ ಆದಾಯ ಚೆನ್ನಾಗಿದ್ದರೂ ಬಹಳ ಬುದ್ದಿವಂತಿಕೆ (I.Q) ಉಪಯೋಗಿಸುವಂತಹ ಉದ್ದಿಮೆ ಅದಾಗಿರುವುದಿಲ್ಲ. ಇವರ ಜಾಣ್ಮೆ ಏನಿದ್ದರೂ ಪ್ರಕಾಶಕ್ಕೆ ಬರುವುದು ನೌಕರಿಯಲ್ಲಿ. ಇದನ್ನೂ ಓದಿ: UPI Transfer: ಇಂಟರ್ನೆಟ್ ಇಲ್ಲದೆ, UPI ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?? ಅದು ಉಚಿತವಾಗಿ. ಎಷ್ಟು ಸುಲಭ ಗೊತ್ತೇ??

Comments are closed.